ಯಾವುದೇ ಭಯಬೇಡ, ಮುನ್ನೆಚ್ಚರಿಕೆ ಇರಲಿ ಚಿಕಿತ್ಸೆಗೆ ಎಲ್ಲ ಸಿದ್ಧತೆ: ಜಿಲ್ಲಾಧಿಕಾರಿ

ಹಾವೇರಿ: ಜೂನ್ 30:  ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್-19 ಸೋಂಕಿನಿಂದ ಇಬ್ಬರು ಮಹಿಳೆಯರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 49 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 118 ಕೋವಿಡ್ ಪಾಸಿಟಿವ್ ಪ್ರಕರಣ  ಪತ್ತೆಯಾಗಿದ್ದು, ಈ ಪೈಕಿ 25 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 91 ಪ್ರಕರಣಗಳು ಸಕ್ರಿಯವಾಗಿವೆ. ಇಬ್ಬರು ಮರಣಹೊಂದಿದ್ದಾರೆ ಎಂದು ತಿಳಿಸಿದರು.

ಕೋವಿಡ್ ಆಸ್ಪತ್ರೆಯ ಐ.ಸಿ.ಯು.ನಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಶಿಗ್ಗಾಂವ ದೇಸಾಯಿ ಓಣಿಯ 75 ವರ್ಷದ ಮಹಿಳೆ(ಕ-8295) ಜೂನ್ 20 ರಂದು ಆಸ್ಪತ್ರೆಗ ದಾಖಲಾಗಿದ್ದು, ಜೂನ್ 30ರ ಮಂಗಳವಾರ ಬೆಳಿಗ್ಗೆ 6-30ಕ್ಕೆ ಮರಣಹೊಂದಿದ್ದಾರೆ ಹಾಗೂ ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದ ಬಸವೇಶ್ವರನಗರದ ನಿವಾಸಿ 60 ವರ್ಷದ  ವೃದ್ಧೆ(ಕ-13268) ಕೆಮ್ಮು ಮತ್ತು ಜ್ವರದ ಹಿನ್ನೆಲೆಯಲ್ಲಿ  ಜೂನ್ 24 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜೂನ್ 27 ರಂದು ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಐ.ಸಿ.ಯು.ನಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೂನ್ 30ರ ಬೆಳಿಗ್ಗೆ 7-30ಕ್ಕೆ ಮರಣ ಹೊಂದಿದ್ದಾರೆ. ಎರಡು ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಪ್ರಮಾಣಿಕೃತ ಮಾರ್ಗಸೂಚಿಯಂತೆ ಇವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.

49 ಪ್ರಕರಣ ದೃಢ: ಜೂನ್ 30 ಐದು ಜನ ಆಶಾ ಕಾರ್ಯಕತರ್ೆಯರು ಹಾಗೂ ಓರ್ವ ಗ್ರಾಮ ಲೆಕ್ಕಿಗ ಸೇರಿ 49 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಶಿಗ್ಗಾಂವ ತಾಲೂಕಿನ 27 ಜನರಿಗೆ, ಹಿರೇಕೆರೂರು ತಾಲೂಕಿನ 15 ಜನರಿಗೆ, ಹಾನಗಲ್ ತಾಲೂಕಿನ ನಾಲ್ಕು ಜನರಿಗೆ, ಹಾವೇರಿ, ಸವಣೂರು  ಹಾಗೂ ರಾಣೇಬೆನ್ನೂರ ತಾಲೂಕಿನ ತಲಾ ಓರ್ವರಿಗೆ ಗೊಳಗೊಂಡಂತೆ 49 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದರು.

ಭಯ ಬೇಡ: ಕೋವಿಡ್ ಪ್ರಕರಣಗಳು ಹೆಚ್ಚಳವಾಗಿವೆ ಎಂದು ಸಾರ್ವಜನಿಕರು ಭಯಪಡುವುದು ಬೇಡ. ಆದರೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಮಾಸ್ಕ್ ಧರಿಸಿ. ಬೇರೆ ಜಿಲ್ಲೆಗೆ ಹೊಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಪ್ರಕರಣಗಳು ಇವೆ. ಅಂದಾಜು ನಾಲ್ಕು ಸಾವಿರ ಪ್ರಕರಣಗಳು ಜುಲೈ- ಆಗಸ್ಟ್ ಮಾಹೆಯಲ್ಲಿ ಹೆಚ್ಚಾಗಬಹುದು. ಎಷ್ಟೇ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾದರೂ  ಚಿಕಿತ್ಸೆಗಾಗಿ ಅಗತ್ಯ ವೈದ್ಯಕೀಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 

     ಯಾವುದೇ ಔಷಧಿಯ ಕೊರತೆ ಇರುವುದಿಲ್ಲ. ಸಕರ್ಾರದ ಮಾರ್ಗಸೂಚಿಯಂತೆ ಎಲ್ಲವನ್ನು ಅನುಸರಿಸಲಾಗುತ್ತದೆ. ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸವಣೂರು, ಹಿರೇಕೆರೂರು  ಹಾಗೂ ರಾಣೇಬೆನ್ನೂರು ತಾಲೂಕಿನಲ್ಲಿ ಕೋವಿಡ್ ಕೇರ್ ಆಸ್ಪತ್ರೆಗಳನ್ನು ಸಿದ್ಧತೆಮಾಡಿಕೊಳ್ಳಲಾಗಿದೆ. ಎಲ್ಲ ತಾಲೂಕಿನಲ್ಲಿ ಕೋವಿಡ್ ಆಸ್ಪತ್ರೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 1200 ರಿಂದ 1400 ಹಾಸಿಗೆಗಳನ್ನು ಸಿದ್ಧಮಾಡಿಕೊಳ್ಳುತ್ತೇವೆ.  ಜಿಲ್ಲೆಯಲ್ಲಿ 19 ಖಾಸಗಿ ಆಸ್ಪತ್ರೆಗಳಿವೆ , ಸದರಿ ವೈದ್ಯರೊಂದಿಗೆ ಮಾತುಕತೆ ನಡೆಸಲಾಗಿದೆ. ಜಿಲ್ಲೆಯಲ್ಲೇ ಕೋವಿಡ್ ಮಾದರಿ ಪರೀಕ್ಷೆಗೆ ಲ್ಯಾಬ್ ಕಾರ್ಯ ಆರಂಭವಾಗಿದೆ.

 ಒಂದುವಾರ ಕಿಮ್ಸ್ನ ವೈದ್ಯರು ಪರೀಕ್ಷೆಯ ಮೇಲುಸ್ತುವಾರಿ  ವಹಿಸಲಿದ್ದಾರೆ. ನಂತರ ಸ್ವತಂತ್ರವಾಗಿ ಪರೀಕ್ಷೆ ನಡೆಯಲಿದೆ. ನಿಗಧಿಯಂತೆ ದಿನಕ್ಕೆ 300ರಂತೆ ಸ್ಥಳೀಯವಾಗಿ ಗಂಟಲು ಮಾದರಿಯ ಪರೀಕ್ಷೆ ನಡೆಸಲಾಗುವುದು. ಸದ್ಯ ಲ್ಯಾಬ್ನಿಂದ ಜಿಲ್ಲೆಯ 1800 ಮಾದರಿಗಳ ವರದಿ ಬರಬೇಕಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ  ಈವರೆಗೆ 31 ಕಂಟೈನಮೆಂಟ್ ವಲಯಗಳಾಗಿ ಘೋಷಿಸಲಾಗಿದ್ದು, ಈ ಪೈಕಿ 13 ವಲಯಗಳನ್ನು ಡಿ ನೋಟಿಪೈ ಮಡಲಾಗಿದೆ. 

 ಹೊಸದಾಗಿ ಇಂದು 10 ಕಂಟೈನ್ಮೆಂಟ್ ಜೋನ್ ಘೋಷಿಸಲಾಗಿದ್ದು, ಒಟ್ಟಾರೆ 28 ಕಂಟೈನ್ಮೆಂಟ್ ಜೋನ್ಗಳು ಮುಂದುವರೆದಿವೆ ಎಂದು ತಿಳಿಸಿದರು.

ಇಂದಿನ ಸೋಂಕಿತರ ಪ್ರವಾಸ ಹಿನ್ನೆಲೆ:

ಕ-9412 ಪ್ರಾಥಮಿಕ ಸಂಪರ್ಕದಿಂದ ಶಿಗ್ಗಾಂವಿಯ 41 ವರ್ಷದ ಪುರುಷ(ಊಗಿಖ-70),  ಆರು ವರ್ಷದ ಮಗು (ಊಗಿಖ-76), 28 ವರ್ಷದ ಮಹಿಳೆ(ಊಗಿಖ-77), 65 ವರ್ಷದ ಮಹಿಳೆ (ಊಗಿಖ-78), 35 ವರ್ಷದ ಪುರುಷ(ಊಗಿಖ-79) ,  ಸವಣೂರ ಪಟ್ಟಣದ ಕಂಟೈನನ್ಮೆಂಟ್ ಪ್ರದೇಶದ 64 ವರ್ಷದ ಪುರುಷ(ಊಗಿಖ-80), 36 ವರ್ಷದ ಮಹಿಳೆ(ಊಗಿಖ-81), 60 ವರ್ಷದ ಮಹಿಳೆ (ಊಗಿಖ-82), 55 ವರ್ಷದ ಮಹಿಳೆ (ಊಗಿಖ-83), 71 ವರ್ಷದ ಪುರುಷ (ಊಗಿಖ-84), 35 ವರ್ಷದ ಪುರುಷ(ಊಗಿಖ-85), 45 ವರ್ಷದ ಪುರುಷ(ಊಗಿಖ-86), 26 ವರ್ಷದ ಪುರುಷ(ಊಗಿಖ-87), 28 ವರ್ಷದ (ಊಗಿಖ-88), 25 ವರ್ಷದ ಪುರುಷ (ಊಗಿಖ-90), 23 ವರ್ಷದ ಮಹಿಳೆ (ಊಗಿಖ-110), 37 ವರ್ಷದ ಮಹಿಳೆ (ಊಗಿಖ-111), 37 ವರ್ಷದ ಮಹಿಳೆ (ಊಗಿಖ-112), 43 ವರ್ಷದ ಪುರುಷ(ಊಗಿಖ-113), 33 ವರ್ಷದ ಮಹಿಳೆ (ಊಗಿಖ-114), 30 ವರ್ಷದ ಮಹಿಳೆ(ಊಗಿಖ-115), 37 ವರ್ಷದ ಪುರುಷ (ಊಗಿಖ-116), 23 ವರ್ಷದ ಪುರುಷ (ಊಗಿಖ-71), 25 ವರ್ಷದ ಪುರುಷ (ಊಗಿಖ-72), 48 ವರ್ಷದ ಪುರುಷ (ಊಗಿಖ-73), 20 ವರ್ಷದ ಪುರುಷ (ಊಗಿಖ-74), 36 ವರ್ಷದ ಪುರುಷ (ಊಗಿಖ-75) ಸೋಂಕು ದೃಢಪಟ್ಟಿದೆ.

ಹಿರೇಕೆರೂರು ತಾಲೂಕಿನ ಪುರಪಾಂಡಿಕೊಪ್ಪದ 45 ವರ್ಷದ ಮಹಿಳೆ (ಊಗಿಖ-95), ಯಮ್ಮಿಗನೂರಿನ 45 ವರ್ಷದ ಆಶಾ ಕಾರ್ಯಕತರ್ೆ (ಊಗಿಖ-96), ಸತ್ತಕೋಟೆಯ 42 ವರ್ಷದ ಆಶಾಕಾರ್ಯಕತರ್ೆ (ಊಗಿಖ-97), ನೂಲಗೇರಿಯ 41 ವರ್ಷದ ಮಹಿಳೆ (ಊಗಿಖ-98), ಕೊಡದ 49 ವರ್ಷದ ಆಶಾ ಕಾರ್ಯಕತರ್ೆ (ಊಗಿಖ-99) ಹಾಗೂಗುಡ್ಡದ ಮಾದಾಪೂರದ 40 ವರ್ಷದ ಆಶಾ ಕಾರ್ಯಕತರ್ೆ(ಊಗಿಖ-107), ಮೇದೂರಿನ 25 ವರ್ಷದ ಮಹಿಳೆ(ಊಗಿಖ-108), ಮಾಸೂರಿನ 34 ವರ್ಷದ ಮಹಿಳೆ(ಊಗಿಖ-109)ಗೆ ಸೋಂಕು ದೃಢಪಟ್ಟಿದೆ ಹಾಗೂ ಕ-9546 ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ  ರಾಮತೀರ್ಥ ಗ್ರಾಮದವರಾದ  27 ವರ್ಷದ ಪುರುಷ (ಊಗಿಖ-100), 25 ವರ್ಷದ ಪುರುಷ (ಊಗಿಖ-101), 21 ವರ್ಷದ ಪುರುಷ (ಊಗಿಖ-102), 55 ವರ್ಷದ ಪುರುಷ (ಊಗಿಖ-103), 30 ವರ್ಷದ ಪುರುಷ (ಊಗಿಖ-104), 32 ವರ್ಷದ ಪುರುಷ (ಊಗಿಖ-105) ಹಾಗೂ ರಟ್ಟಿಹಳ್ಳಿಯ  49 ವರ್ಷದ ಪುರುಷ (ಊಗಿಖ-106) ಸೋಂಕು ತಗುಲಿದೆ.

ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದ 27 ವರ್ಷದ ಪುರುಷ(ಊಗಿಖ-91), ಹಾನಗಲ್ನ 37 ವರ್ಷದ ಆಶಾ ಕಾರ್ಯಕತರ್ೆ (ಊಗಿಖ-91), ಕಮತಗೇರಿ 33 ವರ್ಷದ ಆಶಾ ಕಾರ್ಯಕತರ್ೆ ಊಗಿಖ-93), ಕಂಚಿನೆಗಳೂರಿನ 24 ವರ್ಷದ ಪುರುಷ (ಊಗಿಖ-117) ಇವರಿಗೆ ಸೋಂಕು ದೃಢಪಟ್ಟಿದೆ.

  ಸವಣೂರ ತಾಲೂಕಿನ ಹುರಳಿಕೊಪ್ಪದ 25 ವರ್ಷದ ಪುರುಷನಿಗೆ (ಊಗಿಖ-89) ಕ-9412 ಸಂಪರ್ಕದಿಂದ ಹಾವೇರಿ ತಾಲೂಕಿ ಗುತ್ತಲದ 43 ವರ್ಷದ ಪುರುಷನಿಗೆ (ಊಗಿಖ-94) ಕ-9412 ಸಂಪರ್ಕದಿಂದ ಹಾಗೂ ರಾಣೇಬೆನ್ನೂರ ತಾಲೂಕಿನ ಹಲಗೇರಿಯ 32 ವರ್ಷದ ಮಹಿಳೆಗೆ (ಊಗಿಖ-118) ಕ-9546 ಸೋಂಕಿತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರಿಂದ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 

        ಸೋಂಕಿತರನ್ನು ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಸಂಪರ್ಕದ ಪತ್ತೆ ಕಾರ್ಯ ಮುಂದುವರೆದಿದೆ. ಸೋಂಕಿತರ ವಾಸಿಸುವ 100 ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಪರಿವತರ್ಿಸಿದೆ. 200 ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಘೋಷಿಸಿದೆ. ಆಯಾ ತಾಲೂಕಿನ ತಹಶೀಲ್ದಾಗಳನ್ನು ಇನ್ಸಿಡೆಂಟ್ಂಟಲ್ ಕಮಾಂಡರ್ಗಳಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ ಉಪಸ್ಥಿತರಿದ್ದರು.