ರಾಷ್ಟ್ರಮಟ್ಟದಲ್ಲಿ ಎನ್ ಆರ್ ಸಿ ಜಾರಿಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ; ಕೇಂದ್ರ ಸರ್ಕಾರ

ನವದೆಹಲಿ, ಫೆ 4 :        ದೇಶಾದ್ಯಂತ  ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ)  ಜಾರಿಗೊಳಿಸುವ  ಸಂಬಂಧ  ಯಾವುದೇ ನಿರ್ಧಾರವನ್ನು  ಇನ್ನೂ  ಕೈಗೊಂಡಿಲ್ಲ ಎಂದು  ಕೇಂದ್ರ ಸರ್ಕಾರ   ಮಂಗಳವಾರ ಲೋಕಸಭೆಗೆ  ಸ್ಪಷ್ಟಪಡಿಸಿದೆ.

ಕೇಂದ್ರ ಗೃಹ ವ್ಯವಹಾರಗಳ  ಖಾತೆ ರಾಜ್ಯ ಸಚಿವ  ನಿತ್ಯಾನಂದ ರೈ  ಪ್ರಶ್ನೆಯೊಂದಕ್ಕೆ  ಲೋಕಸಭೆಗೆ  ನೀಡಿರುವ  ಲಿಖಿತ ಉತ್ತರದಲ್ಲಿ  ಈ ವಿಷಯ ತಿಳಿಸಿದ್ದಾರೆ.

ಈವರೆಗೆ  ಭಾರತೀಯ ನಾಗರೀಕರ ರಾಷ್ಟ್ರೀಯ ನೋಂದಣಿ(  ಎನ್ ಆರ್  ಐ ಸಿ) ಯನ್ನು   ಸಿದ್ದಪಡಿಸಲು ಯಾವುದೇ   ನಿರ್ಧಾರವನ್ನು   ಸರ್ಕಾರ  ಕೈಗೊಂಡಿಲ್ಲ   ಸಚಿವ  ರಾಯ್  ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.