ಘಟನೆಯ ತನಿಖೆಯನ್ನು ನ್ಯಾಯಾಂಗ ಅಥವಾ ಸಿಬಿಐ ನಿಂದ ಮಾಡಿಸಬೇಕು
ಕಾರವಾರ 25: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಕಾರಣರಾದ ಐಆರ್ ಬಿ ಕಂಪನಿಯ ದೂರು ದಾಖಲಾದರೂ ಯಾರನ್ನು ಪೊಲೀಸರು ಬಂಧಿಸಿಲ್ಲ ಎಂದು ಪ್ರಣವಾನಂದ ಸ್ವಾಮಿ ಆರೋಪ ಮಾಡಿದರು.
ಕಾರವಾರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು ಅಂಕೋಲಾ ತನಿಖಾಧಿಕಾರಿ, ಎಸ್ ಎಚ್ ಒ ಹಾಗೂ ಪೊಲೀಸರು ಸಂವಿಧಾನ ವಿರೋಧಿಯಾಗಿ ನಡೆದು ಕೊಂಡಿದ್ದಾರೆ ಎಂದರು. ಕಾರಣ ಈ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಬೇಕು ಎಂದು ಆಗ್ರಹಿಸಿದರು. ಐ ಆರ್ ಬಿ ಕಂಪನಿಯವರು ಶಿರೂರು ದುರಂತದಲ್ಲಿಸಾವನ್ನಪ್ಪಿದ 11 ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದರು. ಎನ್ ಎಚ್ 66 ಚತುಷ್ಪಥ ಯೋಜನೆ 560 ಕೋಟಿ ಯಿಂದ ಪ್ರಾರಂಭವಾಗಿ 2600 ಕೋಟಿ ತಲುಪಿದೆ. ಇದು ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಹಣ ಮಾಡುವ ಯೋಜನೆಯಾಗಿದೆ. ಆದರೆ ಹೆದ್ದಾರಿ ಅವೈಜ್ಞಾನಿಕವಾಗಿದೆ. ಜನರ ಪ್ರಾಣ ಹೋಗಿದೆ. ಕೇಂದ್ರ ಸಾರಿಗೆ ಸಚಿವರ ಮಗನ ಕಂಪನಿಯಾಗಿರುವ ಕಾರಣ ಯಾರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಗಡ್ಕರಿಗೆ ಪ್ರಧಾನಿಯಾಗುವುದಕ್ಕಿಂತ ಸಾರಿಗೆ ಸಚಿವರಾಗಿ ಇರುವುದರಲ್ಲೇ ಖುಷಿಪಡಲು ಹಲವು ಕಾರಣಗಳಿಗೆ ಎಂದು ಪ್ರಣವಾನಂದ ಸ್ವಾಮಿ ಆರೋಪಿಸಿದರು.ನ್ಯಾಯ ಸಿಗುವ ಲಕ್ಷಣ ಇಲ್ಲ :ಪೊಲೀಸರಿಂದ ನ್ಯಾಯಾ ಸಿಗುವ ಲಕ್ಷಣ ಇಲ್ಲ. ಕೆಲ ರಾಜಕಾರಣಿಗಳು, ಅಧಿಕಾರಿಗಳು ಕಂಪನಿ ಜೊತೆ ರಾಜಿಯಾಗಿದ್ದಾರೆ. ಹಾಗಾಗಿಶಿರೂರು ಘಟನೆಯ ತನಿಖೆಯನ್ನು ನ್ಯಾಯಾಂಗ ಅಥವಾ ಸಿಬಿಐ ನಿಂದ ಮಾಡಿಸಬೇಕು ಎಂದರು. ನಾನು ಐಆರ್ ಬಿ ವಿರುದ್ಧ ಕೊಟ್ಟ ದೂರಿನಲ್ಲಿನನ್ನ ಜಾತಿಯನ್ನು ಬುಡಗ ಜಂಗಮ ಎಂದು ಬರೆದು , ನನ್ನನ್ನು ಗೊಂದಲದಲ್ಲಿ ಸಿಲುಕಿಸಲು ಷಡ್ ಯಂತ್ರ ನಡದಿದೆ. ನಮ್ಮ ಸಮುದಾಯದಲ್ಲಿ ನನ್ನ ಜಾತಿ ಬಗ್ಗೆ ಅನುಮಾನ ಬರುವಂತೆ ಪೊಲೀಸರು ಮಾಡಿದ್ದಾರೆ. ನನ್ನ ಜಾತಿ ಈಡಿಗ ಎಂದ ಪ್ರಣವಾನಂದ ಸ್ವಾಮಿ ಹೇಳಿದರು.
ಸ್ಥಳೀಯ ಶಾಸಕ ಜಗನ್ನಾಥ ಕುಟುಂಬದ ಮನೆಗೆ ಹೋಗಿಲ್ಲ. ಸಂಸದ ಕಾಗೇರಿ ಪರಿಹಾರ ಕೊಡಿಸಲು ಯತ್ನಿಸಿಲ್ಲ. ಇವರ ನಡೆಯನ್ನು ಖಂಡಿಸುವೆ ಎಂದರು.ಜಗನ್ನಾಥ ಮಕ್ಕಳ ಗುತ್ತಿಗೆ ನೌಕರಿಯನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿದರು. ಜಗನ್ನಾಥ ಕುಟುಂಬದವರು, ಜಗನ್ನಾಥ ಮೊದಲ ಪುತ್ರಿ, ಲೋಕೇಶನ ಸಹೋದರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.