ಶಬರಿಮಲೆ ಪ್ರವೇಶಿಸುವ ಮಹಿಳೆಯರಿಗೆ ಪೊಲೀಸ್ ರಕ್ಷಣೆ ಇಲ್ಲ: ಕೇರಳ ಸಚಿವ

ತಿರುವನಂತಪುರ, ನ.15 :      ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ  ಸರ್ಕಾರ ಯಾವುದೇ ಪೊಲೀಸ್ ಭದ್ರತೆ ಒದಗಿಸುವುದಿಲ್ಲ ಎಂದು ಕೇರಳ ದೇವಸ್ವಂ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ಶುಕ್ರವಾರ ತಿಳಿಸಿದ್ದಾರೆ.

2018ರ ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪುಗೆ ನ್ಯಾಯ ಪೀಠ ಯಾವುದೇ ತಡೆ ನೀಡಿಲ್ಲ ಎಂದು ಹೇಳಿರುವ ಮಹಿಳಾ ಕಾರ್ಯಕರ್ತರು ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ನಿರ್ಧರಿಸಿದ್ದಾರೆ ಎಂಬ ಮಾಧ್ಯಮ ವರದಿಗಳಿಗೆ ಸಚಿವರು ಈ ಪ್ರತಿಕ್ರಿಯೆ ನೀಡಿದರು. 

ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ತನ್ನ ಹಿಂದಿನ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸಲ್ಲಿಸಲಾಗಿರುವ ಅರ್ಜಿಯಗಳ ವಿಚಾರಣೆಯನ್ನು ನಿನ್ನೆ ಸುಪ್ರೀಂಕೋರ್ಟ್ ಏಳು ಸದಸ್ಯರ ಪೀಠಕ್ಕೆ ವರ್ಗಾಯಿಸಿದೆ. 

ಸರ್ಕಾರ ಅವರಿಗೆ ಪೊಲೀಸ್ ರಕ್ಷಣೆ ನೀಡುವುದಿಲ್ಲ. ಅವರು ದರ್ಶನಕ್ಕಾಗಿ ಬರಬೇಕಾದರೆ ಅವರು ಈ ನಿಟ್ಟಿನಲ್ಲಿ ನ್ಯಾಯಾಲಯದ ಆದೇಶವನ್ನು ತರಬೇಕು ಎಂದು ಅವರು ಸ್ಪಷ್ಟಪಡಿಸಿದರು. 

ಕಾನೂನು ತಜ್ಞರು ಎರಡು ಅಭಿಪ್ರಾಯಗಳನ್ನು ಹೊಂದಿದ್ದಾರೆ. ಒಂದು ಅಭಿಪ್ರಾಯವೆಂದರೆ ಹಿಂದಿನ ತೀಪು ಅಸ್ತಿತ್ವದಲ್ಲಿದೆ, ಮತ್ತು ಇನ್ನೊಂದು ಅಭಿಪ್ರಾಯವೆಂದರೆ ಸುಪ್ರೀಂಕೋರ್ಟ್ ಪರಿಶೀಲನಾ ಅರ್ಜಿಗಳನ್ನು ಏಳು ಮಂದಿ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿದೆ. ಆದ್ದರಿಂದ ಹಿಂದನ ತೀಪು ಅಮಾನ್ಯವಾಗಿದೆ ಎಂದು ಕೆಲವು ಕಾನೂನು ತಜ್ಞರು ಹೇಳಿದ್ದಾರೆ ಎಂದು ಅವರು ಹೇಳಿದರು. 

ಈ ವಿಷಯದಲ್ಲಿ ನ್ಯಾಯಾಲಯವು ಸ್ಪಷ್ಟನೆ ನೀಡಬೇಕು. ಯಾರು ನ್ಯಾಯಾಲಯದಿಂದ ಸ್ಪಷ್ಟೀಕರಣವನ್ನು ಪಡೆಯುತ್ತಾರೆ ಎಂಬುದನ್ನು ಇದು ನಿರ್ಧರಿಸುತ್ತದೆ ಎಂದು ಸಚಿವರು ಹೇಳಿದರು. 

ತೃಪ್ತಿ ದೇಸಾಯಿ ಅವರಂತಹ ಮಹಿಳಾ ಕಾರ್ಯಕರ್ತರು ತಮ್ಮ ಪ್ರಚಾರಕ್ಕಾಗಿ ವೇದಿಕೆಯಾಗಿ ಶಬರಿಮಲೆಯನ್ನು ಬಳಸುತ್ತಿದ್ದಾರೆ. ಅವರು ಭಕ್ತರಲ್ಲ. ಮಾಧ್ಯಮಗಳು ಶಬರಿಮಲೆಯ ಶಾಂತಿಯುತ ವಾತಾವರಣವನ್ನು ಹಾಳು ಮಾಡುವುದರಿಂದ ದೂರವಿರಬೇಕು ಎಂದು ಅವರು ಹೇಳಿದರು.

ದೇವಾಲಯಕ್ಕೆ ಮಹಿಳೆಯರನ್ನು ಪ್ರವೇಶಿಸ ಕಲ್ಪಿಸುವ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸುವ ಅಥವಾ ಬೆಂಬಲಿಸುವವರ ಅಭಿಪ್ರಾಯಗಳನ್ನು ಪ್ರಸಾರ ಮಾಡುವುದರಿಂದ ದೂರವಿರಬೇಕೆಂದು ಅವರು ಮಾಧ್ಯಮಗಳಿಗೆ ವಿನಂತಿಸಿದರು.