ಅಮೇಥಿ, ಜ.6 ದೆಹಲಿಯ ಜವಾಹರ ಲಾಲ್ ನೆಹರೂ (ಜೆಎನ್ಯು) ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು ದುರದೃಷ್ಟಕರ ಎಂದು ಕೇಂದ್ರ ಸಚಿವ ಮತ್ತು ಅಮೇಥಿ ಸಂಸದೆ ಸ್ಮೃತಿ ಇರಾನಿ ಸೋಮವಾರ ಹೇಳಿದ್ದಾರೆ. ಕಲಿಕೆಯ ಕೇಂದ್ರವನ್ನು ರಾಜಕೀಯದ ಯುದ್ಧಭೂಮಿಯನ್ನಾಗಿ ಮಾಡಬಾರದು ಎಂದು ಹೇಳಿದ್ದಾರೆ.
"ಜೆಎನ್ಯುನಲ್ಲಿ ರಾಜಕೀಯವು ವಿದ್ಯಾಥರ್ಿಗಳ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಅದನ್ನು ಮಾಡಬಾರದು. ರಾಜಕೀಯವು ಜೆಎನ್ಯುನಲ್ಲಿ ಕೊನೆಗೊಂಡರೆ ಅದು ಅಲ್ಲಿನ ವಿದ್ಯಾಥರ್ಿಗಳಿಗೆ ಅನುಕೂಲವಾಗಲಿದೆ ಎಂದು ನನಗೆ ಖಾತ್ರಿಯಿದೆ ಎಂದು ಸೋಮವಾರ ಇಲ್ಲಿ ನಡೆದ ಜೆಎನ್ಯು ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದರು.
ರಾಜಸ್ತಾನದ ಕೋಟಾದಲ್ಲಿ ಶಿಶುಗಳ ಸಾವಿನ ಬಗ್ಗೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಇರಾನಿ, ರಾಜಸ್ತಾನ ಸಕರ್ಾರದ ವೈಫಲ್ಯ ಉಂಟಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ರಾಜಸ್ಥಾನದ ವೈದ್ಯಕೀಯ ಅಧಿಕಾರಿಗಳು ತಮ್ಮ ಕರ್ತವ್ಯದ ಬಗ್ಗೆ ಪ್ರಾಮಾಣಿಕರಾಗಿ ಮಾಡುತ್ತಿಲ್ಲ. ಆದ್ದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
"ಈಗ ರಾಜಸ್ತಾನದ ಕಾಂಗ್ರೆಸ್ ನಾಯಕರು ಕೂಡ ತಮ್ಮ ಕಡೆಯಿಂದ ವೈಫಲ್ಯ ಉಂಟಾಗಿದೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಫುರ್ತಸ್ಗಂಜ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಕೇಂದ್ರ ಸಚಿವೆ ಇರಾನಿ ಅವರು ಸಮುದಾಯ ಭವನವನ್ನು ಉದ್ಘಾಟಿಸಿದ ಬಳಿಕ ಈ ಹೇಳಿಕೆ ನೀಡಿದರು.