ನವದೆಹಲಿ, ಜ9 ಬರುವ ಫೆಬ್ರವರಿ 1 ರಂದು ಮಂಡಿಸಲಿರುವ ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಬಿಜೆಪಿ ಪದಾಧಿಕಾರಿಗಳು, ವಕ್ತಾರರರ ಜೊತೆ ಪಕ್ಷದ ಕಚೇರಿಯಲ್ಲಿ ಸಮಾಲೋಚನೆ ಮಾಡಿದ್ದಾರೆ.
ಆರ್ಥಿಕತೆಯ ವಿವಿಧ ಪಾಲುದಾರರು, ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ನಾಯಕರ ಸಲಹೆ ಕೋರಿದ್ದಾರೆ.
ಕೈಗಾರಿಕೆ , ಟ್ರೇಡ್, ಸ್ಟಾರ್ಟಅಪ್, ಫಿನ್ಟೆಕ್ ಮತ್ತು ಡಿಜಿಟಲ್ ಸೆಕ್ಟರ್ ಮತ್ತು ನೀರು ಮತ್ತು ನೈರ್ಮಲ್ಯ ಕ್ಷೇತ್ರಗಳ ತಜ್ಞರೊಂದಿಗೆ ಅವರು ಬಜೆಟ್ ಪೂರ್ವಮಾತುಕತೆ ಮಾಡಿದ್ದಾರೆ .
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಒಂದು ವಾರದಿಂದ ದೇಶದ ಉನ್ನತ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರನ್ನು ಭೇಟಿ ಮಾಡಿ ಆರ್ಥಿಕ ಸ್ಥಿತಿ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಆಬಿವೃದ್ಧಿ ದರ ಶೇಕಡಾ 5 ಕ್ಕೆ ಇಳಿಯಬಹುದೆಂದು ಅಂದಾಜಿಸಲಾಗಿರುವ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುತ್ತಿದ್ದಾರೆ.
ಇದರ ಜೊತೆಗೆ , ಮೈಗೋವ್ನಲ್ಲಿ ಕೇಂದ್ರ ಬಜೆಟ್ 2020 ಗಾಗಿ ವಿಚಾರ ವಿನಿಮಯ ನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿದ್ದಾರೆ.
ಕೇಂದ್ರ ಬಜೆಟ್ 130 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿನಿಧಿಸಲಿದೆ ಮತ್ತು ಭಾರತದ ಅಭಿವೃದ್ಧಿಯ ಹಾದಿ ರೂಪಿಸಲಿದೆ . ಮೈಗೊವ್ನಲ್ಲಿನ ಈ ವರ್ಷದ ಬಜೆಟ್ಗಾಗಿ ನಿಮ್ಮ ಆಲೋಚನೆ, ಚಿಂತನೆ ಮತ್ತು ಸಲಹೆ ಹಂಚಿಕೊಳ್ಳಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಎಂದು ಮನವಿ ಮಾಡಿದ್ದಾರೆ .
ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು.