ಸವಿತಾ ಮಹರ್ಷಿ ಜಯಂತಿ ಫೆ.4 ರಂದೆ ಆಚರಿಸಲು ನಿರ್ದಾರ - ಜಿಲ್ಲಾಧಿಕಾರಿಗಳ ಭರವಸೆ

Nirdara to celebrate Savita Maharshi Jayanti on Feb. 4 - Promise of District Collector

ಸವಿತಾ ಮಹರ್ಷಿ ಜಯಂತಿ ಫೆ.4 ರಂದೆ ಆಚರಿಸಲು ನಿರ್ದಾರ -  ಜಿಲ್ಲಾಧಿಕಾರಿಗಳ ಭರವಸೆ

ಗದಗ 22:  ಜನೆವರಿ 21 ರಂದು ಸಂಜೆ 5 ಗಂಟೆಗೆ ಅಪರ ಜಿಲ್ಲಾಧಿಕಾರಿಗಳು ಗದಗ ಇವರ ಅಧ್ಯಕ್ಷತೆಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ನಿಮಿತ್ಯವಾಗಿ ಪೂರ್ವಭಾವಿ ಸಭೆ ಜರುಗಿತು ಸಭೆಯಲ್ಲಿ ರಾಜ್ಯ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕವಾಗಿ ಪ್ರತಿ ವರ್ಷದಂತೆ ಇ ವರ್ಷವೂ ಸಹ ರಥಸಪ್ತಮಿ ಫೆ 4 ರಂದೆ ಸವಿತಾ ಮಹರ್ಷಿ ಜಯಂತಿ ಆಚರಣೆಯು ಭಕ್ತಿಪೂರ್ವಕವಾಗಿ ಜರುಗಿಸಲು ಸಭೆಯಲ್ಲಿ ನಿರ್ದರಿಸಲಾಯಿತು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಈ ಕುರಿತು ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2025 ನೇ ಸಾಲಿನ ಜಯಂತಿಯನ್ನು ಮಾಡುತ್ತಿರುವ ಆದೇಶದಲ್ಲಿ ಸವಿತಾ ಮಹರ್ಷಿ ಜಯಂತಿ ದಿನಾಂಕ 05-02-2025 ರಂದು ರಥಸಪ್ತಮಿ ಇರುವುದು ಅಂದು ಜಯಂತಿ ಮಾಡಬೇಕೆಂದು ತಪ್ಪು ಸುತ್ತೂಲೆ ಹೂರಡಿಸಲಾಗಿದೆ ಪಂಚಾಂಗದ ಪ್ರಕಾರ ರಥಸಪ್ತಮಿಯು ದಿನಾಂಕ 04-02-2025 ರ ಮಂಗಳವಾರ ಆಗಿರುತ್ತದೆ ಆದಕಾರಣ ಸರಕಾರ ತಪ್ಪು ಮಾಡಿರುವುದರಿಂದ ಕೂಡಲೇ ದಿನಾಂಕ 04-02-2025 ರಂದು ರಥಸಪ್ತಮಿ ಇರುವ ಕಾರಣ ಸರಕಾರವು ಸವಿತಾ ಮಹರ್ಷಿ ಜಯಂತಿ ದಿನಾಂಕವನ್ನು ಬದಲಾವಣೆ ಮಾಡಿ ಮರು ಆದೇಶ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿಗಳಿಗೆ ಕ್ಯಾಲೆಂಡರ ಮತ್ತು ಪಂಚಾಂಗವನ್ನು ತೋರಿಸಿ  ಒತ್ತಾಯಿಸಿದರು ಮತ್ತು ಸಮಾಜ ಬಾಂಧವರೇಲ್ಲರನ್ನು ಜತೆಗೂಡಿಸಿಕೊಂಡು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಹ ಸಲ್ಲಿಸಿ ವಿನಂತಿಸಿ ಆಗ್ರಹಿಸಿದರು ಅಪರ ಜಿಲ್ಲಾಧಿಕಾರಿಗಳು ಜಿಲ್ಲಾ ಸವಿತಾ ಸಮಾಜದ ಮನವಿ ಸ್ವಿಕರಿಸಿ ಮಾತನಾಡಿ ತಮ್ಮ ಸಮಾಜದ ಬೆಡಿಕೆಯಂತೆ ಸರಕಾರದಲ್ಲಿ ದಿನಾಂಕ ಬದಲಾವಣೆ ಮಾಡಿಸಿಪಂಚಾಂಗದ ಪ್ರಕಾರ ರತಸಪ್ತಮಿ ಫೆ 4/2/2025 ರಂದೆ ಸವಿತಾ ಮಹರ್ಷಿ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲು ಅನಕೂಲ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ ಫ್ರ.ಕಾರ್ಯದರ್ಶಿಗಳಾದ ರವಿಕುಮಾರ ಹಡಪದ ನರಗುಂದ ಸಮಾಜದ ಉಪಾಧ್ಯಕ್ಷರಾದ ಸಂದೀಪ ಬಾಲಗುಡ್ಡ ಮರಾಠ ಸಮಾಜದ ಪ್ರಮುಖರಾದ ಪಾಂಡು ಕಾಳೆ ದೀಪಕ ಮಾನೆ ತುಕಾರಾಮ ಮಾನೆ ಮತ್ತು ಗದಗ ಬೆಟಗೇರಿಯ ಹಿರಿಯರಾದ ಹನಮಂತಪ್ಪ ರಾಂಪೂರ ರಮೇಶ ರಾಂಪೂರ ಗದಗ ಹಿರಿಯರಾದ ಬಾಲರಾಜ ಕೊಟೇಕಲ್ಲ ಜ್ಞಾನೇಶ್ವರ ಕಾಳೆ  ಬಸುರಾಜ ಗೌಡರ್ ಕೀರಣ ರಾಂಪೂರ ಹೇಮಂತ ವಡ್ಡೇಪಲ್ಲಿ ಶ್ರೀನಿವಾಸ ಕೊಟೇಕಲ್ಲ ಜಿಲ್ಲಾ ಖಜಾಂಚಿ ಅರೂಣ ರಾಂಪೂರ ಸಮಾಜದ ಯುವ ನಾಯಕರಾದ ನವೀನ ಕೊಟೇಕಲ್ಲ ಸುನೀಲ ರಾಯಚೂರ ಕೃಷ್ಣಾ ಬುದೂರ ವೆಂಕಟೇಶ ಕೊಟೇಕಲ್ಲ ಕಾರ್ತಿಕ ಆಗಲಾವೆ ಹಾಗೂ ಸಮಾಜದ ಅನೇಕ ಯುವಕರು ಗುರು ಹಿರಿಯರು ಬಂಧು ಬಾಂಧವರ ಉಪಸ್ತಿತರಿದ್ದರು .