ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಪ್ರಯೋಗಾಲಯಗಳಿಗೆ ನಿರಾಣಿ ಭೇಟಿ

Nirani visits the laboratories of KLE Krishi Vigyan Kendra

ನೇಸರಗಿ 29: ಸಮೀಪದ ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ವಿವಿಧ ಪ್ರಯೋಗಾಲಯಗಳಿಗೆ ಮಾಜಿ ಸಚಿವ ಹಾಗೂ  ಸಕ್ಕರೆ ಕೈಗಾರಿಕೋದ್ಯಮಿಯಾದ ಮುರಗೇಶ ನಿರಾಣಿಯವರು ಭೇಟಿ ನೀಡಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಬಿ. ಆರ್‌. ಪಾಟೀಲ ಹಾಗೂ ವಿಜ್ಞಾನಿಗಳೊಂದಿಗೆ ಕೃಷಿ ವಿಜ್ಞಾನ ಕೇಂದ್ರದ ಅಭಿವೃದ್ಧಿ ಚಟುವಟಿಕೆಗಳಾದ ಕ್ಷೇತ್ರ ಪರೀಕ್ಷೆ, ಪ್ರಾತ್ಯಕ್ಷಿಕೆ, ತರಬೇತಿ ಹಾಗೂ ಬೀಜೋತ್ಪಾದನೆ ಕುರಿತು ವಿವರವಾಗಿ ಚರ್ಚಿಸಿದರು. 

ಈ ಸಂದರ್ಭದಲ್ಲಿ ತಾವು 2012 ರಲ್ಲಿ ಈ ಆವರಣಕ್ಕೆ ಭೇಟಿ ನೀಡಿದ್ದು, ಆಗಿನ ಸಂದರ್ಭದಲ್ಲಿ ಈ ಕೇಂದ್ರವು ಶೂನ್ಯ ಸೌಕರ್ಯವನ್ನು ಹೊಂದಿದ್ದು ನನಗೆ ನೆನಪಿದ್ದು, ಡಾ. ಪ್ರಭಾಕರ ಕೋರೆಯವರ ಕನಸಿನಂತೆ ಇಂದು ಈ ಕೇಂದ್ರವು ಆಧುನಿಕ ಸೌಕರ್ಯಗಳನ್ನು ಹೊಂದಿದ ಬೃಹತ್ ಮಾದರಿ ಸಂಸ್ಥೆಯಾಗಿ ಬೆಳೆದಿರುವುದನ್ನು ಕಂಡು ನಾನು ಆಶ್ಚರ್ಯಚಕಿತನಾಗಿದ್ದೇನೆ.  ಈ ಸಂಸ್ಥೆಯಲ್ಲಿ ಕೃಷಿ ಸಂಶೋಧನಾ ತರಬೇತಿ ಹಾಗೂ ವಿಸ್ತರಣೆಯ ಚಟುವಟಿಕೆಗಳ ಫಲದಿಂದ ಈ ಭಾಗದ ರೈತರಿಗೆ ಒದಗಿಸುವ ಸೇವೆಯನ್ನು ತಿಳಿದು ತುಂಬಾ ಸಂತೋಷವೆನಿಸುತ್ತದೆ.  ಈ ಕೇಂದ್ರವು ಅಪರಿಮಿತ ಸೇವೆ ಸಲ್ಲಿಸುವಲ್ಲಿ ನಿರತವಾಗಿದೆ ಎಂದರು. 

ಈ ಸಂದರ್ಭದಲ್ಲಿ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ,  ವಿಜ್ಞಾನಿಗಳಾದ ಡಾ. ಎಸ್‌. ಎಸ್‌. ಹಿರೇಮಠ, ಎಸ್‌. ಎಮ್‌. ವಾರದ,  

ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ ಹಾಗೂ ಇತರ ಸಿಬ್ಬಂದಿಗಳಾದ ವಿನೋದ ಕೋಚಿ, ಶಂಕರಗೌಡ ಪಾಟೀಲ, ಮಂಜುನಾಥ ಪಿ. ಐ. ಹಾಗೂ ಬಸವರಾಜ ಅಮ್ಮಿನಬಾವಿ ಉಪಸ್ಥಿತರಿದ್ದರು.