ಗಡಿಗೆ ನುಗ್ಗಲು ಯತ್ನಿಸಿದ ಮಹಾ ಪುಂಡರಿಗೆ ನಿಪ್ಪಾಣಿ ಪೊಲೀಸರ ನೀತಿ ಪಾಠ : ಬಂದ್ ದಾರಿಗೆ ಸುಂಕವಿಲ್ಲದೆ ವಾಪಸ್
ಬೆಳಗಾವಿ : ಬೆಳಗಾವಿಯಲ್ಲಿ ಕನ್ನಡಿಗರು ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿರುವ ವೇಳೆಗೆ ರಾಜ್ಯೋತ್ಸವ ಹಬ್ಬ ಹಾಳು ಮಾಡಲು ಕೊಲ್ಲಾಪುರದಿಂದ ಬೆಳಗಾವಿ ಗಡಿಗೆ ನುಗ್ಗಲು ಯತ್ನಿಸಿದ ಮಹಾ ಪುಂಡರಿಗೆ ನಿಪ್ಪಾಣಿ ಪೊಲೀಸರು ನೀತಿ ಪಾಠ ಹೇಳಿ ವಾಪಸ್ ಕಳಿಸಿದ್ದಾರೆ. ಬಂದ ದಾರಿಗೆ ಸುಂಕವಿಲ್ಲದಂತೆ ಮಹಾಪುಂಡರು ವಾಪಸಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿ ಕೋಗನೋಳಿ ಟೋಲ್ ಬಳಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಶಿವಸೇನೆ ಪುಂಡರು ಕರ್ನಾಟಕ ಗಡಿಯಲ್ಲಿ ನುಗ್ಗಲು ಯತ್ನ ನಡೆಸಿ ಪೊಲೀಸರೊಂದಿಗೆ ಮಾತಿಗೀಳಿದು ಗಲಾಟೆ ನಡೆಸಿದ್ದರು.
ಕರಾಳ ದಿನಾಚರಣೆ ಮಾಡಲು ಬೆಳಗಾವಿಗೆ ಪ್ರಯಾಣಿಸಲು ಯತ್ನಿಸಿದ ಮಹಾ ಪುಂಡರನ್ನು ಜಿಲ್ಲೆಯ ಗಡಿಯಲ್ಲೇ ಪುಂಡರಿಗೆ ತಡೆದ ನಿಪ್ಪಾಣಿ ಸಿಪಿಐ ತಳವಾರ ಹಾಗೂ ಸಿಬ್ಬಂದಿ ಗಳು ಇದರಿಂದ ಬಂದ ದಾರಿಗೆ ಸುಂಕವಿಲ್ಲದೆ ಪುಂಡರು ಗಡಿಯಿಂದ ವಾಪಸ್ ಹೊರಟು ಹೋದರು.