ಮಹಾರಾಷ್ಟ್ರ ಏಕೀಕರಣ ಸಮಿತಿ ಹೆಸರಿಗಷ್ಟೇ ಇದೆ: ಸತೀಶ ಜಾರಕಿಹೊಳೆ
ಬೆಳಗಾವಿ 01: ಕನರ್ಾಟಕ ಆಚರಣೆ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮತ್ತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನಾಚರಣೆ ಮಾಡಿದೆ.
ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡದಿದ್ದರೂ ಎಂಇಎಸ್ ನಾಯಕರು ಕರಾಳ ದಿನಚಾರಣೆ ಮಾಡಿದ್ದಾರೆ. ಕರಾಳ ದಿನಾಚರಣೆ ಮಾಡಿರುವ ಎಂಇಎಸ್ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ಹೆಸರಿಗಷ್ಟೇ ಇದ್ದು, ಕರಾಳ ದಿನಾಚರಣೆ ದಿನವಷ್ಟೇ ನೆನಪಾಗುತ್ತದೆ. ಅದನ್ನು ನಿಷೇಧಿಸುವುದಕ್ಕಿಂತ ನಿರ್ಲಕ್ಷ್ಯ ಮಾಡುವುದು ಒಳೆತೆಂದು ಹೇಳಿದರು