ನಿದಾ ಖಾನ್ ತ್ರಿವಳಿ ತಲಾಕ್ ಅಸಿಂಧು

ಲಕ್ನೋ 18: ನಿದಾ ಖಾನ್ಗೆ ನೀಡಲಾಗಿರುವ ತ್ರಿವಳಿ ತಲಾಕ್ ಅಸಿಂಧುವೆಂದು ಬರೇಲಿಯ ಕೋಟರ್್ ಇಂದು ಬುಧವಾರ ಘೋಷಿಸಿದೆ; ಆ ಪ್ರಕಾರ ಆಕೆಯ ಪತಿ ಶಿರೇನ್ ಮತ್ತು ಆತನ ಮನೆಯವರ ವಿರುದ್ಧ  ಈಗಿನ್ನು ಕೌಟುಂಬಿಕ ಹಿಂಸೆ ಪ್ರಕರಣದ ತನಿಖೆ ನಡೆಸುವಂತೆ ಕೋಟರ್್ ಆದೇಶಿಸಿದೆ.  

ಕೋಟರ್್ ಮುಂದಿದ್ದ ಅನೇಕ ತ್ರಿವಳಿ ತಲಾಕ್ ಕೇಸುಗಳಲ್ಲಿ ಒಂದಾಗಿರುವ ಈ ಪ್ರಕರಣದಲ್ಲಿ ನಿದಾ ಖಾನ್ ಗೆ ಮಹತ್ತರ ವಿಜಯ ದೊರಕಿದಂತಾಗಿದೆ.  

ನಿದಾ ಖಾನ್ ತ್ರಿವಳಿ ತಲಾಕ್ ಪ್ರಕರಣದಲ್ಲಿ ಆಕೆಯ ಪತಿ ಶಿರೇನ್  ಸಲ್ಲಿಸಿದ್ದ ಅಜರ್ಿಯನ್ನು ನ್ಯಾಯಾಲಯ ಅತ್ಯಂತ ಸ್ಪಷ್ಟವಾಗಿ ತಿರಸ್ಕರಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಕೋಟರ್್ ಜು.27ಕ್ಕೆ ನಿಗದಿಸಿದೆ.