ಲೋಕಾರೆ್ಣಗೊಂಡ ಅಭಯ ಆಂಜನೇಯಸ್ವಾಮಿಯ ನೂತನ ಶಿಲಾ ಮೂರ್ತಿ
ಕಂಪ್ಲಿ 15: ತಾಲೂಕಿನ ಸಣಾಪುರ ಗ್ರಾಪಂಗೆ ಒಳಪಡುವ ಬಸವೇಶ್ವರ ಕ್ಯಾಂಪಿನಲ್ಲಿ ಅಭಯ ಆಂಜನೇಯ ಸ್ಚಾಮಿಯ ನೂತನ ಶಿಲಾ ಮೂರ್ತಿ ಭಾನುವಾರದ ಶುಭಗಳಿಗೆಯಲ್ಲಿ ಲೋಕಾರೆ್ಣಗೊಂಡಿತು. ಪುರೋಹಿತ ಪಿ.ಶಿವರಾಜ ಕೃಷ್ಣ ಶರ್ಮ ನೇತೃತ್ವದಲ್ಲಿ ನಾನಾ ಪುರೋಹಿತರ ಸಮ್ಮುಖದಲ್ಲಿ ಬೆಳಗಿನ ಜಾವದಲ್ಲಿ ಹೋಮ ಹವನ ಸಲ್ಲಿಸಿದ ನಂತರ ವಿಶೇಷ ಪೂಜೆಯೊಂದಿಗೆ ಮೂರ್ತಿ ಪ್ರತಿಷ್ಠಾಪನೆ ಜತೆಗೆ ನೂತನ ಮೂರ್ತಿ ಅನಾವರಗೊಳಿಸಲಾಯಿತು. ನೂತನ ಶಿಲಾ ಮೂರ್ತಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಜನಪ್ರತಿನಿಧಿಗಳು ಹಾಗೂ ಭಕ್ತರು ಆಗಮಿಸಿ, ಆಂಜನೇಯನ ಕೃಪೆಗೆ ಪಾತ್ರರಾದರು. ನಂತರದ ಅನ್ನಸಂತಾರೆ್ಣ ಜರುಗಿತು. ಪ್ರತಿಷ್ಠಾಪನೆ ಹಿನ್ನಲೆ ಕ್ಯಾಂಪಿನಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆಂಜನೇಯ ಬಸವೇಶ್ವರ ಕ್ಯಾಂಪಿನ ಭಕ್ತ ಮಂಡಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.