ಬಾಗಲಕೋಟೆ: ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಚಾಲುಕ್ಯರ ನಾಡಿನ ಐಹೊಳೆ, ಬಾದಾಮಿ ಹಾಗೂ ಪಟ್ಟದಕಲ್ಲ ತಾಣಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ಹೊಸ ರೂಪುರೇಶೆಗಳನ್ನು ರೂಪಿಸಲಾಗುವುದೆಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವ ಸಿ.ಟಿ.ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಐಹೊಳೆ, ಬಾದಾಮಿ ಹಾಗೂ ಪಟ್ಟದಕಲ್ಲಿನ ಸುತ್ತಮುತ್ತಲಿರುವ ಮನೆಗಳ ಸ್ಥಳಾಂತರ, ಪರಿಹಾರ, ಮೂಲ ಭೂತ ಸೌಕರ್ಯಗಳ ಅಭಿವೃದ್ದಿ, ಸಂಪರ್ಕ, ಸ್ವಚ್ಛತೆ, ಸಂರಕ್ಷಣೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪುರಾತತ್ವ ಇಲಾಖೆ, ಅರಣ್ಯ, ಪ್ರವಾಸೋದ್ಯಮ, ಕಂದಾಯ ಹಾಗೂ ಮುಜರಾಯಿ ಇಲಾಖೆಗಳನ್ನೊಳಗೊಂಡ ಏಕಗವಾಕ್ಷಿ ಸಭೆ ನಡೆಸುವಂತೆ ಸಚಿವರು ತಿಳಿಸಿದರು.
ಬಾದಾಮಿಯಲ್ಲಿ ಪಾಕರ್ಿಂಗ್ ಪ್ಲಾಜಾ, ಮೊಬೈಲ್ ಕ್ಯಾಂಟಿನ್, ತ್ರಿಸ್ಟಾಲ್ ಹೋಟೆಲ್, ಸ್ಮಾರಕಗಳ ಸಂಪರ್ಕ ವ್ಯವಸ್ಥೆ, ಸ್ಮಾರಕಗಳಿಗೆ ಧ್ವನಿ ಬೆಳಕು ವ್ಯವಸ್ಥೆ, ಶಿಲಾರೋಹಣ, ಸ್ಥಳೀಯ ಆಹಾರ ಪದ್ದತಿ, ಪ್ಯಾರಗೈಡಿಂಗ್, ಜಲಕ್ರೀಡೆ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲು ತಿಳಿಸಿದರು. ಚಿಕ್ಕಸಂಗಮ, ಮುಚಖಂಡಿ ಕೆರೆ, ಹುಲಿಗೆಮ್ಮನಕೊಳ್ಳ, ಸಿದ್ದನಕೊಳ್ಳ ಹಾಗೂ ಇನ್ನೀತರ ಪ್ರಮುಖ ತಾಣಗಳನ್ನು ಜಿಲ್ಲೆಯ ಪ್ರವಾಸಿ ಪಟ್ಟಿಗೆ ಸೇರಿಸುವಂತೆ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಶಾಲಾ ಮಕ್ಕಳಿಗೆ ಕೈಗೊಳ್ಳಲಾಗುತ್ತಿರುವ ಕನರ್ಾಟಕ ದರ್ಶನ ಕಾರ್ಯಕ್ರಮದಲ್ಲಿ 150 ನೇ ಗಾಂಧಿ ವರ್ಷಚರಣೆ ಹಿನ್ನಲೆಯಲ್ಲಿ ವಿದ್ಯಾಥರ್ಿಗಳಿಗೆ ಗಾಂಧಿ ಗಾಂಧಿ ಭೇಟಿ ನೀಡಿದ ಸ್ಥಳಗಳಿಗೆ ಕಡ್ಡಾಯವಾಗಿ ಕರೆದುಕೊಂಡು ಹೋಗಬೇಕು. ಅಲ್ಲದೇ ಗಾಂಧೀಜಿಯವರ ಆದರ್ಶ ಹಾಗೂ ತತ್ವಗಳನ್ನು ಪಾಲಿಸುವಂತೆ ಸಂಕಲ್ಪ ಮಾಡಿಸುವ ಕೆಲಸವಾಗಬೇಕು ಎಂದು ಸಚಿವರು ತಿಳಿಸಿದರು.
ಯುವ ಪೀಳಿಗೆಯಲ್ಲಿ ಇತಿಹಾಸದ ಪ್ರಜ್ಞೆ ಹಾಗೂ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ಗ್ರಾಮಗಳ ಇತಿಹಾಸ ಸಂಸ್ಕೃತಿ, ಸೈನಿಕರ ವಿವರ ಹಾಗೂ ಪರಂಪರೆಯನ್ನು ದಾಖಲಿಸಲು ಅಧ್ಯಯನ ಕೈಗೊಳ್ಳುವ ನಿಟ್ಟಿನಲ್ಲಿ ಕಾಲೇಜು ವಿದ್ಯಾಥರ್ಿಗಳನ್ನು ಬಳಸಿಕೊಂಡು ವರದಿ ತಯಾರಿಸಲುವ ಕಾರ್ಯ ಆರಂಭಿಸುವಂತೆ ತಿಳಿಸಿದರು. ಈ ಕಾರ್ಯಕ್ಕೆ ಜಿಲ್ಲಾ ವಾತರ್ಾಧಿಕಾರಿಗಳಾದ ಮಂಜುನಾಥ ಸುಳ್ಳೊಳ್ಳಿ ಅವರನ್ನು ಜಿಲ್ಲಾ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬೇವೂರ ಗ್ರಾಮದಲ್ಲಿ ದೇಶದ ಮಹಾದಂಡನಾಯಕರಾಗಿದ್ದ ಜಿ.ಜಿ.ಬೇವೂರ ನೆನಪಿಗಾಗಿ ಸಾಂಸ್ಕೃತಿ ಭವನ ನಿಮರ್ಿಸಲು ಶಾಸಕ ವೀರಣ್ಣ ಚರಂತಿಮಠ ತಿಳಿಸಿದಾಗ ವಾರ್ ಮ್ಯೂಜಿಯಂ ಹೆಸರಿನಲ್ಲಿ ಸಾಂಸ್ಕೃತಿಕ ಭವನ ನಿಮರ್ಿಸಲು ಕುರಿತಂತೆ ಪ್ರಸ್ತಾವನೆ ಕಳುಹಿಸಿಕೊಡಲು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ :
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲಿಸಿದ ಸಚಿವರು ರಂಗಮಂದಿಗಳನ್ನು ಹಾಗೂ ಸಾಂಸ್ಕೃತಿ ಭವನಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಸೂಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.62 ರಷ್ಟು ಹುದ್ದೆಗಳ ನೇಮಕಾತಿಗೆ ಕ್ರಮಕೈಗೊಳ್ಳಲು ತಿಳಿಸಿದರು. ಈಗಾಗಲೇ ಪ್ರಾರಂಭಿಸಲಾದ ಪ್ರತಿಯೊಂದು ಕಾಮಗಾರಿಗಳು ಡಿಸೆಂಬರ ಅಂತ್ಯಕ್ಕೆ ಪೂರ್ಣಗೊಳ್ಳಬೇಕು. ಹತ್ತಿರವಿರುವ ಶಾಲೆಗಳಿಗೆ ಬಯಲು ರಂಗಮಂದಿಗಳಾಗಿ ಪರಿವತರ್ಿಸಲು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಾಲುಕ್ಯ ಉತ್ಸವ ನಡೆಸಿರುವದಿಲ್ಲ. ಅದಕ್ಕಾಗಿ ಬಿಡುಗಡೆಯಾದ ಅನುದಾನ 1.20 ಕೋಟಿ ಇದ್ದು, ರನ್ನ ಉತ್ಸವಕ್ಕೆ 30 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಸಭೆಗೆ ತಿಳಿಸಿದಾಗ ದೇಶ ವಿದೇಶಿಗರು ಆಗಮಿಸುವ ನಿಟ್ಟಿನಲ್ಲಿ ಉತ್ಸವವನ್ನು ಆಯೋಜಿಸಲು ತಿಳಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿದರ್ೇಶಕ ಬಸವರಾಜ ಶಿರೂರ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಹಾಗೂ ಖಚರ್ುಗಳ ಮಾಹಿತಿಯನ್ನು ನೀಡಿದರು.
ಸಕ್ಕರೆ ಇಲಾಖೆ :
ಜಿಲ್ಲೆಯಲ್ಲಾದ ಪ್ರವಾಹದಿಂದ 41568 ಹೆಕ್ಟೇರ್ ಕಬ್ಬು ಪ್ರದೇಶ ಹಾಳಾಗಿದ್ದು, ಒಟ್ಟು 1143 ಕೋಟಿ ರೂ.ಗಳ ಹಾನಿ ಅಂದಾಜಿಸಲಾಗಿದೆ. ಎನ್ಡಿಆರ್ಎಪ್ ಮಾರ್ಗಸೂಚಿಯನ್ವಯ 85 ಕೋಟಿ ಇದೆ. ಪ್ರತಿ ಹೆಕ್ಟೇರ್ಗೆ ಎನ್ಡಿಆರ್,ಎಫ್ ಪ್ರಕಾರ ರಾಜ್ಯ ಸರಕಾರದಿಂದ ರೂ.13500 ಮತ್ತು ಕೇಂದ್ರ ಸರಕಾರಿಂದ ರೂ.10 ಸಾವಿರ ಸೇರಿ ಒಟ್ಟು ರೂ.23500 ಪರಿಹಾರ ನೀಡಲಾಗುತ್ತದೆ. ತೇರದಾಳ ಸಾವರಿನ್ ಶುಗರ್ಸ್ ನವರು 4.78 ಎಫ್ಆರ್ಪಿ ಬಾಕಿ ಉಳಿಸಿಕೊಂಡಿದ್ದು, ನವೆಂಬರ 14 ರೊಳಗಾಗಿ ಪಾವತಿಸದಿದ್ದಲ್ಲಿ ಹರಾಜಿಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಪ್ರವಾಸೋದ್ಯಮ ಇಲಾಖೆಯ ಉಪನಿದರ್ೇಶಕ ಧನಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು