ಆಕ್ಲೆೆಂಡ್, ಫೆ 8: ರವೀಂದ್ರ ಜಡೇಜಾ(55 ರನ್) ಅವರ ಏಕಾಂಗಿ ಹೋರಾಟದ ನಡುವೆಯೂ ಕಿವೀಸ್ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಎರಡನೇ ಪಂದ್ಯದಲ್ಲಿ ಭರತದ ವಿರುದ್ಧ 2-0 ಅಂತರದಲ್ಲಿ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಕಿವೀಸ್ ಪಡೆ ವಶಪಡಿಸಿಕೊಂಡಿತು.
ಇಲ್ಲಿನ ಈಡನ್ ಪಾರ್ಕ್ ಅಂಗಳದಲ್ಲಿ ನ್ಯೂಜಿಲೆಂಡ್ ನೀಡಿದ್ದ 274 ರನ್ ಗುರಿ ಹಿಂಬಾಲಿಸಿದ ಭಾರತ ತಂಡಕ್ಕೆೆ ಉತ್ತಮ ಆರಂಭ ದೊರೆಯಲಿಲ್ಲ. ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಹೊಸ ಜೋಡಿ ಕೇವಲ 21 ರನ್‌ಗಳಿಗೆ ಬೇರ್ಪಟ್ಟಿತು. ಮಯಾಂಕ್ (3) ಹಾಗೂ ಪೃಥ್ವಿ(24) ಬಹುಬೇಗ ಪೆವಿಲಿಯನ್ ಪಾಲಾದರು.
ಮೂರನೇ ಕ್ರಮಾಂಕದಲ್ಲಿ ಇಳಿದ ನಾಯಕ ವಿರಾಟ್ ಕೊಹ್ಲಿ ಕೇವಲ 15 ರನ್ ಗಳಿಸಿ ಟಿಮ್ ಸೌಥ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಅತ್ಯುತ್ತಮ ಲಯದಲ್ಲಿದ್ದ ಕೆ.ಎಲ್ ರಾಹುಲ್ (4) ಮತ್ತು ಕೇದಾರ್ ಜಾಧವ್(9) ಕೂಡ ನಿರಾಸೆ ಮೂಡಿಸಿದರು. ಕೆಲ ಕಾಲ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ 57 ಎಸೆತಗಳಲ್ಲಿ 52 ರನ್ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ಬೆನೆಟ್ ಔಟ್ ಮಾಡಿದರು.
ಜಡೇಜಾ-ಸೈನಿ ಮಿಂಚು:
ಎಂಟನೇ ವಿಕೆಟ್‌ಗೆ ಜತೆಯಾದ ರವೀಂದ್ರ ಜಡೇಜಾ ಹಾಗೂ ನವದೀಪ್ ಸೈನಿಜೋಡಿ ಅತ್ಯುತ್ತಮ ಬ್ಯಾಟಿಂಗ್ ಮಾಡುವ ಮೂಲಕ ಕಿವೀಸ್ ಬೌಲರ್‌ಗಳಿಗೆ ಬೆವರಿಳಿಸಿದರು. ಬ್ಯಾಟ್ಸ್‌ಮನ್ ರೀತಿ ಬ್ಯಾಟ್ ಬೀಸಿದ ಸೈನಿ 49 ಎಸೆತಗಳಲ್ಲಿ 45 ರನ್ ಗಳಿಸಿ ನೆರೆದಿದ್ದ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಇವರು ಎರಡು ಸಿಕ್ಸರ್ ಐದು ಬೌಂಡರಿಗಳಿಸಿದ್ದರು. ಜಡೇಜಾ ಜತೆ 76 ರನ್ ಗಳಿಸಿದರು. ನಂತರ ಅವರು ಜ್ಯಾಾಮಿಸನ್‌ಗೆ ಕ್ಲೀನ್ ಬೌಲ್ಡ್ ಆದರು.
ಕೊನೆಯ ವಿಕೆಟ್‌ವರೆಗೂ ಹೋರಾಡಿದ ರವೀಂದ್ರ ಜಡೇಜಾ ಪ್ರಯತ್ನ ಫಲ ನೀಡಲಿಲ್ಲ. 73 ಎಸೆತಗಳಲ್ಲಿ ಎಡಗೈ ಬ್ಯಾಟ್ಸ್‌ಮನ್ 55 ರನ್ ಗಳಿಸಿದರು. 49ನೇ ಓವರ್‌ನ ನೀಶಮ್ ಎಸೆತದಲ್ಲಿ ಅವರು ಬಲವಾದ ಹೊಡೆತಕ್ಕೆೆ ಕೈಹಾಕಿ ಕ್ಯಾಚಿತ್ತರು. ಅಂತಿಮವಾಗಿ ಭಾರತ 22 ರನ್‌ಗಳಿಂದ ಸೋಲು ಒಪ್ಪಿಿಕೊಂಡಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ನಿರ್ಧಾರವನ್ನು ನ್ಯೂಜಿಲೆಂಡ್ ಆರಂಭಿಕರಾದ ಮಾರ್ಟಿನ್ ಗುಪ್ಟಿಲ್ ಹಾಗೂ ಹೆನ್ರಿ ನಿಕೋಲ್ಸ್ ಜೋಡಿ ತಲೆ ಕೆಳಗಾಗುವಂತೆ ಮಾಡಿತ್ತು. ಈ ಜೋಡಿ ಮುರಿಯದ ಮೊದಲನೇ ವಿಕೆೆಟ್‌ಗೆ 93 ರನ್ ಗಳಿಸಿತ್ತು. ಆ ಮೂಲಕ ಕಿವೀಸ್ ಬೃಹತ್ ಮೊತ್ತ ದಾಖಲಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಚೆಂಡು ಕೈಗೆತ್ತಿಕೊಂಡ ಯಜ್ವೇಂದ್ರ ಚಾಹಲ್, 41 ರನ್ ಗಳಿಸಿ ಆಡುತ್ತಿದ್ದ ಹೆನ್ರಿ ನಿಕೋಲ್ಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಆ ಮೂಲಕ ಆರಂಭಿಕ ಜೋಡಿ ಪತನವಾಯಿತು.
ಮೂರನೇ ಕ್ರಮಾಂಕದಲ್ಲಿ ಕಣಕ್ಕೆೆ ಇಳಿದ ಟಾಮ್ ಬ್ಲಂಡೆಲ್ 22 ರನ್ ಗಳಿಸಿ ಕಿವೀಸ್ ಪಾಳಯದಲ್ಲಿ ವಿಶ್ವಾಾಸ ಮೂಡಿಸಿದ್ದರು. ಆದರೆ, ಅವರನ್ನು ಶಾರ್ದೂಲ್ ಠಾಕೂರ್ ನಿಯಂತ್ರಿಸಿದರು. ಒಂದು ತುದಿಯಲ್ಲಿ ಅದ್ಭುತ ಬ್ಯಾಾಟಿಂಗ್ ಮಾಡುತ್ತಿದ್ದ ಆರಂಭಿಕ ಮಾರ್ಟಿನ್ ಗುಪ್ಟಿಲ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದರು. 79 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎಂಟು ಬೌಂಡರಿಯೊಂದಿಗೆ 79 ರನ್ ಗಳಿಸಿದ್ದರು. ಅತ್ಯುತ್ತಮ ಬ್ಯಾಾಟಿಂಗ್ ಮಾಡುತ್ತಿದ್ದ ಗುಪ್ಟಿಲ್ ರನೌಟ್ ಆದರು.
ಮಾರ್ಟಿನ್ ಗುಪ್ಟಿಲ್ ಔಟಾದ ಬಳಿಕ ತಂಡದ ಜವಾಬ್ದಾಾರಿ ಹೊತ್ತು ರಾಸ್ ಟೇಲರ್ ಒಂದು ತುದಿಯಲ್ಲಿ ಏಕಾಂಗಿ ಹೋರಾಟ ನಡೆಸಿದರು. 74 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಯೊಂದಿಗೆ ಅಜೇಯ 73 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ. ಟೇಲರ್‌ಗೆ ಮತ್ತೊೊಂದು ತುದಿಯಲ್ಲಿ ಯಾರೂ ಸರಿಯಾಗಿ ಸಾಥ್ ನೀಡದ ಪರಿಣಾಮ ತಂಡದ ಮೊತ್ತ ಕಿರಿದಾದ ಅಂಗಳದಲ್ಲಿಯೂ 300ರ ಗಡಿ ದಾಟಿಸಲು ಸಾಧ್ಯವಾಗಲಿಲ್ಲ.
ಭಾರತದ ಪರ ಯಜ್ವೇಂದ್ರ ಚಾಹಲ್ ಮೂರು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 50 ಓವರ್‌ಗಳಿಗೆ 273/8 (ರಾಸ್ ಟೇಲರ್ ಔಟಾಗದೆ 73, ಮಾರ್ಟಿನ್ ಗುಪ್ಟಿಲ್ 79, ಹೆನ್ರಿ ನಿಕೋಲ್ಸ್ 41; ಯಜ್ವೇಂದ್ರ ಚಾಹಲ್ 58 ಕ್ಕೆೆ 3, ಶಾರ್ದೂಲ್ ಠಾಕೂರ್ 60 ಕ್ಕೆೆ 2, ರವೀಂದ್ರ ಜಡೇಜಾ 35 ಕ್ಕೆೆ 1)
ಭಾರತ: 48.3 ಓವರ್‌ಗಳಿಗೆ 252/10 (ರವೀಂದ್ರ ಜಡೇಜಾ 55, ಶ್ರಯಸ್ ಅಯ್ಯರ್ 52, ನವದೀಪ್ ಸೈನಿ 45; ಟಿಮ್ ಸೌಥಿ 41ಕ್ಕೆೆ 2, ಕಾಲಿನ್ ಡಿ ಗ್ರಾಂಡ್ಹೋಮ್ 54 ಕ್ಕೆೆ 2, ಕೈಲ್ ಜ್ಯಾಮಿಸನ್ 42 ಕ್ಕೆೆ 2, ಹಾಮಿಶ್ ಬೆನೆಟ್ 58 ಕ್ಕೆೆ 2)