ಬೆಂಗಳೂರು, ಮೇ 15,ಪ್ರಿಪೇಯ್ಡ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಶುಕ್ರವಾರ ಮತ್ತೊಂದು ಹೆಚ್ಚಿನ ಡೇಟಾವನ್ನು ನೀಡುವ ವರ್ಕ್ ಫ್ರಮ್ ಹೋಮ್ ಯೋಜನೆಯನ್ನು ಪ್ರಕಟಿಸಿದೆ. ಈ ಬಾರಿ ತ್ರೈಮಾಸಿಕ ಯೋಜನೆ ಲಾಂಚ್ ಆಗಿದ್ದು , ದಿನಕ್ಕೆ 3 ಜಿಬಿಯನ್ನು ಕೇವಲ ರೂ 999 ಕ್ಕೆ 84 ದಿನಗಳವರೆಗೆ ನೀಡುತ್ತದೆ.ಈ ಹೊಸ ಯೋಜನೆಯು ಜಿಯೋದಿಂದ ಜಿಯೋ ಮತ್ತು ಲ್ಯಾಂಡ್‌ಲೈನ್‌ಗೆ ಉಚಿತ ಮತ್ತು ಅನಿಯಮಿತ ಕರೆ ಮಾಡುವ ಅವಕಾಶವನ್ನು ನೀಡುತ್ತದೆ. ಅಲ್ಲದೆ ಇದರೊಂದಿಗೆ ಜಿಯೋದಿಂದ ಇತರ ಮೊಬೈಲ್‌ಗೆ 3,000 ನಿಮಿಷಗಳ ಕರೆಗಳನ್ನು ಮಾಡುವ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಉಚಿತವಾಗಿ ನೀಡುತ್ತದೆ ಮತ್ತು ನಿತ್ಯ 3 ಜಿಬಿ ಹೈ-ಸ್ಪೀಡ್ ಡೇಟಾವನ್ನು ಮತ್ತು ನಂತರ 64 ಕೆಬಿಪಿಎಸ್ ನಲ್ಲಿ ಅನಿಯಮಿತ ಡೇಟಾ ಬಳಕೆ ಅವಕಾಶ ಮಾಡಿಕೊಡುತ್ತಿದೆ, ಜೊತೆಗೆ ಬಳಕೆದಾರರಿಗೆ ಜಿಯೋ ಆಪ್ಸ್ ಗಳನ್ನು ಉಚಿತವಾಗಿ ಬಳಕೆ ಮಾಡುವ ಅವಕಾಶವನ್ನು ನೀಡುತ್ತಿದೆ.
ಲಾಕ್‌ಡೌನ್ ಆದಾಗಿನಿಂದಲೂ ಹೆಚ್ಚಿನ ಮಂದಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ವೇಗದ ಡೇಟಾದ ಅಗತ್ಯವು ಹೆಚ್ಚಾಗಿದೆ. ಇದರೊಂದಿಗೆ ಮನೆಯಲ್ಲಿಯೇ ಇರುವುದರಿಂದ ಹೆಚ್ಚಿನ ಮನರಂಜನೆಗಾಗಿ ಹುಡುಕುತ್ತಿದ್ದಾರೆ. ಈ ಅಗತ್ಯವನ್ನು ಪರಿಗಣಿಸಿ, ಜಿಯೋ ಈ ಹೊಸ ವರ್ಕ್ ಫ್ರಮ್ ಹೋಮ್ ತ್ರೈಮಾಸಿಕ ಪ್ಲಾನ್ ಅನ್ನು ಲಾಂಚ್ ಮಾಡಿದ್ದಾರೆ.
ಈ ಮೊದಲು ಜಿಯೋ ದಿನಕ್ಕೆ 2 ಜಿಬಿ ಡೇಟಾವನ್ನು ನೀಡುವಂತಹ ಹೊಸ ವರ್ಕ್ ಫ್ರಮ್ ಹೋಮ್ ವಾರ್ಷಿಕ ಯೋಜನೆಯನ್ನು ಶೇ.33ರಷ್ಟು ಹೆಚ್ಚಿನ ಲಾಭದೊಂದಿಗೆ ರೂ. 2399 ಕ್ಕೆ ಘೋಷಿಸಿತು. ಇದರೊಂದೊಗೆ ಜಿಯೋ 336 ದಿನಗಳ ವ್ಯಾಲಿಟಿಡಿ ಹೊಂದಿರುವ ದಿನಕ್ಕೆ 1.5 ಜಿಬಿ ಡೇಟಾವನ್ನು ರೂ. 2,121 ರ ದಿನಕ್ಕೆ ನೀಡುತ್ತಿದೆ.ರೀಚಾರ್ಜ್‌ಗಳ ನಿರಂತರ ಲಭ್ಯತೆ: ಡಿಜಿಟಲ್ ರೀಚಾರ್ಜ್‌ಗಳು: ಪ್ರತಿ ಜಿಯೋ ಬಳಕೆದಾರರು ತಮ್ಮ ರೀಚಾರ್ಜ್‌ಗಳನ್ನು ಮೈಜಿಯೊ ಅಪ್ಲಿಕೇಶನ್ ಮತ್ತು ಜಿಯೋ .ಕಾಮ್ ವೆಬ್‌ಸೈಟ್ ಮೂಲಕ ಮಾಡಿಕೊಳ್ಳಬಹುದಾಗಿದೆ. ವಾಲೆಟ್‌ಗಳು ಮತ್ತು ಡಿಜಿಟಲ್ ಪಾಲುದಾರರಾದ ಫೋನ್‌ಪೇ, ಪೇಟಿಎಂ, ಜಿಪೇ, ಅಮೆಜಾನ್ ಪೇ, ಮೊಬಿಕ್ವಿಕ್, ಫ್ರೀಚಾರ್ಜ್ ಮತ್ತು ಇನ್ನೂ ಅನೇಕ ಮೂಲಗಳಿಂದ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.