ನೂತನ ತಾಲೂಕಾ ತಹಶಿಲ್ದಾರ ಅಧಿಕಾರ ಸ್ವಿಕಾರ

ಲೋಕದರ್ಶನ ವರದಿ

ತಾಳಿಕೋಟೆ 10;  ನೂತನ ತಾಳಿಕೋಟೆ ತಾಲೂಕಿನ ತಹಶಿಲ್ದಾರರಾಗಿ ನಿಂಗಪ್ಪ ಅವರು ಗುರುವಾರರಂದು ಅಧಿಕಾರ ವಹಿಸಿಕೊಂಡರು.

   ಈ ಹಿಂದೆ ತಹಶಿಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಎಚ್.ಅರಕೇರಿ ಅವರಿಗೆ ತಿಕೋಟಾ ತಹಶಿಲ್ದಾರ ಕಚೇರಿಗೆ ವಗರ್ಾವಣೆಗೊಂಡಿದ್ದರಿಂದ ಅವರ ಜಾಗೆಗೆ ನಿಂಗಪ್ಪ ಅವರು ಅಧಿಕಾರ ವಹಿಸಿಕೊಂಡರು.

  ನೂತನವಾಗಿ ಅಧಿಕಾರ ವಹಿಸಿಕೊಂಡ ತಾಲೂಕಾ ತಹಶಿಲ್ದಾರ ನಿಂಗಪ್ಪ ಅವರು ಮಾತನಾಡಿ ತಾಳಿಕೋಟೆ ಪಟ್ಟಣವು ಐತಿಹಾಸಿಕ ಹಿನ್ನೇಲೆಯನ್ನು ಹೊಂದಿದೆ ಅಂತಹ ತಾಳಿಕೋಟೆ ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ರೀತಿಯಲ್ಲಿ ಅತೀ ವೇಗದ ರೀತಿಯಲ್ಲಿ ಕಾರ್ಯಕೆಲಸಗಳನ್ನು ಮಾಡಿಕೊಡಲು ಮುಂದಾಗುತ್ತೇನೆ ಅಲ್ಲದೇ ಈ ಹಿಂದೆ ತಹಶಿಲ್ದಾರ ಎಸ್.ಎಚ್.ಅರಕೇರಿ ಅವರು ಹೊಸದಾಗಿ ಮಂಜೂರಿಯಾಗುವ ಹಾಗೂ ಈಗೀರುವ ತಹಶಿಲ್ದಾರ ಕಛೇರಿಯ ನಿರ್ವಹಣೆಗಾಗಿ ಮಿನಿ ವಿಧಾನ ಸೌಧಕ್ಕೆ ಸಕರ್ಾರಕ್ಕೆ ವರದಿ ಕಳುಹಿಸಿದ್ದಾರೆ ಅವರ ಕಾರ್ಯದ ಫಲವನ್ನು ಯಶಸ್ವಿಗೊಳಿಸಲು ಮುಂದಾಗುತ್ತೇನೆಂದರು.

   ಈ ಸಮಯದಲ್ಲಿ ವಗರ್ಾವಣೆಗೊಂಡ ತಹಶಿಲ್ದಾರ ಎಸ್.ಎಚ್.ಅರಕೇರಿ, ಉಪ ತಹಶಿಲ್ದಾರ ಅನೀಲ ಚವ್ಹಾಣ, ಆರ್.ಎಸ್.ಬಾಬಾನಗರ, ಎಚ್.ಎಂ.ಕುಲಕಣರ್ಿ, ರಾಘವೇಂದ್ರ ಅಥಗರ್ಾ, ಒಳಗೊಂಡಂತೆ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು