ನವದೆಹಲಿ, ನ 21: ಹೊಸ ಶಿಕ್ಷಣ ನೀತಿ ಎನ್ ಇ ಪಿ ಗೆ ಸಂಬಂಧಿಸಿದಂತೆ ತಜ್ಞರು ಮತ್ತು ವಿವಿಧ ಸಂಬಂಧಪಟ್ಟವರಿಂದ ಎರಡು ಲಕ್ಷಕ್ಕೂ ಹೆಚ್ಚು ಸಲಹೆಗಳು ಸ್ವೀಕೃತವಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಸಚಿವರು, ಕಸ್ತೂರಿ ರಂಗನ್ ನೇತೃತ್ವದ ಸಮಿತಿ ನೀಡಿರುವ ವರದಿ ಸಂಬಂಧ ಸುದೋರ್ಘ ಸಮಾಲೋಚನೆ ನಡೆಸಲಾಗಿದೆ. ರಾಜ್ಯಗಳ ಶಿಕ್ಷಣ ಸಚಿವರು, ವಿವಿಧ ರಾಜ್ಯಗಳ ಸಂಸದರು, ಶಿಕ್ಷಣ ತಜ್ಞರು, ಪೋಷಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ವಿವಿಧ ಮೂಲಗಳಿಂದ ದೊರೆತ ಸಲಹೆಗಳನ್ನು ವಿಶ್ಲೇಷಿಸಿ ಹೊಸ ಶಿಕ್ಷಣ ನೀತಿಯ ಕರಡನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆದಿದೆ ಎಂದರು.
ಪ್ರಸ್ತುತ ಸಕರ್ಾರ ಅಧಿಕಾರಕ್ಕೆ ಬರುವ ಮುನ್ನವೇ ಎನ್ ಇ ಪಿ ಕಾರ್ಯ ಆರಂಭವಾಗಿತ್ತು ಎಂದು ಸಹ ಅವರು ತಿಳಿಸಿದ್ದಾರೆ.
ಸುಮಾರು 42 ಲಕ್ಷ ಶಿಕ್ಷಕರು, ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಣ ವಲಯದ ಅಧಿಕಾರಿಗಳಿಗಾಗಿ ಆಗಸ್ಟ್ 21 ರಂದು ನಿಷ್ಠತಾ ಎಂಬ ರಾಷ್ಟ್ರವ್ಯಾಪಿ ಶಿಕ್ಷಕರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಅಲ್ಲದೇ 20 ಕೇಂದ್ರೀಯ ಶಾಲೆಗಳನ್ನು ಸಹ ತೆರೆಯಲಾಗಿದೆ.