ಮುಂಬೈ, ನ 17 : ತಮ್ಮ ಗಾತ್ರ ಹಾಗೂ ಬಣ್ಣದ ಕಾರಣಕ್ಕಾಗಿ ಎಂದಿಗೂ ಕೀಳರಿಮೆಗೆ ಗುರಿಯಾಗುವುದಿಲ್ಲ ಎಂದು ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಹೇಳಿದ್ದಾರೆ. ಬಾಲಿವುಡ್ ನಲ್ಲಿ ವಿಭಿನ್ನ ಸ್ಟೈಲ್ ಸ್ಟೇಟ್ ಮೆಂಟ್ ನೀಡಿರುವ ಭೂಮಿ ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ. ಇಲ್ಲಿಯವರೆಗೆ ಎಂದಿಗೂ ತಮ್ಮ ಗಾತ್ರ ಹಾಗೂ ಬಣ್ಣದ ಬಗ್ಗೆ ಕೀಳರಿಮೆ ಉಂಟಾಗಿಲ್ಲ ಎಂದಿರುವ ಭೂಮಿ, ತಾವು ಯಾವಾಗಲೂ ತಮ್ಮನ್ನು ಸೆಕ್ಸಿ ಎಂದು ಪರಿಗಣಿಸಿದ್ದು, ಆಕರ್ಷಕವಾಗಿದ್ದೇನೆ ಎಂಬ ನಂಬಿಕೆ ಹೊಂದಿದ್ದೇನೆ. ಈ ಹಿಂದೆ ಚಿತ್ರವೊಂದಕ್ಕಾಗಿ ದೇಹದ ತೂಕವನ್ನು 90 ಕೆಜಿಗೆ ಹೆಚ್ಚಿಸಿಕೊಂಡಿದ್ದಾಗಲೂ ಚಿಕ್ಕ ಬಟ್ಟೆಗಳನ್ನು ಧರಿಸುತ್ತಿದ್ದೆನು ಎಂದಿದ್ದಾರೆ. ಭೂಮಿ ನಟಿಸಿರುವ ಬಾಲಾ ಚಿತ್ರ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅವರ ಮುಂದಿನ ಚಿತ್ರ 'ಪತಿ ಪತ್ನಿ ಔರ್ ಓ' ಡಿಸೆಂಬರ್ 6ರಂದು ತೆರೆ ಕಾಣಲಿದೆ. ಈ ಚಿತ್ರದಲ್ಲಿ ಭೂಮಿಯೊಂದಿಗೆ ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ.