ಮಾತುಕತೆ : ಅಜಿತ್ ಧೋವಲ್ ಭಾಗಿ

ನವದೆಹಲಿ, ಡಿ 21 ಭಾರತ-ಚೀನಾ ಗಡಿ ಪ್ರಶ್ನೆಯ ವಿಶೇಷ ಪ್ರತಿನಿಧಿಗಳ 22 ನೇ ಸಭೆ ರಾಷ್ಟ್ರ ರಾಜಧಾನಿಯಲ್ಲಿಂದು ನಡೆಯಲಿದೆ. ಭಾರತೀಯ ನಿಯೋಗದ ನೇತೃತ್ವವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಹಿಸಲಿದ್ದು, ವಿದೇಶಾಂಗ ಸಚಿವ ವಾಂಗ್ ಯಿ ಚೀನಾ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ಮಾಮಲ್ಲಾಪುರದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ 2 ನೇ ಅನೌಪಚಾರಿಕ ಶೃಂಗಸಭೆಯ ನಂತರ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ ಮೊದಲ ಸಭೆ ಇದಾಗಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು "ಎರಡೂ ಕಡೆಯವರಿಗೆ ಸ್ವೀಕಾರಾರ್ಹ" ಗಡಿ ಸಮಸ್ಯೆಗೆ ನ್ಯಾಯಯುತ ಮತ್ತು ಸಮಂಜಸವಾದ ಪರಿಹಾರಕ್ಕಾಗಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. “ವಿಶೇಷ ಪ್ರತಿನಿಧಿ (ಎಸ್ಆರ್) ಮಾತುಕತೆಗಳು ಮುಖ್ಯ ಮಾತುಕತೆ ಮತ್ತು ಕಾರ್ಯತಂತ್ರದ ಸಂವಹನಗಳಿಗೆ ಪ್ರಮುಖ ವೇದಿಕೆಯಾಗಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.