ಶೇಡಬಾಳ ಮುಖ್ಯ ದ್ವಾರದಲ್ಲಿ ಮಿಜರ್ಿ ಅಣ್ಣಾರಾಯರ ಪುತ್ಥಳಿ ನಿಮರ್ಿಸಿ: ನಾವಲಗಿ

ಕಾಗವಾಡ 23: ಕನ್ನಡ ಸಾಹಿತ್ಯದಲ್ಲಿ 10ನೇ ಶತಮಾನದಿಂದ ಕನ್ನಡದ ಖ್ಯಾತ ಕವಿಗಳಾದ ರನ್ನ, ಪೊನ್ನ, ಪಂಪ, ಜನ್ನ, ನಾಗಚಂದ, ಅತ್ತಿಮಬ್ಬೆ 20ನೇ ಶತಮಾನದಲ್ಲಿ ಸಾಹಿತ್ಯರತ್ನ ಮಿಜರ್ಿ ಅಣ್ಣಾರಾಯರು ನೀಡಿರುವ ಸಾಹಿತ್ಯಗಳು ಗಮನಿಸಿದರೆ ಕನ್ನಡ ನಾಡಿಗೆ ಜೈನ ಸಮಾಜದ ಕವಿಗಳು, ಸಾಹಿತಿಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ಕನರ್ಾಟಕ ಜಾನಪದ ಪರಿಷತ್ತ ಬೆಳಗಾವಿ ಜಿಲ್ಲಾ ಸಮೀತಿ ಅಧ್ಯಕ್ಷ ಡಾ. ಸಿ.ಕೆ.ನಾವಲಗಿ ಹೇಳಿದರು.

ಶನಿವಾರ ದಿ. 22ರಂದು ಶೇಡಬಾಳದ ಶ್ರೀ ಕೃಷ್ಣಾ ಶಿಕ್ಷಣ ಅಭಿವೃದ್ಧಿ ಸಮೀತಿಯ ಅಪ್ಪಾಸಾಹೇಬ ಪಾಟೀಲ ಸ್ಮಾರಕ ಸಭಾ ಭವನದಲ್ಲಿ ಸಾಹಿತ್ಯರತ್ನ ಮಿಜರ್ಿ ಅಣ್ಣಾರಾಯ ಸ್ಮಾರಕ ಸಾಹಿತ್ಯ ಪ್ರತಿಷ್ಠಾನ ಇವರ ವತಿಯಿಂದ ಮಿಜರ್ಿ ಅಣ್ಣಾರಾಯರ 43ನೇ ಪುಣ್ಯಸ್ಮರಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.

ಮುಲ್ಕಿ ಪರೀಕ್ಷೆ ಓದಿರುವ ಮಿಜರ್ಿ ಅಣ್ಣಾರಾಯರು 12 ಕಾದಂಬರಿಗಳು ರಚಿಸಿದ್ದಾರೆ. ಇವರ ಬರೆದ ಕಾದಂಬರಿ ವಿಷಯ ಎಂ.ಎ ಪದವಿಗೆ ಓದುತ್ತಿರುವ ವಿದ್ಯಾಥರ್ಿಗಳ ಪಠ್ಯ ಪುಸ್ತಕಗಳಲ್ಲಿ ಪಾಠವಾಗಿ ಮುದ್ರಿಸಿದ್ದಾರೆ. ಅವರು ಬರೆದ 'ನಿಸರ್ಗ, 'ರಾಷ್ಟ್ರ ಪುರುಷ', 'ಹದಿಗೆಟ್ಟ ಹಳ್ಳಿ, 'ಎರಡು ಹೆಜ್ಜೆ', 'ಜೈವಂತಿ', ಮುಂತಾದ 12 ಕೃತಿಗಳು ರಚಿಸಿದ್ದಾರೆ. ಇಂದಿನ ಯುವ ಪೀಳಿಗಿಗೆ ಮಿಜರ್ಿ ಅಣ್ಣಾರಾಯರು ರಾಜ್ಯದಲ್ಲಿ ಶೇಡಬಾಳ ಗ್ರಾಮದ ಹೆಸರು ಸುವರ್ಣ ಅಕ್ಷರಗಳಲ್ಲಿ ಬರೆದಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವದಾದರೆ ಹೊರ ಗ್ರಾಮಗಳಿಂದ ಶೇಡಬಾಳಕ್ಕೆ ಬರುವ ಮುಖ್ಯ ದ್ವಾರದಲ್ಲಿ ಅವರ ಪುತ್ಥಳಿ ಮತ್ತು ಪ್ರವೇಶ ದ್ವಾರ ನಿಮರ್ಿಸಬೇಕು. 12 ಕೃತಿಗಳು ಪುನರ್ ಮುದ್ರಿಸಿ, ರಾಜ್ಯ ಸಕರ್ಾರದಿಂದ ಮಿಜರ್ಿ ಅಣ್ಣಾರಾಯ ಪ್ರತಿಷ್ಠಾನ ಸಂಸ್ಥೆ ಸ್ಥಾಪಿಸಬೇಕೆಂದು ಡಾ. ಸಿ.ಕೆ.ನಾವಲಗಿ ಹೇಳಿದರು.

ದಕ್ಷಿಣ ಕನರ್ಾಟಕದವರಾಗಿದ್ದರೆ ಜ್ಞಾನಪೀಠ ಪ್ರಶಸ್ತಿ ಪಡಿಬಹುದಿತ್ತು:

ಮಿಜರ್ಿ ಅಣ್ಣಾರಾಯರು ಸಾಹಿತ್ಯ ಕ್ಷೇತ್ರದಲ್ಲಿ ಕನರ್ಾಟಕ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆದರೆ ಇವರು ಉತ್ತರ ಕನರ್ಾಟಕದವರಾಗಿದ್ದರಿಂದ ರಾಜ್ಯ ಸಕರ್ಾರ ಅಷ್ಟೇನು ಆಸಕ್ತಿ ತೋರಲಿಲ್ಲಾ. ಆದರೆ, ದಕ್ಷಿಣ ಕನರ್ಾಟಕದವರಾಗಿದ್ದರೆ ಇವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸುತ್ತಿತ್ತು ಎಂದು ಡಾ. ಸಿ.ಕೆ.ನಾವಲಗಿ ನೊಂದು ಹೇಳಿದರು.

ಮಿಜರ್ಿ ಅಣ್ಣಾರಾಯ ಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷ ಡಾ. ಅಶೋಕ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡುವಾಗ ಮಿಜರ್ಿ ಅಣ್ಣಾರಾಯರು ನಮ್ಮ ಶೇಡಬಾಳ ಗ್ರಾಮದವರಾಗಿದ್ದು, ನಮಗೆ ಹೆಮ್ಮೆಯಿದೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪನೆಮಾಡಿ ಪ್ರತಿವರ್ಷ ಅವರ ಪುಣ್ಯಸ್ಮರಣೆ ಆಚರಿಸುವಾಗ ವಿದ್ಯಾಥರ್ಿಗಳಿಗೆ ಅವರ ಕಾದಂಬರಿಗಳ ಮೇಲೆ ಭಾಷಣ, ಲೇಖನ ಸ್ಪಧರ್ೆಗಳು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದ್ದೇವೆ. ಬರುವ ದಿನಗಳಲ್ಲಿ ಪ್ರವೇಶ ದ್ವಾರದಲ್ಲಿ ಪುತ್ಥಳಿ ನಿಮರ್ಿಸುವ ಬಗ್ಗೆ ನೀಡಿರುವ ಸೂಚನೆ ಪಾಲಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ವಿದ್ಯಾಥರ್ಿಗಳಿಗಾಗಿ "ಕನ್ನಡ ಸಾಹಿತ್ಯಗಳ ಪಂಪ ಕವಿಯ ಕೊಡುಗೆ" ವಿಷಯಗಳ ಮೇಲೆ ಹಮ್ಮಿಕೊಂಡ ಪ್ರಬಂಧ ರಚನಾ ಲೇಖನ ಸ್ಪಧರ್ೆಯಲ್ಲಿ ಕಾಗವಾಡ ತಾಲೂಕಿನ 17 ಶಾಲೆಯ ವಿದ್ಯಾಥರ್ಿಗಳು ಸ್ಪಧರ್ಿಸಿದರು. ಇದರಲ್ಲಿ ಪ್ರಥಮ ದೀಕ್ಷಿತಾ ಗಣೆ, ದ್ವೀತಿಯ ಸೌಮ್ಯಾ ಕುರಚೆ(ಸುಭಲಸಾಗರ ಪ್ರೌಢಶಾಲೆ), ತೃತೀಯ ಲಕ್ಷ್ಮೀ ಖೋತ(ಸನ್ಮತಿ ವಿದ್ಯಾಲಯ, ಶೇಡಬಾಳ) ಬಹುಮಾನ ಪಡೆದರು.

ಅಥಣಿಯ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ರಾವಸಾಬ ಜಕನೂರ, ಪ್ರತಿಷ್ಠಾನದ ಉಪಾಧ್ಯಕ್ಷ ಪಿ.ಡಿ.ನ್ಯಾಮಗೌಡರ, ಅಥಣಿ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಲ್ಲಿಕಾಜರ್ುನ ಕನಶೆಟ್ಟಿ, ಮಾಮಾಸಾಹೇಬ ಪೊಲೀಸ್ ಪಾಟೀಲ, ಭರತ ನಾಂದ್ರೆ, ಬಾಬಾಸಾಹೇಬ ಯಂದಗೌಡರ, ಭರಮು ಮಾಲಗಾಂವೆ, ಸುನೀಲ ಪಾಟೀಲ, ವಿ.ಟಿ.ಪಾಟೀಲ, ವಿಜಯಕುಮಾರ ಮಗದುಮ್ಮ, ಎಂ.ಡಿ.ಅಲಾಸೆ, ನಿವೃತ್ತ ಶಿಕ್ಷಕ ಪದ್ಮನ್ನಾ ವಸವಾಡೆ, ಮಿಜರ್ಿ ಅಣ್ಣಾರಾಯರ ಮೊಮ್ಮಗ ಕುಮಾರ ಮಿಜರ್ಿ ಸೇರಿದಂತೆ ಮಿಜರ್ಿ ಅಣ್ಣಾರಾಯರ ಅಭಿಮಾನಿಗಳು ಪಾಲ್ಗೊಂಡಿದ್ದರು.ಮುಖ್ಯಾಧ್ಯಾಪಕ ಶೀತಲ ಮಾಲಗಾಂವೆ ಸ್ವಾಗತಿಸಿ ವಂದಿಸಿದರು.