ರಾಷ್ಟ್ರೀಯ ಓಪನ್ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ಗೂ ನೀರಜ್ ಚೋಪ್ರಾ ಅನುಮಾನ

ನವದೆಹಲಿ, ಅ 10:   ಭಾರತದ ಅನುಭವಿ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು ಇಂದಿನಿಂದ ರಾಂಚಿಯಲ್ಲಿ ಆರಂಭವಾಗಿರುವ 59ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಬುಧವಾರವಷ್ಟೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ ನೀರಜ್ ಚೋಪ್ರಾ ಅವರು ಈ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಸಮ್ಮತಿ ಸೂಚಿಸಿತ್ತು. ಈ ಬಗ್ಗೆ ಎಎಫ್ಐ ತನ್ನ ಅಧಿಕೃತ ಟ್ವಿಟರ್  ನಲ್ಲಿ ಮಾಹಿತಿ ನೀಡಿತ್ತು. " ನೀರಜ್ ಚೋಪ್ರಾ ಅವರು 59ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಗೆ ಮರಳುತ್ತಿದ್ದಾರೆ ಎಂದು ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ ಟ್ವೀಟ್ ಮಾಡಿತ್ತು. ಆದರೆ, ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಮೊಣಕೈ ಇನ್ನೂ ಸಂಪೂರ್ಣ ಚೇತರಿಕೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ 21ರ ಪ್ರಾಯದ ಜಾವೆಲಿನ್ ಥ್ರೋ ಪಟು ಚಾಂಪಿಯನ್ಶಿಪ್ ವಿಥ್ ಡ್ರಾ ಮಾಡಿಕೊಳ್ಳುವಂತೆ ತಮ್ಮ ಕೋಚ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.  ಕಾಮನ್ವೆಲ್ತ್ ಕ್ರೀಡಾಕೂಟ ಹಾಗೂ ಕಳೆದ ವರ್ಷ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಕಳೆದ ವರ್ಷ ಸೆಪ್ಟೆಂಬರ್ 19 ರಂದು ಜಾಲಹಳ್ಳಿಯಲ್ಲಿ ನಡೆದಿದ್ದ ಸವರ್ಿಸ್ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 83.90ಮೀ ದೂರ ಜಾವೆಲಿನ್ ಎಸೆದಿದ್ದರು. ಅಲ್ಲಿನಿಂದ ಇಲ್ಲಿಯವರೆಗೂ ಅಂದರೆ ಒಂದು ವರ್ಷದಿಂದ ನೀರಜ್ ಚಾಂಪಿಯನ್ಶಿಪ್ನಿಂದ ಹೊರಗುಳಿದಿದ್ದಾರೆ.  ದೋಹಾದಲ್ಲಿ ನಡೆದಿದ್ದ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್ನಲ್ಲೂ ನೀರಜ್ ಚೋಪ್ರಾ ಅವರು ಸಂಪೂರ್ಣ ಗುಣಮುಖರಾಗದ ಕಾರಣ ಆಡಿರಲಿಲ್ಲ.