ವಿಜ್ಞಾನದ ಕುರಿತು ಜಾಗೃತಿ ಮೂಡಿಸುವುದು ಅಗತ್ಯ: ದೊಡಮನಿ
ತಾಳಿಕೋಟಿ, 01; ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು ಈ ಉದ್ದೇಶಕ್ಕಾಗಿಯೇ "ರಾಷ್ಟ್ರೀಯ ವಿಜ್ಞಾನ ದಿನ"ವನ್ನು ಆಚರಿಸಲಾಗುತ್ತದೆ ಎಂದು ಸರ್ಕಾರಿ ಪ್ರಾಥಮಿಕ ಶಾಲೆಯ ಹರನಾಳದ ಸಹಶಿಕ್ಷಕ ರಾಕೇಶ ದೊಡಮನಿ ಹೇಳಿದರು.
ಶನಿವಾರ ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯ ಐ.ಕ್ಯೊ.ಎ.ಸಿ ಸಂಯೋಜಿತ ವಿಜ್ಞಾನ ವಿಭಾಗದ ಅಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶ್ನಿಸದೆ ಒಪ್ಪಿಕೊಳ್ಳುವುದು ಅಜ್ಞಾನ, ಪ್ರಶ್ನಿಸುವ, ಪ್ರಯೋಗಿಕ, ವಿಚಾರಣೆ ಮೂಲಕ ಒಪ್ಪಿಕೊಳ್ಳುವದೇ ವಿಜ್ಞಾನ. ವಿಜ್ಞಾನ ಮತ್ತು ಅದರ ಪ್ರಾಮುಖ್ಯತೆ ಪ್ರತಿಯೊಬ್ಬರು ತಿಳಿಯಬೇಕು ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ ಮಾಡುವ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಆರ್.ಎಂ. ಬಂಟನೂರ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಜ್ಞಾನಿಗಳು ಇಲ್ಲಿಯವರೆಗೆ ಕಂಡುಹಿಡಿದಿದ್ದೆಲ್ಲವೂ ವಿಜ್ಞಾನದ ಪ್ರಗತಿಯಿಂದ ಸಾಧ್ಯವಾಗಿದೆ. ಮನುಷ್ಯನು ಬಾಹ್ಯಾಕಾಶವನ್ನು ತಲುಪಿರುವುದು ವಿಜ್ಞಾನದ ಸಹಾಯದಿಂದ ಮಾತ್ರ. ವಿಜ್ಞಾನವು ರೋಬೋಟ್‌ಗಳು, ಕಂಪ್ಯೂಟರ್‌ಗಳನ್ನು ತಯಾರಿಸಲು ಸಾಧ್ಯವಾಗಿಸಿದೆ. ವಿಜ್ಞಾನವು ನಮ್ಮ ಜೀವನಕ್ಕೆ ಬಹಳ ಮುಖ್ಯವಾದ ಕೊಡುಗೆಯನ್ನು ನೀಡುತ್ತದೆ, ನಮ್ಮ ದೇಶದಲ್ಲಿ ಅನೇಕ ಮಹಾನ್ ವಿಜ್ಞಾನಿಗಳು ನಿಧನರಾಗಿದ್ದಾರೆ. ಈ ಮಹಾನ್ ವಿಜ್ಞಾನಿಗಳ ಕೊಡುಗೆಯೇ ಇಂದು ವಿಶ್ವದಲ್ಲಿ ಭಾರತವನ್ನು ವಿಶಿಷ್ಟ ಗುರುತಾಗಿ ಮಾಡಿದೆ ಎಂದು ತಿಳಿಸಿದರು. ವಿಜ್ಞಾನ ಪಠ್ಯ ಪುಸ್ತಕದಲ್ಲಿ ಚಿತ್ರಗಳ ರಂಗೋಲಿ ಯನ್ನು ಕಾಲೇಜಿನ 20ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಬಿಡಿಸಿದರು ಅವರಲ್ಲಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ನೀಡಲಾಯಿತು. ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾವಿಧಿಯನ್ನ ವಿಜ್ಞಾನ ಉಪನ್ಯಾಸಕ ಸುರೇಶ್ ಬಡಿಗೇರ್ ಬೋಧಿಸಿದರು ವೇದಿಕೆ ಮೇಲೆ ಐಕ್ಯೂಎಸಿ ಸಂಯೋಜಕ ಉಮೇಶ್ ಮಂಗೊಂಡ ವಿಜ್ಞಾನ ಉಪನ್ಯಾಸಕ ಎ.ಎ. ಗಂಗನಗೌಡರ. ಸುರೇಶ್ ಬಡಿಗೇರ್. ಎಂ.ಎ ಪದ್ದಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೂರ್ಣಿಮಾ ಹಾಗೂ ನಿವೇದಿತಾ ಪ್ರಾರ್ಥಿಸಿದರು ಐಶ್ವರ್ಯ ಇವರು ಸ್ವಾಗತಿಸಿದರು ಕಾವೇರಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.