ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ

ಹಾವೇರಿ16:  ಬರ, ನೆರೆ, ಕೋವಿಡ್ ಕಾರಣದಿಂದ ಆಥರ್ಿಕ ಸಂಕಷ್ಟದಲ್ಲಿರುವ ರೈತರಿಗೆ ಪ್ರಸಕ್ತ ವರ್ಷ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

ಕರ್ಜಗಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಮುಂಗಾರು ಹಂಗಾಮಿನ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆಮಾಡಿ ಅವರು ಮಾತನಾಡಿ, ಈ ವರ್ಷ ಮುಂಗಾರು ಹಾಗೂ ಹಿಂಗಾರು ಬಿತ್ತನೆಗೆ ರೈತರಿಗೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ನೆರೆ ಹಾವಳಿ ಮತ್ತು ಬರಗಾಲದಿಂದಾದ ಆಹಾರ ಧಾನ್ಯಗಳ ಇಳುವರಿ ಕಡಿಮೆಯಾಗಿದೆ. ಇದನ್ನು ಸರಿ ದೂಗಿಸಲು ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಸೇರಿದಂತೆ ಹಿಂಗಾರು ಹಂಗಾಮಿನಲ್ಲಿ ರೈತರನ್ನು ಆಥರ್ಿಕ ಸಂಕಷ್ಟದಿಂದ ಹೊರ ತರಲು ರಾಜ್ಯದ ಮುಖ್ಯಮಂತ್ರಿಗಳು ಸಂಕಲ್ಪ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಸಕಾಲಕ್ಕೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಸರಬರಾಜಿಗೆ  ಸಕರ್ಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

   ರೈತರು ಗುಣಮಟ್ಟದ ಬಿತ್ತನೆ ಬೀಜಗಳನ್ನು ಆಯ್ಕೆಮಾಡಿಕೊಳ್ಳಬೇಕು. ಸಕರ್ಾರದಿಂದ ವಿತರಿಸುವ ಪ್ರಮಾಣಿಕೃತ ಮಾನ್ಯತೆ ಪಡೆದ ಉತ್ತಮ ಗುಣಮಟ್ಟದ ಬೀಜಗಳನ್ನು  ಖರೀದಿಸಿ ಬಿತ್ತನೆಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಈ ಸಂದರ್ಭದಲ್ಲಿ ರೈತರಿಗೆ ಸಲಹೆ ನೀಡಿದರು.

 ಸಹಾಯಕ ಕೃಷಿ ನಿದರ್ೇಶಕ ಆರ್.ಕೆ.ಕುಡಪಲಿ ಮಾತನಾಡಿ, ಹಾವೇರಿ ತಾಲೂಕಿನಲ್ಲಿ 65 ಸಾವಿರ ಹೆಕ್ಟೇರ ಮುಂಗಾರು ಬಿತ್ತನೆ ಪ್ರದೇಶವಿದೆ. ಈ ಪೈಕಿ 20 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶವಿದೆ. 35 ಸಾವಿರ ಹೆಕ್ಟೇರ್ ಮೆಕ್ಕೆ ಜೋಳ, 10 ಸಾವಿರ ಹೆಕ್ಟೇರ್ ಹೈಬ್ರೀಡ್ ಹತ್ತಿ, ಒಂದು ಸಾವಿರ ಹೆಕ್ಟೇರ್ ಸೋಯಾ ಅವರೆ, ಒಂದು ಸಾವಿರ ಹೆಕ್ಟೇರ್ ಶೇಂಗಾ, 500 ಹೆಕ್ಟೇರ್ ತೊಗರಿ ಉಳಿದಂತೆ ಹೆಸರು, ಹೈಬ್ರೀಡ್ ಜೋಳ ಬೆಳೆ ಹಾಕುವ ನಿರೀಕ್ಷೆ ಇದೆ ಎಂದು ತಿಳಿಸಿದರು.

       ಜಿ.ಪಂ ಅಧ್ಯಕ್ಷ ಬಸನಗೌಡ ದೇಸಾಯಿ ಅವರು ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದರು.  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಕೃಷಿ ಸಮಾಜದ ಸದಸ್ಯರಾದ ಪ್ರಕಾಶ ಹಂದ್ರಾಳ, ಬಸವರಾಜ ಹಾದಿಮನಿ, ಬಸವರಾಜ ಡೊಂಕಣ್ಣನವರ, ನಾಗರಾಜ ವಿಭೂತಿ, ಶಿವಪುತ್ರಪ್ಪ ಶಿವಣ್ಣನವರ, ಮಲ್ಲೇಶಪ್ಪ ಮತ್ತಿಹಳ್ಳಿ, ರವಿ ಕಬಾಡಿ, ಸಂಗಮೇಶ ಸುರಳಿಹಳ್ಳಿ, ಜಯಪ್ಪ ಶಟ್ಟರ, ಕೃಷಿ ಇಲಾಖೆಯ ಕೊಟ್ರೇಶ.ಜಿ., ಡಿ.ಪಿ.ದೊಡ್ಡಮನಿ ಉಪಸ್ಥಿತರಿದ್ದರು.