ಲೋಕದರ್ಶನ ವರದಿ
ಬೆಳಗಾವಿ 07: ನಗರದ ಮಿಲೇನಿಯಂ ಗಾರ್ಡನ್ನಲ್ಲಿ ಜೈನ್ ಕಾಲೇಜ್ ಆಫ್ ಬಿಬಿಎ, ಬಿಸಿಎ ಮತ್ತು ಕಾಮಸರ್್ ವತಿಯಿಂದ ಪರೌಸಿಯಾ-20 ಎಂಬ ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ ನಡೆಯಿತು.
ಬುಧವಾರ ಮತ್ತು ಗುರುವಾರ ನಡೆದ ಉತ್ಸವವನ್ನು ಶುಫಿ ಸ್ಕೂಲ್ ಆ್ಯಪ್ನ ಸಿಇಓ ಸಿದ್ಧಾರ್ಥ ಜಂಬಗಿ ಉದ್ಘಾಟಿಸಿದರು. ಪ್ರೊ. ಕೆ.ಜಿ. ಮಲಾಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸುನಿಲ್ ದೇಸಾಯಿ ಉಪಸ್ಥಿತರಿದ್ದರು.
ಚಿನ್ನಾರಿ ಮುತ್ತಾ ಖ್ಯಾತಿಯ ಚಿತ್ರನಟ ವಿಜಯ ರಾಘವೇಂದ್ರ ಅವರ ಹಾಡುಗಾರಿಕೆ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ತಂದಿತು.
ಮುಖ್ಯ ಅತಿಥಿಯಾಗಿ ಜಾವೇದ ಮುಷಾಪುರ, ವಿನಾಯಕ ಬಡಿಗೇರ, ವ್ಯವಸ್ಥಾಪಕ ಸದಸ್ಯರಾದ ಡಿ.ಟಿ. ದೇಸಾಯಿ, ರಾಧೆಶಾಮ್ ಹೆಡಾ, ಶ್ರದ್ಧಾ ಕೆ., ರಾಜ್ ಠಾಕೂರ್, ಪ್ರೊ. ಉದಯಚಂದ್ರ, ಪ್ರೊ. ಧಾರವಾಡ್ಕರ್, ಶೇಷ ಪಟ್ಟಂಕರ್, ಪ್ರೊ. ಸುನಿಲ್ ದೇಸಾಯಿ ಮತ್ತಿತರರು ಪಾಲ್ಗೊಂಡಿದ್ದರು.
ವಾಣಿಜ್ಯ ವಿಭಾಗದ ಪ್ರಮುಖ ಸ್ಪಧರ್ೆಯನ್ನು ಹುಬ್ಬಳ್ಳಿಯ ಆಕ್ಸಫಡರ್್ ಮಹಾವಿದ್ಯಾಲಯ ಗೆದ್ದುಕೊಂಡಿತು. ಎನ್ವೈಜಸ್ ಟ್ರೋಫಿಯನ್ನು ಬೆಂಗಳೂರಿನ ಕ್ರೈಸ್ಟ್ ಬಿಬಿಎ ಕಾಲೇಜು ತನ್ನದಾಗಿಸಿಕೊಂಡಿತು. ಟೆಕ್ಕಿಗಳಿಗಾಗಿ ಟೆಕ್ಕಿಗಳು ಸ್ಪಧರ್ೆಯಲ್ಲಿ ಗೋಗ್ಟೆ ಬಿಸಿಎ ಕಾಲೇಜು ವಿಜಯಿಯಾಯಿತು.