ರಾಷ್ಟ್ರ ಮತ್ತು ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನ ಶಿಬಿರ

National and State Level Republic Day march Camp

ಕ.ವಿ.ವಿ. ಧಾರವಾಡದ ಎನ್‌.ಎಸ್‌.ಎಸ್‌. ಸ್ವಯಂ ಸೇವಕ/ಸೇವಕಿಯರು ಆಯ್ಕೆ 

ಧಾರವಾಡ 08: 2025ನೇ, ಜನೇವರಿ 26 ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ಜರುಗುವ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನ ಸಮಾರಂಭದಲ್ಲಿ ಭಾಗವಹಿಸಲು ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಆಯ್ಕೆಯಾಗಿರುವ ಕುಮಾರ. ಮಹೇಶಗೌಡ, ಜೆ,ಎಸ್‌.ಎಸ್‌. ಎಸ್‌.ಎಂ.ಐ. ಯು.ಜಿ ್ಘ ಪಿ.ಜಿ ಕಾಲೇಜು ಧಾರವಾಡ ಹಾಗೂ ಮಾನಿಕ್‌-ಷಾ ಪರೇಡ್ ಗ್ರೌಂಡ್ ಬೆಂಗಳೂರಿನಲ್ಲಿ ಜರಗುವ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಕರ್ನಾಟಕ ಸರ್ಕಾರದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯ್ಕೆಯಾಗಿರುವ ಕುಮಾರ. ಶುಭಮ್‌. ಎಂ. ಜಿ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ, ಕುಮಾರ. ಸಂಜೀವಕುಮಾರ. ಎಂ, ಶ್ರೀ ಶಂಕರ ಪದವಿ ಮಹಾವಿದ್ಯಾಲಯ, ನವಲಗುಂದ, ಕುಮಾರಿ. ದಿವ್ಯಾಶ್ರೀ. ಕೆ, ಕೆ.ಎಲ್‌.ಇ. ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ, ಹುಬ್ಬಳ್ಳಿ ಮತ್ತು ಕುಮಾರಿ. ಅನನ್ಯ. ಎಸ್‌. ಹೀರೆಮಠ, ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು, ಗುಡಗೇರಿ ಇವರುಗಳು ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾರೆ.  

ಆಯ್ಕೆಯಾಗಿರುವ ಎಲ್ಲ ಎನ್‌.ಎಸ್‌.ಎಸ್‌. ಸ್ವಯಂ ಸೇವಕ/ಕಿಯರಿಗೆ, ಮಹಾವಿದ್ಯಾಲಯಗಳ ಪ್ರಾಚಾರ್ಯರು  ಹಾಗೂ ಕಾರ್ಯಕ್ರಮ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲು ಅವಕಾಶ ಮಾಡಿಕೊಟ್ಟಿರುವ ಪ್ರಾದೇಶಿಕ ನಿರ್ದೇಶಕರು, ಪ್ರಾಂತೀಯ ಎನ್‌.ಎಸ್‌.ಎಸ್‌. ಕೇಂದ್ರ, ಭಾರತ ಸರ್ಕಾರ, ಬೆಂಗಳೂರು, ರಾಜ್ಯ ಎನ್‌.ಎಸ್‌.ಎಸ್‌. ಯುವ ಅಧಿಕಾರಿಗಳು ಹಾಗೂ ರಾಜ್ಯ ಎನ್‌.ಎಸ್‌.ಎಸ್‌. ಅಧಿಕಾರಿಗಳು, ರಾ.ಸೇ.ಯೋ. ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ಇವರಿಗೆ ಪ್ರೊ. ಎಂ. ಬಿ. ದಳಪತಿ, ಕಾರ್ಯಕ್ರಮ ಸಂಯೋಜಕರು, ಕ.ವಿ.ವಿ. ಧಾರವಾಡ ಧನ್ಯವಾದಗಳನ್ನು ತಿಳಿಸಿದರು.  

ಕ.ವಿ.ವಿ. ಧಾರವಾಡದ, ಡಾ. ಜಯಶ್ರೀ ಎಸ್‌. ಕುಲಪತಿಗಳು, ಡಾ. ಎ. ಚನ್ನಪ್ಪ, ಕೆ.ಎ.ಎಸ್‌., ಕುಲಸಚಿವರು, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಮೌಲ್ಯಮಾಪನ ಕುಲಸಚಿವರು ಹಾಗೂ ಡಾ. ಸಿ. ಕೃಷ್ಣಮೂರ್ತಿ, ಹಣಕಾಸು ಅಧಿಕಾರಿಗಳು (ಪ್ರಭಾರಿ) ಇವರು ರಾಷ್ಟ್ರ ್ಘ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅತ್ಯುತ್ತಮ ಕವಾಯತು ಪ್ರದರ್ಶಿಸುವ ಮೂಲಕ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿ, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುವಂತಾಗಲಿ ಎಂದು ಎನ್‌.ಎಸ್‌.ಎಸ್‌. ಸ್ವಯಂ ಸೇವಕ/ಕಿಯರಿಗೆ ಶುಭಾಶಯಗಳನ್ನು ಕೋರಿರುವರು.