ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಪರಿವರ್ತನೆ ತರುತ್ತದೆ

ಲೋಕದರ್ಶನ ವರದಿ

ಬೆಳಗಾವಿ 06: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ಪರಿವರ್ತನೆ ತರುತ್ತದೆ. ಅದು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುತ್ತದೆ ಎಂದು ಲಿಂಗರಾಜ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎ.ಮಠಪತಿ ನುಡಿದರು.

ಗುರುವಾರ ನಗರದ ರಾಮನಗರದಲ್ಲಿ (ವಡ್ಡರ ಛಾವಣಿ) ಲಿಂಗರಾಜ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖ ಗುರಿ ಹಳ್ಳಿಗಳ ಉದ್ಧಾರ, ಇದರಿಂದ ಅನುಭವ ಕಲಿಕೆ ಸಾಧ್ಯವಾಗುತ್ತದೆ. ಎನ್.ಎಸ್.ಎಸ್ ಪರೋಪಕಾರಿ ಮತ್ತು ಸಹಾಯ ಮನೋಭಾವ ಬೆಳೆಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ ರಾಷ್ಟ್ರೀಯ ಸೇವಾ ಯೋಜನೆಯಿಂದ ಯುವಜನತೆ ವಿಕಾಸ ಸಾಧ್ಯವಾಗುತ್ತದೆ. ಎನ್.ಎಸ್.ಎಸ್ ವಿದ್ಯಾರ್ಥಿಗಳು ಮತ್ತೊಬ್ಬರಿಗಾಗಿ ಬದುಕಬೇಕೆಂದು ತಿಳಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿ.ಆರ್.ಸಿ ಮನಿಯಾರ್ ಸರ್, ರಾಮನಗರ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಮತಿ.ಜಿ.ಜಿ.ಶಿವಪುಜಿಮಠ, ರಾಮನಗರ ಮರಾಠಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ.ಎಸ್.ಬಿ.ನಾವಲಗಿ, ರಾಮನಗರ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಶ್ರೀಮತಿ.ಆರ್.ಎಂ.ಮುಲ್ಲಾ ಸಹ್ಯಾದ್ರಿ ನಗರ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಶ್ರೀ.ಮರೆನ್ನವರ ಉಪಸ್ಥಿತರಿದ್ದರು. ಸಂದೀಪ ಪ್ರಾರ್ಥಿಸಿದ, ನೇಹಾ ಸ್ವಾಗತಿಸಿದರು, ಡಾ.ಹೆಚ್.ಎಮ್.ಚನ್ನಪ್ಪಗೋಳ ಪ್ರಾಸ್ತಾವಿಕ ಮಾತುಗಳನ್ನಾಡಿದರು ಪ್ರೊ.ಸಿದ್ದನಗೌಡ ಪಾಟೀಲ ವಂದಿಸಿದರು ಯಶವಂತ ನಿರೂಪಿಸಿದರು.