ಅಥಣಿ 15: ನಮ್ಮ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವನೆ ಹಾಗೂ ವಿಜ್ಞಾನ ಪ್ರಾಮುಖ್ಯತೆಯನ್ನು ಹೇಳಿಕೊಟ್ಟು ಅವರನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯವಾಗಿದೆ ಹಾಗೂ ಇಂತಹ ರಾಷ್ಟ್ರಮಟ್ಟದ ವಿಚಾರಸಂಕೀರಣಗಳ ಮೂಲಕ ಅವರ ಜ್ಞಾನವನ್ನೂ ಸಹ ವಿಸ್ತರಿಸಬಹುದಾಗಿದೆ ಎಂದು ಅರವಿಂದ ದೇಶಪಾಂಡೆ ಹೇಳಿದರು.
ಅವರು ಸ್ಥಳೀಯ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಜೆ ಇ ಶಿಕ್ಷಣ ಸಂಸ್ಥೆಯ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವತಿಯಿಂದ ಆರ್.ಎಚ್ .ಕುಲಕರ್ಣಿ ಸಬಾಭವನದಲ್ಲಿ ಹಮ್ಮಿಕೊಂಡ ಒಂದು ದಿನದ ವಿದ್ಯಾರ್ಥಿಗಳ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಮಾತನಾಡುತ್ತಿದ್ದರು.
ಸುತ್ತಮುತ್ತಲಿನ ಪರಿಸರದಲ್ಲಿರುವ ಮರ, ಗಿಡ, ಗಾಳಿ, ಬೆಳಕು, ಬೆಂಕಿ ಮುಂತಾದವುಗಳು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು ಅವುಗಳನ್ನು ವೇದ, ಪುರಾಣ, ಗ್ರಂಥಗಳಲ್ಲಿ ಉಲ್ಲೇಖಿಸಿಲು ಪ್ರಮುಖವಾದ ಕಾರಣವೇ ವಿಜ್ಞಾನವಾಗಿದೆ ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಡಾ. ಯು ಎಸ್ ಪೂಜಾರಿ ಮಾತನಾಡಿ ಕೇವಲ ಅಂಕಗಳ ಸಂಗ್ರಹ ನಮ್ಮ ಉದ್ದೇಶವಾಗಬಾರದು. ಜ್ಞಾನ ಸಂಗ್ರಹ ನಾವು ವಿದ್ಯಾಲಯಗಳಿಗೆ ಬರುವ ಉದ್ದೇಶವಾಗಬೇಕು ಎಂದು ವಿದ್ಯಾರ್ಥಿ ಗಳಿಗೆ ಕಿವಿ ಮಾತು ಹೇಳಿದ ಅವರು ಸಾಧ್ಯವಾದಷ್ಟು ವಿದ್ಯಾಥರ್ಿ ಜೀವನದಲ್ಲಿ ಎಲ್ಲೆಡೆಯಿಂದಲೂ ದೊರೆಯುವ ಜ್ಞಾನವನ್ನು ಕೂಡಿಟ್ಟುಕೊಳ್ಳಿ. ಭವಿಷ್ಯ ಜೀವನಕ್ಕೆ ಅದು ತುಂಬ ಸಹಾಯವಾಗುತ್ತದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಪ್ರಾಚಾರ್ಯ ಆರ್.ಎಮ್.ದೇವರಡ್ಡಿ ವಿಜ್ಞಾನಕ್ಕೆ ತಮ್ಮದೇಯಾದ ಕೊಡುಗೆಯನ್ನು ನೀಡುವಂತಹ ಕಾರ್ಯ ವಿದ್ಯಾರ್ಥಿ ಗಳಿಂದಾಗಲಿ. ವಿದ್ಯಾರ್ಥಿ ಗಳ ಅನ್ವೇಷಣೆಯಿಂದ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಹ ಉಪಯೋಗವಾಗುವಂತಾಗಬೇಕು ಎಂದರು.
ವಿಚಾರ ಸಂಕಿರಣದಲ್ಲಿ ಬೇರೆ ಬೇರೆ ನಗರ, ಗ್ರಾಮ, ತಾಲೂಕಿನ ಹಲವಾರು ವಿದ್ಯಾಥರ್ಿಗಳು ಭಾಗವಹಿಸಿ ತಮ್ಮ ವಿಚಾರವನ್ನು ಮಂಡಿಸಿದರು.
ಸಂಯೋಜಕ ಡಾ ಪ್ರಶಾಂತ ಮಗದುಮ್, ಆರ್.ಎಸ್.ಪಾಟೀಲ, ಗಜಾನನ ಕೋರೆ, ಆರ್.ಎಸ್.ಕುಲಕಣರ್ಿ, ಜಿ ಎಮ್ ಕುಲಕರ್ಣಿ , ಆರ್.ಎಮ್.ಹೊನಮೋರೆ, ಇಸ್ಮಾಯಿಲ ನಂದಗಡಕರ, ಆನಂದ ಹವಾಯಿ, ರೂಪಾ ಬೊರಗಾರ, ಆರ್.ಬಿ.ಪಠಾಣ, ರಾಕೇಶ ಚೌಗಲಾ, ಸನಾಉಲ್ಲಾ ನಂದಗಡಕರ, ಪಿ ಎಲ್ ನರಗಟ್ಟಿ, ಎನ ಬಿ ಝರೆ, ಆರ್.ಎ.ನಾಯಿಕ ಮುಂತಾದವರು ಉಪಸ್ಥಿತರಿದ್ದರು.