ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯು ಸುವರ್ಣ ಯುಗ :ಯದುವೀರ್

ಮೈಸೂರು, ಜೂನ್ 04, ಮೈಸೂರಿನ ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136ನೇ ಜಯಂತಿ ಅಂಗವಾಗಿ ಗುರುವಾರ ಪುಷ್ಪ ನಮನ ಸಲ್ಲಿಸಿದ್ದಾರೆ. "ನಾಲ್ವಡಿಯವರ ಜನ್ಮ ವರ್ಷಾಚರಣೆಯಂದು ನಾವು ಅರಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಅವರ ಆಡಳಿತವನ್ನು ಮೈಸೂರಿನ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಸಮೃದ್ಧಿಯ ಆ ಸುವರ್ಣ ಯುಗವನ್ನು ಮತ್ತೆ ನೋಡಬೇಕೆಂಬುದು ನನ್ನ ಆಸೆ" ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.ಕೃಷ್ಣರಾಜ ಸಾಗರ ಜಲಾಶಯದಲ್ಲಿ (ಕೆಆರ್‌ಎಸ್) ನಾಲ್ವಡಿಯವರ ಪ್ರತಿಮೆಯನ್ನು ನಿರ್ಮಿಸುವ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ರಾಜಮಾತೆ ಪ್ರಮೋದಾ ದೇವಿಯವರ ಅಭಿಪ್ರಾಯವೇ ತಮ್ಮ ಅಭಪ್ರಾಯವೂ ಆಗಿರುತ್ತದೆ” ಎಂದಿದ್ದಾರೆ. 

ಪ್ರಸ್ತುತ ಕೊರೋನಾ ವೈರಸ್ ಸಾಂಕ್ರಾಮಿಕವು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿದೆ ಎಂದ ಅವರು, ಇಂತಹ ವಿದ್ಯಮಾನವು ಶತಮಾನಕ್ಕೆ ಒಮ್ಮೆ ಸಂಭವಿಸುತ್ತದೆ. ಲಾಕ್‌ಡೌನ್ ಅನ್ನು ಕಾರ್ಯಗತಗೊಳಿಸುವ ಮೂಲಕ ನಾವು ಕೊರೋನಾ ವೈರಸ್ ಸಾಂಕ್ರಾಮಿಕವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೇವೆ. ವೈರಸ್ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಡಳಿತಾವಧಿಯಲ್ಲಿ ಸಾಮಾಜಿಕ ನ್ಯಾಯ, ಶಿಕ್ಷಣ, ಆರೋಗ್ಯ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕಲೆಗಳಿಗೆ ಮಹತ್ವ ನೀಡಿದರು. ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಮೀಸಲಾತಿಯನ್ನು ಪರಿಚಯಿಸುವ ಮೂಲಕ ಸುಧಾರಣೆಗಳನ್ನು ತಂದು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.