ದಯಾಮರಣ ಕೋರಿದ ರಾಜೀವ್ ಗಾಂಧಿ ಹತ್ಯೆ ಆರೋಪಿ ನಳಿನಿ

Nalini

ಚೆನ್ನೈ, ನ 30-ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಆರೋಪಿಗಳಲ್ಲಿ ಒಬ್ಬರಾದ ನಳಿನಿ, ತಮ್ಮ ಮತ್ತು ಪತಿ ಮುರುಗನ್ ಅಲಿಯಾಸ್ ಶ್ರೀಹರನ್ ಅವರ ದಯಾಮರಣಕ್ಕೆ ಅನುಮತಿ ಕೋರಿದ್ದಾರೆ. 

  ತಾವು ಕಳೆದ 28 ವರ್ಷಗಳಿಂದ ಸಜಾಬಂಧಿಯಾಗಿರುವ ವೆಲ್ಲೂರು ಜೈಲಾಧಿಕಾರಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಆದ್ದರಿಂದ ದಯಾಮರಣ ನೀಡಬೇಕು ಎಂದು ಕೋರಿ  ನಳಿನಿ ಅವರು ಪ್ರಧಾನಿ ನರೇಂದ್ರ ಮೋದಿ, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮರೇಷ್ ಪ್ರತಾಪ್ ಸಹಿ ಮತ್ತು ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.