ಕಾಗವಾಡ 25: ನ್ಯಾಕ್ ಶ್ರೇಣಿ ಪಡೆಯುವದಕ್ಕೆ ಎಲ್ಲ ಸಿಬ್ಬಂದಿಯು ಒಗ್ಗಟ್ಟಿನಿಂದ ಅಪೇಕ್ಷಿತ ಮಾಹಿತಿಯನ್ನು ಸರಿಯಾಗಿ ನೀಡಿದರೆ ಮತ್ತು ಸೂಕ್ತವಾದ ದಾಖಲೆಗಳನ್ನು ಸಲ್ಲಿಸುವದರಿಂದ ಈಗ ಸುಲಭವಾಗಿದೆ. ನ್ಯಾಕ್ ನೀಡಿದ ಪರಿಷ್ಕೃತ ನಿಯಮಗಳ ಮಾಹಿತಿಯನ್ನು ನೀಡುವಲ್ಲಿ ಅತ್ಯಂತ ಪಾರದರ್ಶಕವಾಗಿದ್ದು, ಸಂಸ್ಥೆ-ಸ್ನೇಹಿಯಾಗಿವೆ ಎಂದು ನಿಪ್ಪಾಣಿ ಕೆಎಲ್ಇ ಸಂಸ್ಥೆಯ ಜಿ.ಆಯ್.ಬಾಗೇವಾಡಿ ಕಾಲೇಜಿನ ಪ್ರಾಚಾರ್ಯ ಮತ್ತು ನ್ಯಾಕ್ ಸದಸ್ಯರಾದ ಡಾ.ಎಂ.ಬಿ. ಕೋಥಳೆ ಹೇಳಿದರು.
ಸ್ಥಳೀಯ ಶಿವಾನಂದ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಒಂದು ದಿನದ ಸಿಬ್ಬಂದಿ ಪ್ರಶಿಕ್ಷಣ ಮತ್ತು ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು. ನ್ಯಾಕ್ ನೀಡಿದ ಶ್ರೇಣಿಯನ್ನು ನಿಗದಿತ ಅವಧಿಯವರೆಗೆ ಮಾತ್ರ ಬಳಸಬೇಕು ಮತ್ತು ಮುಂದಿನ ಅವರ್ತನಕ್ಕೆ ಮುಂಚಿತವಾಗಿ ಸಿದ್ಧತೆಗೊಳಿಸಿ ಸಂಸ್ಥೆಗೆ ಅನುಕೂಲ ಮಾಡಿಕೊಡುವದು ಸಿಬ್ಬಂದಿಯ ಆದ್ಯ ಕರ್ತವ್ಯವೆಂದು ಹೇಳಿದರು. ಅಲ್ಲದೆ ಎಸ್.ಎಸ್.ಆರ್ದಲ್ಲಿಯ ಎಲ್ಲ ಆಧಾರಗಳನ್ನು ದೀರ್ಘವಾಗಿ ಚಚರ್ಿಸಿ ಸಿಬ್ಬಂದಿಯಲ್ಲಿ ಭರವಸೆ ತುಂಬಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿ ಮಾತನಾಡಿ, ಮಹಾವಿದ್ಯಾಲಯವು ಸಾಕಷ್ಟು ಸಾಧನೆಗಳನ್ನು ಮಾಡಿದ್ದು, ಅವುಗಳನ್ನು ಸರಿಯಾಗಿ ಪ್ರಚುರ ಪಡಿಸಿ ಶ್ರೇಣಿ ಪಡೆಯಬೇಕಾಗಿದೆಯೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಯು.ಜಿ.ಸಿ. ಕೋಶದ ಕಾಯರ್ಾಧ್ಯಕ್ಷ ಡಾ.ಎಸ್.ಓ.ಹಲಸಗಿವರು 2000ನೇ ವರ್ಷದಿಂದ ಇಲ್ಲಿಯವರೆಗೆ ನ್ಯಾಕ್ಗೆ ಮಾಹಿತಿ ನೀಡುವಲ್ಲಿ ಕಾಲಕಾಲಕ್ಕೆ ನಿಯಮಗಳು ಬದಲಾಗುತ್ತಿದ್ದು, ಸಧ್ಯ ಮೂರನೆಯ ಅವರ್ತನಕ್ಕೆ ಕಾಲೇಜು ಸಿದ್ಧಗೊಳ್ಳಬೇಕಾದ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯವಾಗಿದೆ. ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿ ಶ್ರೇಣಿ ಉತ್ತಮಗೊಳಿಸಲು ತರಬೇತಿ ಆಯೋಜಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಪ್ಪಾಣಿ ಕಾಲೇಜಿನ ಡಾ.ಬಿ.ಎಂ.ಹಿರೇಮಠ ಹಾಗೂ ಸ್ಥಳೀಯ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ಪ್ರೊ.ಎಸ್.ಎಸ್.ಬಾಗನೆಯವರು ಸ್ವಾಗತಿಸಿ, ಡಾ.ಎಸ್.ಎ.ಕಕರ್ಿ ನಿರೂಪಿಸಿದರು. ಸಂಯೋಜಕ ಪ್ರೊ. ಬಿ.ಎ.ಪಾಟೀಲ ವಂದಿಸಿದರು.