ಪಾಕಿಸ್ತಾನದಲ್ಲಿ ಟೆಸ್ಟ್‌ ಸರಣಿ ಆಡುವ ಬಗ್ಗೆ ಇಂದು ನಿರ್ಧಾರ: ನಜ್ಮುಲ್ ಹಸನ್

ಢಾಕಾ, ಜ 9,ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಆಡುವ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಸ್ತಾವನೆಯನ್ನು ಸ್ವೀಕರಿಸುವ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇಂದು ತೀರ್ಮಾನಿಸಲಿದೆ. ಇದಕ್ಕೂ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪಾಕಿಸ್ತಾನದಲ್ಲಿ ಟಿ-20 ಸರಣಿ ಆಯೋಜಿಸುವಂತೆ ತಿಳಿಸಿತ್ತು. ಟಿ-20 ಸರಣಿಯ ವೇಳೆ ಅಲ್ಲಿನ ಭದ್ರತೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಗಮನಿಸಿದ ಬಳಿಕ ಟೆಸ್ಟ್ ಸರಣಿಗೆ ಯೋಚನೆ ಮಾಡುವುದಾಗಿ ಹೇಳಿತ್ತು. ಆದಾಗ್ಯೂ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಪಾಕಿಸ್ತಾನ ಎರಡು ಟೆಸ್ಟ್ ಆಡಲು ಪ್ರಸ್ತಾವನೆ ಮುಂದಿಟ್ಟಿದ್ದು, ಐಸಿಸಿ ಟಿ-20 ವಿಶ್ವಕಪ್ ಸಮೀಪಿಸುತ್ತಿದ್ದಂತೆ ಟಿ-20 ಸರಣಿ ಆಯೋಜನೆ ಮಾಡುವ ಬಗ್ಗೆ ತಿಳಿಸಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್, “ ನಮಗೆ ಸಮಯ ತುಂಬಾ ಕಡಿಮೆ ಇದೆ, ಹಾಗಾಗಿ, ಗುರುವಾರ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ,’ ಎಂದಿದ್ದಾರೆ.

“ಪಾಕಿಸ್ತಾನ ಪ್ರವಾಸ ಮಾಡುವು ಕುರಿತು ತಂಡದ ಪ್ರತಿಯೊಬ್ಬರಿಂದ ಅಭಿಪ್ರಾಯ ಸಂಗ್ರಹಿಸುತ್ತೇವೆ. ದ್ವಿಪಕ್ಷೀಯ ಟಿ-20 ಸರಣಿ ಬಗ್ಗೆ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡುವ ಬಗ್ಗೆ ಇನ್ನೂ  ಸ್ಪಷ್ಟತೆ ಇಲ್ಲ,” ಎಂದು ಹೇಳಿದ್ದಾರೆ.ಇತ್ತೀಚೆಗೆ ಪಾಕಿಸ್ತಾನ ಮೂರು ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿತ್ತು.“ನಾವು ಅವರಿಗೆ ಟಿ-20 ಸರಣಿ ಆಡುತ್ತೇವೆ ಹೇಳಿದ್ದೆವು. ಆದರೆ, ಅವರು ಎರಡು ಟೆಸ್ಟ್ ಪಂದ್ಯಗಳಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಚುಟುಕು ಸರಣಿಯನ್ನು ಟಿ-20 ವಿಶ್ವಕಪ್ ಸಮೀಪವಾಗುತ್ತಿದ್ದಂತೆ ಆಯೋಜನೆ ಮಾಡುತ್ತೇವೆ. ಇದೀಗ ಟೆಸ್ಟ್‌ ಸರಣಿ ಆಡುವಂತೆ ಪ್ರಸ್ತಾವನೆಯನ್ನು ಪಿಸಿಬಿ ಮುಂದಿಟ್ಟಿದೆ. ಈ ಬಗ್ಗೆ ಗುರುವಾರ ತೀರ್ಮಾನ ತೆಗೆದುಕೊಳ್ಳುತ್ತೇವೆ,” ಎಂದು ಹಸನ್ ತಿಳಿಸಿದ್ದಾರೆ.