ನಗರ ಸಭೆ ಸಾರ್ವಜನಿಕರ ಸ್ವತ್ತು: ಪರಿಪೂರ್ಣ ಅಭಿವೃದ್ಧಿಗೆ ಅಧ್ಯಕ್ಷ ಚಂಪಕ ಬಿಸಲಹಳ್ಳಿ ಕರೆ

Nagar Sabha public asset: President Champaka Bisalahalli calls for perfect development

ನಗರ ಸಭೆ ಸಾರ್ವಜನಿಕರ ಸ್ವತ್ತು: ಪರಿಪೂರ್ಣ ಅಭಿವೃದ್ಧಿಗೆ ಅಧ್ಯಕ್ಷ  ಚಂಪಕ ಬಿಸಲಹಳ್ಳಿ ಕರೆ

ರಾಣೇಬೆನ್ನೂರು  12:  ನಗರಸಭೆ ಸಾರ್ವಜನಿಕರ ಸ್ವತ್ತು. ಅಂದವಾಗಿ,ಚಂದವಾಗಿ ಸ್ವಚ್ಛತೆಯಿಂದ ಸಾರ್ವಜನಿಕರ ಗಮನ ಸೆಳೆಯುವಂತೆ ಸಂರಕ್ಷಿಸಿಕೊಳ್ಳಬೇಕಾಗುವಂತಹ ಜವಾಬ್ದಾರಿ ಎಲ್ಲ ನಾಗರಿಕರದಾಗಿದೆ ಎಂದು ನೂತನ ಅಧ್ಯಕ್ಷ   ಚಂಪಕ ರಮೇಶ್ ಬಿಸಲಹಳ್ಳಿ ಮತ್ತು ಉಪಾಧ್ಯಕ್ಷ ನಾಗರಾಜ ಪವಾರ ( ಮಣಿ.ಕೆಎಂಪಿ)  ಸಾರ್ವಜನಿಕರಲ್ಲಿ ಮನವಿ ಮಾಡಿದರು. ಬುಧವಾರ ನಗರಸಭಾ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ನಗರಸಭೆ ಸಮಗ್ರ ಅಭಿವೃದ್ಧಿ ಕುರಿತಂತೆ ಮಾತನಾಡಿದರು. ಸಾರ್ವಜನಿಕರು ತಮ್ಮ ಮನೆಯಿಂದಲೇ ಆರಂಭದಲ್ಲಿ ಹಸಿ ಕಸ, ಮತ್ತು ಒಣಕಸವನ್ನು ವಿಂಗಡಿಸಬೇಕು ವಿಂಗಡಿಸಿದ ಕಸವನ್ನು ತಮ್ಮಲ್ಲಿ ಬರುವ ನಗರ ಸಭೆಯ ಆಟೋ, ಟಿಪ್ಪರ್‌ಗಳಿಗೆ ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು.ಸಾರ್ವಜನಿಕರು ತಮ್ಮ ಮನೆಯ ಅಕ್ಕ-ಪಕ್ಕ ಇರುವಂತಹ ಖಾಲಿ ನಿವೇಶನಗಳು ಸ್ವಚ್ಛ ಇಲ್ಲದೇ ಇದ್ದರೇ, ಅಂತಹ ಖಾಲಿ ನಿವೇಶನಗಳ ಮಾಲೀಕರ ಹೆಸರು, ಮೊಬೈಲ್ ನಂಬರ್ ಹಾಗೂ ವಿಳಾಸದ ಸಮೇತ ಈ ಕೆಳಗಿನ ಅಧಿಕಾರಿಗಳ ಮೊಬೈಲ್ ನಂಬರ್ ಗಳಿಗೆ ಫೋಟೊ ಸಮೇತ ವರದಿ ನೀಡಿದಲ್ಲಿ ನಿಯಮಾನುಸಾರವಾಗಿ ನಿವೇಶನ ಸ್ವಚ್ಛಗೊಳಿಸಲಿಕ್ಕೆ ಕ್ರಮ ವಹಿಸಲಾಗುವುದು ಎಂದರು. 

        ನಗರಸಭೆ ಸಮಗ್ರ ಅಭಿವೃದ್ಧಿ ಕುರಿತಂತೆ ಮಾತನಾಡಿದ ಉಪಾಧ್ಯಕ್ಷ ನಾಗೇಂದ್ರಸಾ ಎಂ. ಪವಾರ ಅವರು, ನಮಗಿರುವ ಅಧಿಕಾರದ ಅವಧಿ ಕೇವಲ ಒಂಬತ್ತು ತಿಂಗಳು ಮಾತ್ರ. ಇದೇ ಅವಧಿಯಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಪರವಾದ ಕಾರ್ಯಗಳು ಮಾಡಬೇಕಾದ ಬಹುದೊಡ್ಡ ಸವಾಲು ನಮ್ಮ ಮುಂದಿದೆ. ಇದೇ 20 ರಂದು ಪ್ರಥಮ ಸಭೆ ಜರುಗಲಿದೆ. ಅಲ್ಲಿ ಎಲ್ಲಾ ಅಭಿವೃದ್ಧಿಪರ ವಿಚಾರಗಳನ್ನು  ಚರ್ಚಿಸಿ, ಆಡಳಿತ ಸರ್ವ  ಸದಸ್ಯರ ಅಭಿಪ್ರಾಯದಂತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.       ಪೌರಾಯುಕ್ತ ಎಫ್‌. ಐ.ಇಂಗಳಗಿ ಅವರು ಮಾತನಾಡಿ, ವಾಣಿಜ್ಯ ನಗರದ ಜನರು ಪ್ರಜ್ಞಾವಂತರಿದ್ದಾರೆ. ಹೀಗಾಗಿ ತಾವು ಯಾವುದೇ ವಿಚಾರಗಳು ಮತ್ತು ವಿಷಯಗಳನ್ನು ಪ್ರಕಟಿಸಿದ ಕೂಡಲೇ ಸ್ಪಂದಿಸುವ ಗುಣ ಧರ್ಮ ಹೊಂದಿದ್ದಾರೆ ಇದರಿಂದ ತಮಗೆ ಅತ್ಯಂತ ಸಂತೋಷ ತರುತ್ತಲ್ಲಿದೆ ಎಂದರು.     

  ಸಾರ್ವಜನಿಕರ ದೂರಿನ ಮೇರೆಗೆ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಇದರಿಂದ ಒಣ ಕಸ, ಹಸಿ ಕಸ ಬಹುತೇಕ ವಿಂಗಡಿಸುತ್ತಿದ್ದಾರೆ. ರಸ್ತೆ ಬದಿಯ ಎಲ್ಲಾ ವ್ಯಾಪಾರಿ ಡಬ್ಬಾ ಅಂಗಡಿಗಳ ಮಾಲೀಕರಿಗೆ ತಮ್ಮ ಸುತ್ತಲೂ ಸ್ವಚ್ಛತೆಗಾಗಿ ಸೂಚಿಸಿದ್ದೇವೆ. ಹೋಟೆಲ್ ಸ್ವಚ್ಛತೆ,  ಕುಡಿಯುವ ನೀರು, ಆಹಾರ ಸ್ವಚ್ಛತೆ ಪರಿಗಣಿಸಲು ಖಡಕ್ ಸೂಚನೆ ನೀಡಿರಲಾಗಿದೆ ಎಂದರು. ಉದ್ಯಮೆದಾರರು ಪರವಾನಿಗೆ ಪಡೆಯಬೇಕು, ಮತ್ತು ನವೀಕರಿಸಿಕೊಳ್ಳಬೇಕು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಅಲ್ಲಲ್ಲಿ ಕಸ ಕಡ್ಡಿಗಳನ್ನು, ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು.      ಹೊಸದಾಗಿ ಮನೆ ನಿರ್ಮಿಸುವ ಮಾಲೀಕರು ಅಗತ್ಯ ದಾಖಲಾತಿ ಹೊಂದಬೇಕು. ಮನೆ ಮುಂದೆ ಗಟಾರವನ್ನು ತ್ಯಾಜ್ಯವನ್ನು  ಕಟ್ಟದಂತೆ, ಸೂಚಿಸಲಾಗಿದೆ ಎಂದರು.     ನೀರು ಪಡೆಯಲು ಕಡ್ಡಾಯವಾಗಿ ಸ್ವಯಂ ನಿರ್ಧಾರ ಕೈಗೊಳ್ಳದೆ, ನಗರಸಭೆಯಿಂದ ಎಲ್ಲ ರೀತಿಯ ಪರವಾನಿಗೆಯನ್ನು ಪಡೆಯಬೇಕು, ರಸ್ತೆ ಅಗೆಯಬಾರದು. ನಿಯಮಬಾಹಿರವಾಗಿ ನಡೆದುಕೊಂಡರೆ ಅಧಿಕ ದಂಡವನ್ನು ವಿಧಿಸಲು  ಮುಂದಾಗಿದ್ದೇವೆ ಎಂದು ಪೌರಾಯುಕ್ತರು, ತೆಗೆದುಕೊಂಡ ಕ್ರಮ ಕುರಿತು ಮಾಹಿತಿ ನೀಡಿದರು. ನಗರಸಭೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾದರು, ಏನಾದರೂಮಾಹಿತಿ ಕೊಡಬೇಕಾಗಿದ್ದರೂ, ಅಥವಾ  ಸೇವೆ ಪಡೆಯಬೇಕಾಗಿದ್ದರು ಸಂಬಂಧಿಸಿದ ದೂರವಾಣಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದಿದ್ದಾರೆ.