ನದೀಮ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

 ರಾಂಚಿ, ಅ 19:   ಇಲ್ಲಿನ ಜೆಎಸ್ಸಿಎ ಕ್ರೀಡಾಂಗಣದಲ್ಲಿ ಆರಂಭವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಸತತ ಟಾಸ್ ಸೋಲಿನಿಂದ ಕೆಂಗೆಟ್ಟಿದ ಹರಿಣಗಳ ನಾಯಕ ಫಾಫ್ ಡುಪ್ಲೆಸಿಸ್ ಅವರು ಟಾಸ್ಗೆ ಸಹ ಆಟಗಾರ ತೆಂಬಾ ಬವುಮಾ ಅವರನ್ನು ಕಳುಹಿಸಿದ್ದರು. ಆದರೆ, ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಗಾಯಾಳು ಕುಲ್ದೀಪ್ ಯಾದವ್ ಅವರ ಬದಲು ತಂಡಕ್ಕೆ ಆಯ್ಕೆ ಯಾಗಿದ್ದ ಸ್ಪಿನ್ನರ್ ಶಹಬಾಜ್ ನದೀಮ್ ಅವರಿಗೆ ಅಂತಿಮ 11 ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಫ್ರಿಕಾ ತಂಡದಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಏಡೆನ್ ಮರ್ಕರಮ್ ಅವರ ಸ್ಥಾನದಲ್ಲ ಆರಂಭಿಕನಾಗಿ ಕಣಕ್ಕೆ ಇಳಿಯಲಿದ್ದಾರೆ. ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಆವೃತ್ತಿಯಲ್ಲಿ ಎರಡು ಬಾರಿ 50 ವಿಕೆಟ್ ಕಿತ್ತ ಮೊದಲ ಸ್ಪಿನ್ನರ್ ಎಂಬ ದಾಖಲೆಯನ್ನು ಶಹಬಾಜ್ ನದೀಮ್ ಮಾಡಿದ್ದಾರೆ. 2015-16ರ ಆವೃತ್ತಿಯಲ್ಲಿ ಇರು 51 ವಿಕೆಟ್ ಪಡೆದುಕೊಂಡಿದ್ದರು. ತಂಡಗಳು(ಅಂತಿಮ 11) ಭಾರತ: ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ(ಉಪ ನಾಯಕ), ರೋಹಿತ್ ಶಮರ್ಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ವೃದ್ದಿಮನ್ ಸಾಹ (ವಿ.ಕೀ), ಶಹದಾಜ್ ನದೀಮ್, ಮೊಹಮ್ಮದ್ ಶಮಿ. ಉಮೇಶ್ ಯಾದವ್. ದಕ್ಷಿಣ ಆಫ್ರಿಕಾ:  ಡೀನ್ ಎಲ್ಗರ್, ಕ್ವಿಂಟನ್ ಡಿ ಕಾಕ್, ಝುಬೈರ್ ಹಂಝಾ, ಫಾಫ್ ಡುಪ್ಲೆಸಿಸ್( ನಾಯಕ), ತೆಂಬಾ ಬವುಮಾ, ಹೆನ್ರಿಚ್ ಕ್ಲಾಸೆನ್, ಡೇನ್ ಪಿಡ್ತ್, ಜಾರ್ಜ್ ಲಿಂಡೆ, ಏನ್ರಿಚ್ ನಾಡ್ಜ್, ಕಗಿಸೋ ರಬಾಡ, ಲುಂಗಿ ಎನ್ಗಿಡಿ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿ ಸರಣಿಯನ್ನು 2-0 ಅಂತರದಲ್ಲಿ ವಶ ಪಡಿಸಿಕೊಂಡಿದೆ.