ಲೋಕದರ್ಶನವರದಿ
ತಾಳಿಕೋಟೆ:೨೬ ಕೊರೊನಾ ವೈರಸ್ ಹಾವಳಿಯಿಂದ ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಂದ ಮರಳಿ ಆಗಮಿಸಿದ ವಲಸೆ ಕಾಮರ್ಿಕರಿಗೆ ಹೋಳಿಗೆ ಮತ್ತು ಮಾವಿನ ಹಣ್ಣಿನ ಸಿಕರಣೆಯನ್ನು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮಂಗಳವಾರರಂದು ಉಣ ಬಡಿಸಿದರು.
ಈ ಸಮಯದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ನಡಹಳ್ಳಿ ಅವರು ಕೊರೊನಾ ವೈರಸ್ ಹಾವಳಿಗೆ ತುತ್ತಾಗಿ ಸಂಕಷ್ಟಕೊಳಗಾಗಿರುವ ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಂದ ವಲಸಿಗ ಕೂಲಿಕಾಮರ್ಿಕರಿಗೆ ಸುಮಾರು 2 ಸಾವಿರದಾ 400 ಜನರಿಗೆ ಹೋಳಿಗೆ ಸಿಹಿ ಊಟ ಬಡಿಸಬೇಕೆಂಬ ಇಚ್ಚೆ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಅವರ ಸಂಕಷ್ಟಕ್ಕೆ ಸ್ಪಂದಿಸುವಂತಹ ವಾರಿಯಸರ್್ರಾಗಿ ಕೆಲಸ ಮಾಡುತ್ತಿರುವವರ ಬಯಕೆಯಾಗಿತ್ತು ಅವರ ಬಯಕೆಯಂತೆ ವಲಸೆ ಕಾಮರ್ಿಕರು ಸಾಂಸ್ಥಿಕ ಕ್ವಾರೆಟೈಂನ್ಗೆ ಒಳಗಾಗಿರುವಂತ ಎಲ್ಲರಿಗೂ ಹೋಳಿಗೆ ಹಾಗೂ ಮಾವಿನ ಹಣ್ಣಿನ ಸಿಕರಣೆ ಉಣಬಡಿಸುವಂತಹ ಕೆಲಸ ಮಾಡಿದ್ದೇನೆಂದರು.
ಈ ಕಾರ್ಯ ಸಹಕಾರ ನೀಡಿದ ವಾಸು ಹೆಬಸೂರ, ರಾಜು ಹಂಚಾಟೆ, ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಜ್ಜನ, ನೆನಪಿಸಿಕೊಳ್ಳಬೇಕಾಗುತ್ತದೆ ಇದು ಅಲ್ಲದೇ ವಾರಿಯಸರ್್ ಎಲ್ಲರಿಗೂ ಸೌಕರ್ಯಗಳನ್ನು ಕೊಡಲು ಘನಮಠೇಶ್ವರ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿ ತೆಗೆದುಕೊಂಡಿದ್ದೇವು ಅಲ್ಲಿ ನಿತ್ಯ ಅಡುಗೆ ತಯಾರಿಕೆಯನ್ನು ಮಾಡುತ್ತಾ ಬಂದಿದ್ದೇವೆ ಕ್ವಾರಂಟೈನ್ಗೊಳಪಟ್ಟವರಿಗೆ ಊಟ ಒದಗಿಸಲು ತಹಶಿಲ್ದಾರ ಅನೀಲಕುಮಾರ ಢವಳಗಿ ಅವರು ಅತ್ಯಂತ ಯಶಸ್ವಿಯಾಗಿ ಸವಾಲನ್ನು ಎದುರಿಸಿ ಪ್ರತಿಯೊಂದು ವ್ಯವಸ್ಥೆ ಮಾಡಿ ಪ್ರತಿಯೊಬ್ಬ ವ್ಯಕ್ತಿಗೆ ಒಳ್ಳೆಯ ಊಟವನ್ನು ಒದಗಿಸಲು ನಿದರ್ೇಶನ ಮಾಡಿದಕ್ಕೆ ಅಭಿನಂದಿಸುತ್ತೇನೆ.
ಪಿ.ಎಸ್.ಐ.ವಸಂತ ಬಂಡಗಾರ ಅವರೂ ಕೂಡಾ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ತಾಳಿಕೋಟೆ ತಾಲೂಕಾಡಳಿತದ ಮತ್ತು ಮುದ್ದೇಬಹಾಳ ತಾಲೂಕಾಡಳಿತದ ಅಧಿಕಾರಿಗಳು ಹೋಳಿಗೆ ಸಿಕರಣೆ ಊಟ ಬಡಿಸುವದರಲ್ಲಿ ಯಶಸ್ವಿ ಕಾರ್ಯವನ್ನು ಮಾಡಿದ್ದಾರೆ ಅವರಿಗೆ ಅಭಿನಂದಿಸುತ್ತೇನೆಂದರು.
ಈ ಸಮಯದಲ್ಲಿ ತಾಲೂಕಾ ತಹಶಿಲ್ದಾರ ಅನೀಲಕುಮಾರ ಢವಳಗಿ, ಪಿಡಿಓ ನಿಂಗನಗೌಡ ಪಾಟೀಲ, ಶಿವಶಂಕರ ಹಿರೇಮಠ, ವಾಸುದೇವ ಹೆಬಸೂರ, ಎಸ್.ಎಂ.ಸಜ್ಜನ, ಜೈಸಿಂಗ್ ಮೂಲಿಮನಿ, ಸಂಗಮೇಶ ಇಂಗಳಗಿ, ವಿನಾಯಕ ಮಡ್ಡಿ, ಲಾಹೋರಿ, ಕಾಶಿನಾಥ ಮುರಾಳ, ಮಾನಸಿಂಗ್ ಕೊಕಟನೂರ, ಮುದಕಣ್ಣ ಬಡಿಗೇರ, ಸುರೇಶ ಹಜೇರಿ, ಶ್ರೀಕಾಂತ ಪತ್ತಾರ, ಸಾಗರ ಕಟ್ಟಿಮನಿ, ಅಶ್ವಿನ ಬೇದರಕರ, ದತ್ತು ಹೆಬಸೂರ, ತಿಪ್ಪಣ್ಣ ಆದ್ವಾನಿ, ಮಲ್ಲನಗೌಡ ಪೊಲೀಸ್ಪಾಟೀಲ, ಚೇತನ ಶಿಂಧೆ, ಮೊದಲಾದವರು ಉಪಸ್ಥಿತರಿದ್ದರು.