ಲೋಕದರ್ಶನವರದಿ
ತಾಳಿಕೋಟೆ15: ಕೂಲಿನಾಲಿ ಅರಿಸಿಕೊಂಡು ದುಡಿಯಲು ಮಹಾರಾಷ್ಟ್ರಾ ರಾಜ್ಯಕ್ಕೆ ದುಡಿಯಲು ಹೋಗಿದ್ದ ಈ ಭಾಗದ ಜನರಲ್ಲಿ 180 ಜನರು ಮರಳಿ ಸಕರ್ಾರದ ನಿದರ್ೇಶನದಂತೆ ಜಿಲ್ಲಾಡಳಿತವು ಮಾಡಿದ ಸಾರಿಗೆ ವ್ಯವಸ್ಥೆಯ ಮೂಲಕ ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣಕ್ಕೆ ಶುಕ್ರವಾರರಂದು ಆಗಮಿಸಿದ ಬಡ ಕೂಲಿಕಾಮರ್ಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಕ್ಕಳಿಗೆ ಬಿಸ್ಕೀಟ್ಗಳನ್ನು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ವಿತರಿಸಿದರು.
ಈ ಸಮಯದಲ್ಲಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮಾತನಾಡಿ ಕೊರೊನಾ ವೈರಸ್ ಎಂಬ ಹೆಮ್ಮಾರಿ ಮಹಾರಾಷ್ಟ್ರ ರಾಜ್ಯದಲ್ಲಿ ತಾಂಡವ ಆಡುತ್ತಿದೆ ಹೀಗಂತ ಅಲ್ಲಿ ದುಡಿಯಲು ಹೋಗಿ ಮರಳಿ ಬಂದಿರುವವರಿಗೆ ಕೊರೊನಾ ತಗುಲಿದೆ ಎಂಬ ಭಯಬೇಡಾ ಯಾರಿಗೂ ಕೊರೊನಾ ವೈರಸ್ ತಗುಲಿಲ್ಲಾ ಆಗಮಿಸಿದ ಎಲ್ಲರೂ ಶಂಕಿತರಾಗಿದ್ದೀರಿ ಹೊರತು ರೋಗಿಗಳಲ್ಲಾ ಅದು ಬಂದರೂ ಕೂಡಾ ಭಯಪಡುವ ಅಗತ್ಯವಿಲ್ಲಾ ಅದನ್ನು ಹೊಡೆದೊಡಿಸುವ ಸಲುವಾಗಿ ನಮ್ಮ ಆರೋಗ್ಯ ಇಲಾಖೆ ಎಲ್ಲರೀತಿಯಿಂದಲೂ ಸನ್ನದವಾಗಿದೆ.
ಈ ಕೊರೊನಾ ಹೆಮ್ಮಾರಿಯನ್ನು ದೇಶದಿಂದಲೇ ಹೊಡೆದೊಡಿಸಬೇಕೆಂಬ ವಿಚಾರ ಹೊತ್ತ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು ಲಾಕ್ಡೌನ್ ಜಾರಿಗೆ ತಂದಿದ್ದಾರೆ.
ಇದಕ್ಕೆ ದೇಶದ ಎಲ್ಲ ಜನರೂ ಉತ್ತಮ ರೀತಿಯಿಂದ ಸ್ಪಂದಿಸಿದ್ದಾರೆ ಅದರಲ್ಲಿ ನೀವು ಕೂಡಾ ಭಾಗಿಯಾಗಿ ಈ ರೋಗವು ದೇಶದಿಂದ ಹೋಗಲಿ ಎಂಬ ಉದ್ದೇಶದಿಂದ ನಮ್ಮ ಕೆಲಸ ನಿಂತರೂ ಪರವಾಗಿಲ್ಲಾ ದೇಶವು ಸುರಕ್ಷಿತವಾಗಿರಬೇಕೆಂಬ ಮಹಾರಾಷ್ಟ್ರ ರಾಜ್ಯದಲ್ಲಿ ಸುರಕ್ಷತೆಯನ್ನು ಕಾಯ್ದುಕೊಂಡು ಮರಳಿ ತವರಿಗೆ ಆಗಮಿಸಿದ್ದಿರಿ ಸದ್ಯ ನಿವು ಭಯಪಡುವ ಅಗತ್ಯವಿಲ್ಲಾ ನಿಮ್ಮ ಜೊತೆ ನಾನೀದ್ದಿನಿ ಯಾವುದಕ್ಕೂ ಭಯಪಡಬೇಡಿ ನಿಮ್ಮ 15 ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ಮುಗಿದ ಮೇಲೆ ಪ್ರತಿ ಕುಟುಂಭಕ್ಕೂ 1 ತಿಂಗಳಿಗಾಗುವಷ್ಟು ದವಸದಾನ್ಯಗಳ ಕಿಟ್ಗಳನ್ನು ಸಿದ್ದಪಡಿಸಿ ಇಟ್ಟಿದ್ದೇನೆ ನಿಮಗೆ ಮನೆಗೆ ಕಳುಹಿಸುವಾಗ ಎಲ್ಲರಿಗೂ ಕೊಟ್ಟು ಕಳುಹಿಸುತ್ತೇನೆ ಎಲ್ಲರೂ 14 ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ಮುಗಿಯುವವರೆಗೂ ವಸತಿ ನಿಲಯಗಳಿಂದ ಯಾರೂ ಒಬ್ಬರೂ ಹೊರಗೆ ಬರಬಾರದು ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಸಹಕಾರವನ್ನು ಕೊಡಬೇಕೆಂದು ಮನವಿ ಮಾಡಿದ ಅವರು 14 ದಿನಗಳ ಕಾಲ ಕ್ವಾರೆಂಟೈನ್ನಲ್ಲಿ ಇರುವಾಗಿ ಸಂಪೂರ್ಣ ಊಟದ ವ್ಯವಸ್ಥೆಯನ್ನು ತಾಲೂಕಾಡಳಿತದಿಂದ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಮಯದಲ್ಲಿ ತಾಲೂಕಾ ತಹಶಿಲ್ದಾರ ಅನೀಲಕುಮಾರ ಢವಳಗಿ, ಸಿಪಿಐ ಆನಂದ ವಾಘ್ಮೋಡೆ, ಪಿಎಸ್ಐ ವಸಂತ ಬಂಡಗಾರ, ಡಾ.ಪ್ರಕಾಶ ಹುಕ್ಕೇರಿ, ರವಿ ಅಂಚಿಗಾವಿ, ಪುರಸಭೆ ಮುಖ್ಯಾಧಿಕಾರಿ ಸಿ.ವ್ಹಿ.ಕುಲಕಣರ್ಿ, ಮುಖಂಡರುಗಳಾದ ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ರಾಜು ಹಂಚಾಟೆ, ಎಸ್.ಎಂ.ಸಜ್ಜನ, ಚಂದ್ರು ಬಬಲೇಶ್ವರ, ಶರಣಗೌಡ ಗೊಟಗುಣಕಿ, ಸಾಗರ ಕಟ್ಟಿಮನಿ, ಶ್ರೀನಿವಾಸ ರಂಗ್ರೇಜ್, ವಿನಾಯಕ ಮಡ್ಡಿ, ಕಾಶಿನಾಥ ಮಂಬ್ರುಮಕರ, ಗೌಸ್ ನಾಸರ್, ಮೊದಲಾದವರು ಉಪಸ್ಥಿತರಿದ್ದರು.