ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಅಸರೆ: ಇಒ ಎಸ್‌.ಕೆ.ಇನಾಮದಾರ

NREGA will be useful for people in rural areas during summer: EO S.K. Inamdara

ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಅಸರೆ: ಇಒ ಎಸ್‌.ಕೆ.ಇನಾಮದಾರ  

ನರಗುಂದ 21: ತಾಲೂಕಿನಕೊಣ್ಣೂರಗ್ರಾ.ಪಂ. ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಸಾಮೂಹಿಕ ಬದುಕಾಮಗಾರಿ ಸ್ಥಳಕ್ಕೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್‌.ಕೆ.ಇನಾಮದಾರ್‌ಅವರು ಭಾನುವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು. ನಂತರ ಅವರು ಮಾತನಾಡಿ, ನರೇಗಾಯೋಜನೆಡಯಡಿಉದ್ಯೋಗಖಾತರಿ ಕೂಲಿ ಮೊತ್ತ 2025 ಏ.1ರಿಂದ 349 ರಿಂದ 370 ರೂ.ಗೆ ಹೆಚ್ಚಳವಾಗಿದೆ.  

ಕೂಲಿಕಾರರುಗ್ರಾಪಂಗೆ ಕೆಲಸದ ಬೇಡಿಕೆ ಸಲ್ಲಿಸಿ, ಕೆಲಸ ಪಡೆಯಬೇಕು.ಉದ್ಯೋಗಖಾತರಿಯೋಜನೆಯಡಿ ವರ್ಷಕ್ಕೆ 100 ಮಾನವ ದಿನಗಳ ಕೆಲಸ ಮಾಡಲುಅವಕಾಶವಿದ್ದು, ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕೂಲಿಕಾರರು ಅಳತೆಗೆ ಅನುಸಾರವಾಗಿ ಕೂಲಿ ಪಾವತಿಯಾಗುತ್ತದೆ.ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು.ಪ್ರತಿ ದಿನ ಎನ್‌.ಎಂಎಂಎಸ್‌. ಎರಡು ಬಾರಿ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ.ಕೂಲಿಕಾರರುಎರಡು ಹಾಜರಾತಿಯನ್ನುಕಡ್ಡಾಯವಾಗಿ ಪಾಲ್ಗೊಂಡು ಹಾಜರಾತಿ ಹಾಕಿಸಬೇಕು.ಒಂದು ವೇಳೆ ಬೆಳಗಿನ ಹಾಜರಾತಿ ಹಾಕಿಸಿ ಮದ್ಯಾಹ್ನದ ಹಾಜರಾತಿ ಹಾಕಿಸಲಿಲ್ಲ ಎಂದರೆ ನಿಮಗೆ ಆ ದಿನದ ಕೂಲಿ ಪಾವತಿಯಾಗುವುದಿಲ್ಲ ಎಂದು ತಿಳಿಸಿದರು.ಕೆಲಸ ಪ್ರಾರಂಭವಾಗಿದೆಎಂದುಎನ್‌.ಎಂ.ಆರ್‌.ನಲ್ಲಿ ಹೆಸರುಇಲ್ಲದೆಯಾವಕೂಲಿಕಾರರು ಕೆಲಸಕ್ಕೆ ಬರುವಂತಿಲ್ಲ. ಒಂದು ವೇಳೆ ಬಂದುಅವರಿಗೆ ಕೂಲಿ ಹಣ ಪಾವತಿಯಾಗುವುದಿಲ್ಲ. 

ಹಾಗಾಗಿ ಕೂಲಿಕಾರರು ಓಒಖ ಹಾಕಿಸಿ ಕೆಲಸಕ್ಕೆ ಬರುವಂತೆಕೂಲಿಕಾರರಿಗೆ ಸೂಚಿಸಿದರು.ಬೇಸಿಗೆಯಲ್ಲಿ ಅಂದರೆಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಇಲ್ಲದಕಾರಣ ನರೇಗಾಯೋಜನೆಯಡಿ ಕೆಲಸ ನೀಡಲಾಗುತ್ತದೆ.ಗ್ರಾಮೀಣ ಪ್ರದೇಶದಜನರು ಮತ್ತುಕೂಲಿಕಾರರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ವೇಳೆ ತಾಲೂಕುತಾಂತ್ರಿಕ ಸಂಯೋಜಕ ಹನುಂತ ಡಂಬಳ, ತಾಂತ್ರಿಕ ಸಾಹಾಯಕ ಲಿಂಗರಾಜ ಮುದಿಗೌಡ್ರ, ಗ್ರಾ.ಪಂ. ಸಿಬ್ಬಂದಿಗಳು, ಗ್ರಾಮಕಾಯಕ ಮಿತ್ರರು, ಕಾಯಕಬಂಧುಗಳು ಇದ್ದರು.ಬಾಕ್ಸ್‌..ಬೇಸಿಗೆಯಲ್ಲಿ ಕೆಲಸ ಇಲ್ಲದಕಾರಣ ಖಾಲಿ ಕುಳಿತಿರುವ  ಗ್ರಾಮೀಣ ಪ್ರದೇಶಜನರಿಗೆ ನರೇಗಾಯೋಜನೆಯಡಿ 13 ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಸಾಮೂಹಿಕ ಕಾಮಗಾರಿ ಪ್ರಾರಂಭಿಸಿ ಸ್ಥಳೀಯವಾಗಿ ಕೆಲಸ ನೀಡುವ ಮೂಲಕ ಜನರಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗುತ್ತದೆ.- ಎಸ್‌.ಕೆ. ಇನಾಮದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ. ನರಗುಂದ.