ಉದ್ಯೋಗಖಾತ್ರಿ ಸಮುದಾಯಕ್ಕೆ ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯ

NMMS attendance is mandatory for the job-seeking community

ಉದ್ಯೋಗಖಾತ್ರಿ ಸಮುದಾಯಕ್ಕೆ ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯ  

ಗದಗ 21: ಉದ್ಯೋಗ ಖಾತ್ರಿ ಯೋಜನೆಯಡಿ 2025-26ನೇ ಸಾಲಿನಿಂದ ಪ್ರತಿಯೊಬ್ಬ ಕೂಲಿಕಾರರಿಗೆ ದಿನಕ್ಕೆ 370 ರೂ. ಕೂಲಿ ಸಿಗಲಿದ್ದು, ಅಕುಶಲ ಕೂಲಿಕಾರರು ಸದುಪಯೋಗ ಪಡೆಯಬೇಕು ಎಂದು ತಾ.ಪಂ ಸಹಾಯಕ ನಿರ್ದೇಶಕರಾದ ಕುಮಾರ ಪೂಜಾರ ಅವರು ತಿಳಿಸಿದರು.  

ಗದಗ ತಾಲೂಕಿನ ಬೆಳಹೋಡ ಗ್ರಾಮದಲ್ಲಿ 2025-26 ನೇ ಸಾಲಿನಲ್ಲಿ ನರೇಗಾಯೋಜನೆಯ ಸಮುದಾಯ ಬದು ನಿರ್ಮಾಣಕಾಮಗಾರಿ ಪರೀಶೀಲಿಸಿ ಅವರು ಮಾತನಾಡಿದರು. ಉದ್ಯೋಗಖಾತ್ರಿ ಸಮುದಾಯ ಕಾಮಗಾರಿಗಳ ಹಾಜರಾತಿ ಕಡ್ಡಾಯವಾಗಿ ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಪ್ರತಿದಿನ ಎರಡು ಅಳವಡಿಸಬೇಕು. ಕಾಯಕ ಬಂಧುಗಳು ಮತ್ತು ಕೂಲಿಕಾರರು ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗವಂತೆ ತಿಳಿಸಿದರು. ಕಳೆದ ವರ್ಷ ಪ್ರತಿ ದಿನಕ್ಕೆ 349 ರೂ.ಕೂಲಿ ಇತ್ತು. ಏಪ್ರಿಲ್ 1 ರಿಂದ ಕೂಲಿ ಮೊತ್ತ 370ಕ್ಕೆ ಹೆಚ್ಚಳವಾಗಿದೆ. ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು.ಅಳತೆಯಂತೆ ಕೆಲಸ ಮಾಡಿದರಷ್ಟೆ ಸಂಪೂರ್ಣ ಕೂಲಿ ಮೊತ್ತ ಸಿಗಲಿದೆ ಎಂದರು.ಗ್ರಾಮೀಣ ಪ್ರದೇಶದ ಬಡ ಅಕುಶಲಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗಒದಗಿಸಲಾಗುತ್ತಿದೆ.ಕಂದಕ ಬದು ನಿರ್ಮಾಣಕಾಮಗಾರಿಯಿಂದರೈತರಜಮೀನಿನಲ್ಲಿ ಸುರಿದ ಮಳೆ ನೀರು ಮತ್ತು ಮಣ್ಣು ಹೊರ ಹೋಗತೆತಡೆಯ ಬಹುದು.ಇದರಿಂದಅಂತರ್ಜಲ ಮಟ್ಟ ಹೆಚ್ಚಳಕ್ಕೂ ಇದು ಪೂರಕವಾಗಿದೆಎಂದರು.ಗ್ರಾಮೀಣ ಪ್ರದೇಶದ ಸರ್ವಾಂಗೀಣಅಭಿವೃದ್ಧಿಗೆಜೊತೆಯಾಗಿರುವಉದ್ಯೋಗಖಾತ್ರಿಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.ನರೇಗಾಯೋಜನೆಯಡಿಉದ್ಯೋಗಚೀಟಿ ಹೊಂದಿರುವ ಪ್ರತಿಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸ ನೀಡಲಾಗುತ್ತಿದೆ.ಅರ್ಹಕುಟುಂಬಕ್ಕೆ 5 ಲಕ್ಷರೂ.ಮಿತಿಯೊಳಗೆ ವೈಯಕ್ತಿಕಕಾಮಗಾರಿ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ.ಪುರುಷ- ಮಹಿಳೆ ಎಂಬ ಭೇದವಿರದೆಎಲ್ಲರಿಗೂ ಸಮಾನ ಕೂಲಿ ನೀಡಲಾಗುತ್ತಿದೆಎಂದರು.ಈ ಸಂದರ್ಭದಲ್ಲಿಗ್ರಾಪಂ ಕಾರ್ಯದರ್ಶಿ ಮಹಾಲಿಂಗಯ್ಯ ಹಿರೇಮಠ, ತಾಂತ್ರಿಕ ಸಹಾಯಕಅಲ್ತಾಫ್‌ಅಮ್ಮಿನಬಾವಿ, ಬಿಲ್ ಕಲೆಕ್ಟರ್ ಉಮೇಶ ಮುದಕವಿ, ಬಿಎಫ್‌ಟಿ ಮಂಜುನಾಥ ಬಂಡಿವಾಡ, ಜಿಕೆಎಂ ಪೃಥ್ವಿಗಟ್ಟೇನ್ನವರ, ಕಾಯಕ ಬಂಧುಗಳು, ಕೂಲಿಕಾರರುಇದ್ದರು.