ತವರು ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ನೆಚ್ಚಿನ ತಂಡ: ಅಜಿಂಕ್ಯಾ ರಹಾನೆ

ವೆಲ್ಲಿಂಗ್ಟನ್, ಫೆ 20, ತವರು ಅಂಗಳದಲ್ಲಿ ಭಾರತದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ನೆಚ್ಚಿನ ತಂಡ ಎಂದು ಟೀಮ್ ಇಂಡಿಯಾ ಉಪ ನಾಯಕ ಅಜಿಂಕ್ಯಾ ರಹಾನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಣಕಪಟ್ಟಿಯಲ್ಲಿ 360 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 60 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ಕಳೆದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿತ್ತು.ಬಾಂಗ್ಲಾದೇಶ ವಿರುದ್ಧ ಒಂದು ಪಿಂಕ್ ಬಾಲ್ ಪಂದ್ಯ ಸೇರಿ ಎರಡು ಹಣಾಹಣೆಗಳ ಟೆಸ್ಟ್ ಸರಣಿಯಲ್ಲಿ ಭಾರತ ತವರು ನೆಲದಲ್ಲಿ 2-0 ಅಂತರದಲ್ಲಿ ಗೆದ್ದು ಬೀಗಿತ್ತು.

ಮೊದಲ ಟೆಸ್ಟ್ ಪಂದ್ಯ ನಿಮಿತ್ತ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಹಾನೆ, "ತವರು ನೆಲದ ಪರಿಸ್ಥಿತಿಗಳಲ್ಲಿ ನ್ಯೂಜಿಲೆಂಡ್ ಟೆಸ್ಟ್ ಸರಣಿ ಗೆಲ್ಲುವ ನೆಚ್ಚಿನ ತಂಡ. ಏಕೆಂದರೆ, ಇಲ್ಲಿನ ಪಿಚ್ಗಳಲ್ಲಿ ಯಾವ ಎಸೆತ ಹಾಕಬೇಕು ಹಾಗೂ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬಂತೆ ಅವರಿಗೆ ಅರಿವಿದೆ,'' ಎಂದು ಹೇಳಿದರು."ನಾವು ಬಹುಬೇಗ ಇಲ್ಲಿನ ವಾತವರಣಕ್ಕೆ ಹೊಂದಿಕೊಳ್ಳಬೇಕು ಹಾಗೂ ಎದುರಾಳಿ ತಂಡದ ಸವಾಲನ್ನು ವಿಭಿನ್ನ ಬಗೆಯಲ್ಲಿ ಎದುರಿಸಬೇಕು,'' ಎಂದು ಅವರು ಸೇರಿಸಿದರು."ಮೊದಲು ಬ್ಯಾಟಿಂಗ್ ಮಾಡಿದ್ದೆ ಆದಲ್ಲಿ ಮನಸ್ಸು ಧನಾತ್ಮಕವಾಗಿರುತ್ತದೆ. 

ಆದರೆ, ಬೌಲಿಂಗ್ ಮಾಡುವಾಗ ಈ ರೀತಿ ಇರುವುದಿಲ್ಲ. ಒಂದು ವೇಳೆ ಮೊದಲು ಬ್ಯಾಟಿಂಗ್ ಮಾಡಿ ಪ್ರಥಮ ಇನಿಂಗ್ಸ್ನಲ್ಲಿ 320 ರಿಂದ 330 ರನ್ ಗಳಿಸಿದ್ದೇ ಆದಲ್ಲಿ ತಂಡಕ್ಕೆ ಅತ್ಯುತ್ತಮ ರನ್ ಆಗಲಿದೆ," ಎಂದು ಸಲಹೆ ನೀಡಿದರು."ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ನಾವು ಗೆದ್ದ ಪಂದ್ಯಗಳಲ್ಲಿ ಪ್ರಥಮ ಇನಿಂಗ್ಸ್ನಲ್ಲಿ 320 ರಿಂದ 330 ರನ್ ಗಳಿಸಿದ್ದೇವು," ಎಂದು ಕಳೆದ ಸರಣಿಗಳನ್ನು ನೆನಪು ಮಾಡಿಕೊಂಡಿದ್ದಾರೆ.   "ನಾವು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಳಿಕ ನಮ್ಮ ಬೌಲರ್ಗಳು ಯಾವುದೇ ಪರಿಸ್ಥಿತಿಯಲ್ಲಿ ವಿಕೆಟ್ ತೆಗೆದುಕೊಳ್ಳಬಹುದು ಎಂದು ನಮಗೆ ತಿಳಿದಿದೆ. ಆದರೆ, ಇಲ್ಲಿನ ಸನ್ನಿವೇಶಗಳನ್ನು ನಿಭಾಯಿಸಲು ನೀವು ಸರಿಯಾದ ರೀತಿಯ ಮನಸ್ಥಿತಿಯಲ್ಲಿದ್ದೀರಿ ಎಂದು ನೀವು ಅರಿತಿರಬೇಕು,'' ಎಂದರು.ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಐದು ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಬಳಿಕ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಎದುರು 0-3 ವೈಟ್ವಾಶ್ ಮುಖಭಂಗ ಅನುಭವಿಸಿತ್ತು. ನಾಳೆಯಿಂದ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಆರಂಭವಾಗಲಿದೆ.