ಚಂಡೀಗಢ, ಫೆ 2, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ತವರು ನಗರವಾದ ಪಾಟಿಯಾಲದಲ್ಲಿ ರಾಷ್ಟ್ರೀಯ ಮಟ್ಟದ ಹಾಕಿ ಆಟಗಾರ ಹಾಗೂ ಆತನ ಸ್ನೇಹಿತ ಗುಂಡಿಗೆ ಬಲಿಯಾಗಿದ್ದಾರೆ.ಪಂಜಾಬ್ ರಾಜ್ಯ ವಿದ್ಯುತ್ ಕಾರ್ಪೋರೇಷನ್ ಲಿಮಿಟೆಡ್ನ ಉದ್ಯೋಗಿಗಳಾಗಿರುವ ಅರ್ಮಿಕ್ ಸಿಂಗ್ ಹಾಗೂ ಸಿಮ್ರಾನ್ಜಿತ್ ಸಿಂಗ್ ಗುಂಡಿಗೆ ಬಲಿಯಾದವರು ಎಂದು ಗುರುತಿಸಲಾಗಿದೆ.
ಉಪಾಹಾರ ಗೃಹದಲ್ಲಿ ಮೃತರು, ಹಾಗೂ ಮನೋಜ್ ಕುಮಾರ್ ಮತ್ತು ಅವರ ಮಗನೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ತಂದೆ ಮಗ ಸೇರಿಕೊಂಡು ಅರ್ಮಿಕ್ ಸಿಂಗ್ ಹಾಗೂ ಸಿಮ್ರಾನ್ಜಿತ್ ಸಿಂಗ್ ಅವರನ್ನು ಥಳಿಸಿದ್ದಾರೆ.ಈ ಘಟನೆಯ ಬಳಿಕ ಆಕ್ರೋಶಗೊಂಡ ಮನೋಜ್, ಮನೆಗೆ ತೆರಳಿ ರೈಫಲ್ ತಂದು ಅರ್ಮಿಕ್ ಸಿಂಗ್ ಹಾಗೂ ಸಿಮ್ರಾನ್ಜಿತ್ ಸಿಂಗ್ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಐಪಿಸಿ ಸೆಕ್ಷನ್ 302ರ ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.