ನವದೆಹಲಿ, ಫೆ 15 : ಆರನೇ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮತ್ತು ಟೋಕಿಯೊ ಒಲಿಂಪಿಕ್ಸ್ಗೆ ಪೂರ್ವ ಸಿದ್ಧತೆಗಾಗಿ ನಾಳೆಯಿಂದ ಆರಂಭವಾಗುವ ಹಿರಿಯ ಮಹಿಳಾ ರಾಷ್ಟ್ರೀಯ ಶಿಬಿರಕ್ಕೆ 25 ಸದಸ್ಯರ ಪ್ರಮುಖ ಸಂಭವನೀಯ ಪಟ್ಟಿಯನ್ನು ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿದೆ. ತರಬೇತಿ ಮತ್ತು ಕಂಡೀಷನಿಂಗ್ ಶಿಬಿರವು ಭಾನುವಾರದಿಂದ ಬೆಂಗಳೂರು ಮೈಸೂರು ರಸ್ತೆಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಾರಂಭವಾಗುವುದು. ಫಿಟ್ನೆಸ್, ಬಾಲ್ ಹ್ಯಾಂಡ್ಲಿಂಗ್, ರಚನೆ ಮತ್ತು ಕಾರ್ಯತಂತ್ರಗಳ ಬಗ್ಗೆ ಗಮನಹರಿಸಲಾಗುವುದು. ಜತೆಗೆ ಅವರ ಇತ್ತೀಚಿನ ನ್ಯೂಜಿಲೆಂಡ್ ಪ್ರವಾಸದಲ್ಲಿ ಗುರುತಿಸಲ್ಪಟ್ಟ ಪ್ರಮುಖ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ.27 ದಿನಗಳ ಕಾಲ ನಡೆಯುವ ತರಬೇತಿ ಹಾಗೂ ಕಂಡೀಷನಿಂಗ್ ಶಿಬಿರಕ್ಕೆ ಆಯ್ಕೆಯಾಗಿರುವ ಆಟಗಾರ್ತಿಯರು ಮುಖ್ಯ ಕೋಚ್ ಜೋರ್ಡ್ ಮರಿಗ್ನೆ ಅವರ ಬಳಿ ರಿಪೋರ್ಟ್ ಮಾಡಿಕೊಳ್ಳಬೇಕು ಎಂದು ಹಾಕಿ ಇಂಡಿಯಾ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ."ಕಳೆದ ನ್ಯೂಜಿಲೆಂಡ್ ಪ್ರವಾಸದಿಂದ ಜ್ಞಾನವನ್ನು ವೃದ್ದಿಸಿಕೊಂಡಿದ್ದು, ಅಲ್ಲಿ ನಾವು ಎಸಗಿದ ತಪ್ಪುಗಳನ್ನು ತಿದ್ದಿಕೊಳ್ಳಲು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಲಾಗುವುದು. ಆಟಗಾರ್ತಿಯರಲ್ಲಿ ಇನ್ನಷ್ಟು ಪರಿಪಕ್ವತೆ ಸಾಧಿಸಲು ಪ್ರಯತ್ನಿಸಲಾಗುವುದು,'' ಎಂದು ಜೋರ್ಡ್ ಮರಿಗ್ನೆ ಹೇಳಿದ್ದಾರೆ. ಸಂಭಾವನೀಯ ಆಟಗಾರ್ತಿಯರುಗೋಲ್ ಕೀಪರ್ಗಳು- ಸವಿತಾ, ರಜನಿ ಎಟಿಮರ್ಪು, ಬಿಚು ದೇವಿಡಿಫೆಂಡರ್ಗಳು- ದೀಪ್ ಗ್ರೇಸ್ ಎಕ್ಕಾ, ರೀನಾ ಖೋಖರ್, ಸಲೀಮಾ ಟೆಟೆ, ಮನ್ಪ್ರೀತ್ ಕೌರ್, ಗುರುಜೀತ್ ಕೌರ್, ನಿಶಾಮಿಡ್ಫೀಲ್ಡರ್ಗಳು- ನಿಕ್ಕಿ ಪ್ರಧಾನ್, ಮೋನಿಕಾ, ನೇಹಾ ಗೋಯಲ್, ಲಾಲಿಮಾ ಮಿನ್ಜ್, ಸುಶೀಲ ಚಾನು, ಸೋನಿಕಾ ಹಾಗೂ ನಮೀತಾ ಟೊಪ್ಪೊಮುಂಚೂಣಿ ಆಟಗಾರ್ತಿಯರು- ರಾಣಿ ರಾಂಪಾಲ್, ಲಾಲ್ರೆಸಿಯಾಮಿ.ವಂದನಾ ಕಟಾರಿಯಾ, ನವಜೋತ್ ಕೌರ್, ನವನೀತ್ ಕೌರ್, ತಾಜ್ವಿಂದರ್ ಕೌರ್, ಜ್ಯೋತಿ, ಶರ್ಮಿಳಾ ದೇವಿ ಹಾಗೂ ಉದಿತಾ.