ನವದೆಹಲಿ, ಡಿ 26 ರಾಷ್ಟ್ರೀಯ ಪೌರತ್ವ ನೋಂದಣಿಗೆ
ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಪಿ ಚಿದಂಬರಂ ಅವರಿಗೆ ತಿರುಗೇಟು
ನೀಡಿರುವ ಬಿಜೆಪಿ, ತಮ್ಮ ಸಾಗರೋತ್ತರ ಪ್ರವಾಸಗಳಲ್ಲಿ ತಮ್ಮ ವೀಸಾ ಅವಧಿಯನ್ನೂ ಮೀರಿ ಉಳಿದುಕೊಂಡಲ್ಲಿ
ಬಂಧನ ಕೇಂದ್ರಗಳನ್ನು ಹೊಂದಿರುವ ಉದ್ದೇಶ ಅರಿವಾಗುತ್ತದೆ
ಎಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಐಟಿ
ಘಟಕದ ಮುಖ್ಯಸ್ಥ ಅಮಿತ್ ಮಾಲ್ವಿಯಾ, “ರಾಹುಲ್ ಗಾಂಧಿ ಅವರು ಹೆಚ್ಚಾಗಿ ವಿದೇಶಿ ಪ್ರವಾಸ ಮಾಡುತ್ತಿರುತ್ತಾರೆ. ಅವುಗಳಲ್ಲಿ ಯಾವುದಾದರೂ ಒಂದು ದೇಶದಲ್ಲಿ
ವೀಸಾ ಅವಧಿಯನ್ನು ಮೀರಿ ಅಲ್ಲಿಯೇ ಉಳಿದುಕೊಳ್ಳಲಿ. ಆಗ ಅವರ ತಮ್ಮ ದೇಶಕ್ಕೆ ಗಡಿಪಾರು ಹೊಂದುವ ಮುನ್ನ
ಬಂಧನ ಕೇಂದ್ರಗಳಲ್ಲಿ ಇರಿಸಲ್ಪಟ್ಟರೆ, ಇತರ ದೇಶಗಳು ಅಕ್ರಮ ವಲಸಿಗರನ್ನು ಹೇಗೆ ನಡೆಸಿಕೊಳ್ಳುತ್ತವೆ
ಎಂಬುದನ್ನು ಅರಿಯುತ್ತಾರೆ” ಎಂದು ಸವಾಲು ಹಾಕಿದ್ದಾರೆ.
ಅಸ್ಸಾಂನಲ್ಲಿ ಸುಮಾರು 362 ಅಕ್ರಮ ವಲಸಿಗರನ್ನು
ಬಂಧನದಲ್ಲಿರಿಸಲಾಗಿದೆ ಎಂದು 2011ರ ಯುಪಿಎ ಅವಧಿಯಲ್ಲಿ
ಗೃಹ ಸಚಿವಾಲಯ ಹೇಳಿಕೆ ಬಿಡುಗಡೆಗೊಳಿಸಿತ್ತು. ಕೇವಲ
ಭಾರತ ನಿಮ್ಮನ್ನು ನಿರಂತರವಾಗಿ ತಿರಸ್ಕರಿಸಿದೆ ಎಂಬ ಕಾರಣಕ್ಕೆ ನೀವು ದೇಶದಲ್ಲಿ ದ್ವೇಷ ಮತ್ತು ಭೀತಿಯನ್ನು
ಸೃಷ್ಟಿಸಲು ಯತ್ನಿಸುತ್ತಿದ್ದೀರೇನು? ಎಂದು ಪ್ರಶ್ನಿಸಿದ್ದಾರೆ. ಚಿದಂಬರಂ
ವಿರುದ್ಧ ಕಿಡಿಕಾರಿರುವ ಅಮಿತ್, “ಚಿದಂಬರಂ ಅವರೇ, ನಿಮ್ಮ ನೆನಪಿನ ಶಕ್ತಿ ಕಡಿಮೆಯಾಗುತ್ತಿರಬೇಕು.
ನಿಮಗೆ ನಾನಿಲ್ಲಿ ಸ್ವಲ್ಪ ಸಹಾಯ ಮಾಡುತ್ತೇನೆ. 2012ರಲ್ಲಿ ನೀವು, ಎನ್ ಪಿಆರ್ ವಸತಿ ಚೀಟಿಗಳನ್ನು
ನೀಡುವ ಉದ್ದೇಶ ಹೊಂದಿದ್ದು, ಕೊನೆಯಲ್ಲಿ ಪೌರತ್ವ ಚೀಟಿ ನೀಡಲಾಗುವುದು ಎಂದು ನೀವು ಹೇಳಿಕೆ ನೀಡಿದ್ದೀರಿ”
ಎಂದಿದ್ದು, ಅವರ ಹೇಳಿಕೆಯ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.