ಗದಗ 27: ನಗರದ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ದಿನಾಂಕ 26 ಬುಧವಾರವಾರದಂದು ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ಎನ್. ಎಸ್. ಎಸ್. ಘಟಕದವತಿಯಿಂದ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಐದನೇ ದಿನದಲ್ಲಿ ಸ್ವಯಂಸೇವಕರು ಗ್ರಾಮದ ಸಂಜೆ ಉಪನ್ಯಾಸ ಕಾರ್ಯಕ್ರದಲ್ಲಿ ಉಪನ್ಯಾನಕರಗಿ ಆಗಮಿಸಿದ ಪ್ರೋ. ವೀಣಾ. ತಿರ್ಲಾಪೂರ ಅವರು ಆರೋಗ್ಯಕರ ಸಮಾಜಕ್ಕಾಗಿ ಯುವಜನತೆ ವಿಷಯವಾಗಿ ಉಪನ್ಯಾಸ ನೀಡಿ ಯುವಕರು ಕೆಟ್ಟ ಚಟಗಳಿಂದ ದೂರ ತರಬೇಕು, ಮಾನಸಿಕವಾಗಿ ಗಟ್ಟಿಯಾಗಿರಬೇಕು, ಯುವಕರು ಸಮಾಜದ ಭವಿಷ್ಯ, ಸಮಾಜದ ಆರೊಗ್ಯಕತೆಗೆ ಯುವ ಜನತೆ ಹೇಗಿರಬೇಕು ಮತ್ತು ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಾಗಾವಿ ಗ್ರಾಮದ ಗ್ರಾಮ ಪಂ. ಸದಸ್ಯರಾದ ಉಳಿವೆಪ್ಪಾ ಬ. ಶಿಗ್ಲಿ ಅವರು ಅಧ್ಯಕ್ಷ ಸ್ಥಾನವಹಿಸಿದ್ದರು, ಅತಿಥಿಗಳಾಗಿ ಜಂಬಪ್ಪಾ ಮಡಿವಾಳರ್, ನಾಗಾವಿ ಗ್ರಾಮ ಯುವ ಮುಕಂಡರು, ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ನೇತ್ರಾವತಿ ಅಂಗಡಿ, ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯದರ್ಶಿಗಳಾದ ಕುಮಾರ. ಪವನಕುಮಾರ ಕುಲಕರ್ಣಿ ಮತ್ತು ಕುಮಾರಿ. ಸಾಕ್ಷಿ ಹೊಸಮಠ, ಎಲ್ಲ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರಾರ್ಥಿ ಕುಮಾರಿ. ಸಾಕ್ಷಿ ಹೊಸಮಠ ನಿರೂಪಿಸಿದರು, ಕುಮಾರ. ಸತೀಶ ಕಣವಿ ಸ್ವಾಗತಿಸಿದರು, ಕುಮಾರ. ಕಿರಣ ಓಂಕಾರಿ ವಂದಿಸಿದರು.