ಮೈಸೂರು, ಜೂನ್ 02, ಕರ್ನಾಟಕ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಲಂಚ ತೆಗೆದುಕೊಳ್ಳುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಶಿವಣ್ಣ ಎಂದು ಗುರುತಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು ಅವರು ಹಾಸ್ಟೆಲ್ ಪರಿಶೀಲನೆ ಮಾಡುವುದನ್ನು ತಡೆಯಲು ಅವರು ಪಿರಿಯಾಪಟ್ಟಣದ ರಾವಂದೂರು ಹಾಸ್ಟೆಲ್ ವಾರ್ಡನ್ ಹೆಚ್.ರಾಜಯ್ಯರಿಂದ 1.5 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ಹಾಗೂ ಈ ಸಂಬಂಧ ರಾಜಯ್ಯ ಅವರಿಂದ 50 ಸಾವಿರ ರೂ.ಗಳ ಮುಂಗಡವನ್ನು ಪಡೆದಿದ್ದರು. ನಂತರ ಮುನಿರಾಜು ಮತ್ತು ಶಿವಣ್ಣ ವಿರುದ್ಧ ರಾಜಯ್ಯ ಎಸಿಬಿಗೆ ದೂರು ನೀಡಿದ್ದರು ಎಂದು ಪ್ರಕಟಣೆ ತಿಳಿಸಿದೆ.