ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ : ಕಳಕನ ಗೌಡ
ಕೊಪ್ಪಳ : ಪಂಚಮಸಾಲಿ ಸಮಾಜದ ಹೋರಾಟಕ್ಕೆ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷನ ಬೆಂಬಲ ಇಲ್ಲ ಎನ್ನುವ ವಿಚಾರ ಕೆಲ ಮಾಧ್ಯಮಗಳಲ್ಲಿ ಬಿತ್ತಾರವಾಗಿದ್ದು ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಕಳಕನಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸದಾ ಬೆಂಬಲ ಇದೆ,ವೈಯಕ್ತಿಕವಾಗಿ ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲ ಇದೆ,ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷನಾಗಿರುವುದರಿಂದ ಎಲ್ಲಾ ಸಮಾಜದ ಏಳಿಗೆಗೆ ಬದ್ಧ,ಪಂಚಮಸಾಲಿ ಸಮಾಜದವರು ತಪ್ಪಾಗಿ ತಿಳಿದುಕೊಳ್ಳೋದು ಬೇಡ,ಚಳಿಗಾಲದ ಅಧಿವೇಶನ ಸಂಧರ್ಭದ ಹೋರಾಟಕ್ಕೆ ಬೆಂಬಲ ಇದೆ,ಇದರ ಜೊತೆಗೆ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಸಮುದಾಯದ ಏಳಿಗೆಗೂ ಸಹ ಬದ್ಧ,ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ಕಳಕನಗೌಡ ವಿರೋಧಿಸಿದ್ದರು ಎಂದು ಸುದ್ದಿ ಹರಡಿದ ಹಿನ್ನೆಲೆ ಈ ಸ್ಪಷ್ಟನೆ.