ಪೌಷ್ಟಿಕ ಆಹಾರ ವಿತರಣೆ ಏಜೆನ್ಸಿಗೆ ವಹಿಸಲು ಅಧಿಕಾರಿಗಳಿಗೆ ಮನವಿ

A request to the authorities to entrust the Nutritional Food Distribution Agency

ಪೌಷ್ಟಿಕ ಆಹಾರ ವಿತರಣೆ ಏಜೆನ್ಸಿಗೆ ವಹಿಸಲು ಅಧಿಕಾರಿಗಳಿಗೆ ಮನವಿ 

ಹೂವಿನ ಹಡಗಲಿ 30: ಸರ್ಕಾರದ ನೂತನ ಪೌಷ್ಟಿಕ ಆಹಾರ ಮೊಟ್ಟೆ ವಿತರಣೆ ಯೋಜನೆ ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲಾ ಪ್ರೌಢಶಾಲೆಗಳಲ್ಲಿ ನಿರ್ವಹಣೆಗೆ ಕಷ್ಟಕರವಾಗಿದೆ ಎಂದು ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಶನಿವಾರ ಸರ್ಕಾರದ ನೂತನ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಖಾಸಗಿ ಏಜೆನ್ಸಿಗೆ ವಹಿಸಲು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. 

ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಇರುವ ಪ್ರೌಢಶಾಲೆಗಳಲ್ಲಿ ನಿತ್ಯ ಮೊಟ್ಟೆ ಖರೀದಿಸಿ ಬೇಯಿಸಿ ವಿತರಿಸುವುದು ಎಲ್ಲಾ ಶಿಕ್ಷಕರಿಗೆ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ.ದಿನವೂ ಆನ್ ಲೈನ್ ತಂತ್ರಾಂಶದಲ್ಲಿ ಮೊಟ್ಟೆ ಬಾಳೇಹಣ್ಣು ಖರೀದಿಸಿದ ವಿತರಿಸಿದ ಖರ್ಚು ಹಾಕಿ ಅಪ್ ಡೇಟ್ ಮಾಡುವ ಹೆಚ್ಚಿನ ಕೆಲಸದಿಂದ ಒತ್ತಡ ಉಂಟಾಗುತ್ತದೆ ಎಂದರು.ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ಬೋಧಿಸುವ ಕೆಲಸದ ನಡುವೆ ಇದರ ಅನುಷ್ಠಾನಕ್ಕೆ ತೊಂದರೆ ಆಗುತ್ತಿದೆ.ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ ನೂತನ ಯೋಜನೆಯನ್ನು ಖಾಸಗಿ ಏಜೆನ್ಸಿಗೆ ವಹಿಸಬೇಕು ಎಂದು ಒತ್ತಾಯಿಸಿದರು. 

ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ, ರಾಜ್ಯ ಕಾರ್ಯದರ್ಶಿ, ಎನ್ ಜಿ ಒ ನೂತನ ನಿರ್ದೇಶಕ ಗಡ್ಡಿ ಶಿವಕುಮಾರ್ ಮಾತನಾಡಿದರು.ಕಾರ್ಯದರ್ಶಿ ಸುರೇಶ ಅಂಗಡಿ ಕೋಶಾಧ್ಯಕ್ಷ ಸೂರ್ಯಕಾಂತ್,ಬಡ್ತಿ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶೇಕ್ ಅಹಮದ್ ಮುಖ್ಯ ಗುರುಗಳಾದ ರವೀಂದ್ರನಾಥ್, ಗುರುಬಸವರಾಜ, ಪಾಂಡ್ಯಾನಾಯ್ಕ್‌, ಟಿ ಪಿ ವೀರೇಂದ್ರ, ದಾವಲ್ ಸಾಬ್, ಮಹಾಂತೇಶ್,ಸಣ್ಣಲಕ್ಕಪ್ಪ ಸರ್ವಮಂಗಳ,ಜಿ ಕವಿತಾ,ಜಿ ಕಾಂತೇಶ್ ಇತರರು ಉಪಸ್ಥಿತರಿದ್ದರು.