ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಪಕ್ಷದ ಅಭಿಪ್ರಾಯವೇ ನನ್ನ ಅಭಿಪ್ರಾಯ: ಖರ್ಗೆ

ಬೆಂಗಳೂರು, ಆ 7     ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ವಿಚಾರದಲ್ಲಿ ಪಕ್ಷದ ಅಭಿಪ್ರಾಯವೇ ತಮ್ಮ ಅಭಿಪ್ರಾಯ. ಇದರಲ್ಲಿ ವೈಯಕ್ತಿಯ ಅಭಿಪ್ರಾಯವಿಲ್ಲ. ಸಂವಿಧಾನತ್ಮಾಕವಾಗಿ ಅಲ್ಲಿನ ಸರ್ಕಾರದ  ಸಮ್ಮತಿ ಪಡೆಯಬೇಕಿತ್ತು ಎಂಬುದೇ ನಮ್ಮೆಲ್ಲರ ಅಭಿಪ್ರಾಯ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಜಮ್ಮು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಬಹಿರಂಗ ಹೇಳಿಕೆ ಕೊಡುವುದಕ್ಕೆ ಹಿಂದೇಟು ಹಾಕಿದ ಖರ್ಗೆ, ಜಮ್ಮು  ಮತ್ತು ಕಾಶ್ಮೀರ ವಿಶೇಷ ಸ್ಥಾನ ಮಾನ ರದ್ದು ಮಾಡಿದ ವಿಚಾರದಲ್ಲಿ ಪಕ್ಷದ ನಿರ್ಧಾರವೇ ನನ್ನ  ನಿರ್ಧಾರ ಎಂದು ಹೇಳಿ ಜಾರಿಕೊಂಡರು. 

ಜಮ್ಮು ಕಾಶ್ಮೀರ ವಿಚಾರದಲ್ಲಿ ನನ್ನ ನಿಲುವು ಬೇರೆ ಇಲ್ಲ. ನಿನ್ನೆ ರಾತ್ರಿ  ಸಿಡಬ್ಲ್ಯುಸಿ ಸಭೆಯಲ್ಲಿ  ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ನನಗೂ ಸಭೆಗೆ  ಆಹ್ವಾನವಿತ್ತು. ಆದರೆ ಕಾರಣಾಂತರಗಳಿಂದ ಸಭೆಗೆ ಹೋಗಲು ಆಗಲಿಲ್ಲ. 370ನೇ ವಿಧಿ ರದ್ದುಪಡಿಸುವಾಗ ಸಂವಿಧಾನತ್ಮಾಕವಾಗಿ ಅಲ್ಲಿನ ಸಕರ್ಾರದ  ಸಮ್ಮತಿ ಪಡೆಯಬೇಕಿತ್ತು ಎಂದು ಸಭೆಯಲ್ಲಿ ಹೇಳಿದ್ದಾರೆ. ನನ್ನ ನಿರ್ಧಾರವೂ ಅದೇ ಆಗಿದೆ, ಹೆಚ್ಚೇನು ಮಾತನಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. 

 ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಸರ್ಕಾರ ಯಶಸ್ಸು ಮತ್ತು ವಿಫಲತೆ ಇಂತಹ ಸಂದರ್ಭಗಳಲ್ಲಿಯೇ ಗೊತ್ತಾಗುವುದು, ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. 

ಜನ ಪ್ರತಿನಿಧಿಗಳು ಇಂತಹ ಸಂದರ್ಭದಲ್ಲಿ ಜನರ ಜತೆ ಇರಬೇಕು, ಅನರ್ಹ ಇಲ್ಲಿ ಮುಖ್ಯವಲ್ಲ. ಅನರ್ಹ ಶಾಸಕರು ಸೇರಿದಂತೆ ಎಲ್ಲರೂ ಜನರ ಜತೆ ಇದ್ದು, ಅವರ ಕಷ್ಟಕ್ಕೆ ಸ್ಪಂದಿಸಬೇಕು. ಈ ಬಾರಿ ಆ ಭಾಗದಲ್ಲಿ ಅತಿಹೆಚ್ಚು ಜಿಲ್ಲೆಗಳಿಗೆ ಪ್ರವಾಹ ಬಂದಿದೆ. ಸರ್ಕಾರ ತುರ್ತಾಗಿ ಜನರ ಸಮಸ್ಯೆ ಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು. 

ಅನರ್ಹ ಶಾಸಕರು ಪ್ರವಾಹ ಪೀಡಿತ ಕ್ಷೇತ್ರಗಳನ್ನು ಕಡೆಗಣನೆ ಮಾಡಿದ ವಿಚಾರದ ಬಗ್ಗೆ ಕೇಳಿದಾಗ, 

ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಯಾರಿಗೆ ಮಾನವೀಯತೆ ಇದೆಯೋ ಅವರು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ, ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುವ ಅಗತ್ಯ ಇದೆ, ತಾವಯು ಸಾಮಾಜಿಕ ಕಾರ್ಯಕರ್ತರು , ರಾಜಕಾರಣಿಗಳು ಎಂದು ಹೇಳಿಕೊಳ್ಳುವವರು ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡುವುದು  ಕರ್ತವ್ಯ ಎಂದು ಹೇಳಿದರು.