ಕ್ಷೇತ್ರದ ಸವರ್ಾಂಗೀಣ ಅಭಿವೃದ್ಧಿಯೇ ನನ್ನ ಗುರಿ


ಲೋಕದರ್ಶನ ವರದಿ

ಯಲ್ಲಾಪುರ 7: ನನ್ನ ಕ್ಷೇತ್ರದ ಸವರ್ಾಂಗೀಣ ಅಭಿವೃಧ್ಧಿಯೇ ನನ್ನ ರಾಜಕೀಯದ ಮೊದಲ ಗುರಿ, ಗ್ರಾಮೀಣ ವಿಕಾಸ ಮತ್ತು ನಿರುದ್ಯೋಗ ನಿಮರ್ೂಲನೆಗೆ ಹೆಚ್ಚಿನ ಒತ್ತು ಕೊಟ್ಟು, ಕಾರವಾರ- ಅಂಕೋಲಾ ಕ್ಷೇತ್ರವನ್ನು ಮಾದರಿಯಾಗಿ ಮಾಡುತ್ತೇನೆ, ರಾಜಕೀಯ ಇಚ್ಚಾಶಕ್ತಿಯೊಂದಿಗೆ ಜನಪರಕಾಳಜಿಯೂ ಇರುವ ನಾನು ಯಾವುದೇ ಅನ್ಯಾಯ- ಅಕ್ರಮಗಳೊಂದಿಗೆ ರಾಜಿ ಮಾಡಿಕೊಳ್ಳುವವಳಲ್ಲ ಎಂದು ಕಾರವಾರ ಅಂಕೊಲಾ ಕ್ಷೇತ್ರದ ಮೊದಲ ಮಹಿಳಾ ಶಾಸಕಿ ರೂಪಾಲಿ ಎಸ್ ನಾಯ್ಕ ಹೇಳಿದರು.ಅವರು ತಾಲೂಕಿನ  ಗಡಿ ಭಾಗವಾದ ಡೋಂಗ್ರಿ ಗ್ರಾಮ ಪಂಚಾಯತದ ಕಲ್ಲೇಶ್ವರದ ಗೋಪಾಲಕೃಷ್ಣ ಸಭಾಭವನದಲ್ಲಿ ಜನಸ್ಪಂದನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ

    ಕಾಮಗಾರಿಗಳನ್ನು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಹಾಗೂ ದೀರ್ಘಕಾಲ ಬಾಳಿಗೆ ಬರುವಂತೆ ನಿಮರ್ಿಸದಿದ್ದರೆ ಅಂಥ ಇಲಾಖೆಗಳ / ಗುತ್ತಿಗೆದಾರರ ಬಗ್ಗೆ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಪಂಚಾಯತ ವ್ಯಾಪ್ತಿಯ ಅಪಾರ ನಾಗರಿಕರು ಸೇರಿದ್ದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಜನರ ಕುಂದುಕೊರತೆಗಳ ಬಗ್ಗೆ ಶಾಸಕಿ  3,4 ತಾಸುಗಳ ಕಾಲ ಚಚರ್ಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿಂದಿನ ಅವಧಿಯಲ್ಲಿ ಗುಳ್ಳಾಫುರ - ಕಮ್ಮಾಣಿ ರಸ್ತೆಗೆ ಯೋಗ್ಯ ನಿರ್ವಹಣೆ ಮಾಡದೇ ಇರುವುದರಿಂದ ರಸ್ತೆ ದುಸ್ಥಿತಿಯನ್ನು ತಲುಪಿದೆ, ಹಾಲೀ ಹಳವಳ್ಳಿ ಕಮ್ಮಾಣಿ ರಸ್ತೆಯ ಕಾಮಗಾರಿ ನಡೆಯುತ್ತಿದೆ, ಹಾಗೂ 1 ಈಗ ಕೋಟಿ ರೂಪಾಯಿಗಳನ್ನು ಮಂಜೂರಿ ಮಾಡಿಸಿದ್ದೇನೆ, ಇಡೀ ವಿಧಾನ ಸಭಾ ಕ್ಷೇತ್ರದ ಪೈಕಿ ಅತೀ ಹೆಚ್ಚು ಕಾಮಗಾರಿ- ಕುಂದು ಕೊರತೆ ಬೇಡಿಕೆ ಅಜರ್ಿಯನ್ನು ಡೋಂಗ್ರಿ ಗ್ರಾಮ ಪಂಚಾಯತದಿಂದಲೇ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು. ಮಳಗಾಂ ಅಂಗನವಾಡಿ ಕಟ್ಟಡ ಕಾಮಗಾರಿ ಮುದಿರೂ ಸಹಾ ಮಕ್ಕಳಿಗೆ ಹೊಸ ಕಟ್ಟಡದ ಅಂಗನವಾಡಿಯಿಂದ ವಂಚಿತಗೊಳಿಸಿದ ಬಗ್ಗೆ ಶಾಸಕರು ಶಿಶು ಅಭಿವರಧ್ಧಿ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಡಿ ವಿದ್ಯುತ್ತಿಲ್ಲದ ಎಲ್ಲಾ ಮನೆಗಳಿಗೂ ಸಹಾ ವಿದ್ಯುತ್ ನೀಡಬೇಕಾಗಿದ್ದುದು ಇಲಾಖೆಯ ಮೊದಲ ಆದ್ಯತೆಯಾಗಿದ್ದು ನಿರ್ಲಕ್ಷ ತೋರಿಸಬೇಡಿರೆಂದು ವಿದ್ಯುತ್ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

    ಡೋಂಗ್ರಿ ಗ್ರಾಮ ಪಂಚಾಯತದ 5 ಗ್ರಾಮಗಳಿಗೆ ಅಂಕೋಲಾ ತಾಲೂಕಿನಿಂದ ಯಾವುದೇ ಸಾರಿಗೆ ಸಂಪರ್ಕವಿಲ್ಲ, ಆದ್ದರಿಂದ  ನಮಗೆ ಅನಾಥ ಪ್ರಜ್ಷೆ ಕಾಡುತ್ತಿದೆ, ಅಂಕೋಲಾ ತಾಲೂಕಿನಿಂದ ಗುಳ್ಳಾಫುರ ಮಾರ್ಗವಾಗಿ ಕಮ್ಮಾಣಿಗೆ ಸಾರಿಗೆ ಬಸ್ ಸಂಚಾರವನ್ನು  ಪ್ರಾರಂಭಿಸಬೇಕೆಂದು ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ನಾಗರಿಕರು ಆಗ್ರಹಿಸಿದಂತೆ ಶಾಸಕರು ಸ್ಥಳದಲ್ಲಿ ಹಾಜರಿದ್ದ ಅಂಕೋಲಾ ಬಸ್ ಘಠಕದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.ವಿವಿಧ ಇಲಾಖಾವಾರು ಸುಧೀರ್ಘವಾಗಿ ಚಚರ್ಿಸಿ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಸಬೆಯಲ್ಲಿ ಡೋಂಗ್ರಿ ಗ್ರಾಮ ಪಂಚಾಯತ ಅಧ್ಯಕ್ಷ ಗೋಪಣ್ಣ ವೈದ್ಯ, ಜಿಲ್ಲಾ ಪಂಚಾಯತ ಸದಸ್ಯ ಜಗದೀಶ ನಾಯಕ, ತಾಪಂ ಕಾರ್ಯನಿವರ್ಾಹಕ ಅಧಿಕಾರಿಗಳು , ತಾಪಂ ಸದಸ್ಯೆ ವೀಣಾ ಸಿದ್ದಿ, ಗೌರಿ ಸಿದ್ದಿ, ಗ್ರಾಮ ಪಂಚಾಯತದ ಸದಸ್ಯರು ಉಪಸ್ಥಿತರಿದ್ದರು.ಪಂಚಾಯತ ಅಭಿವೃಧ್ಧಿ ಅಧಿಕಾರಿ ಗಿರೀಶ ನಾಯಕ ಸ್ವಾಗತಿಸಿ ವಂದಿಸಿದರು.ಸಭೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬೇಬಿ ಸಂಜನಾ ಸಂಜೀವ ನಾಯಕ ಇವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.

    ಇದೇ ಸಂದರ್ಭದಲ್ಲಿ ಶಾಸಕರು ವೈದ್ಯಹೆಗ್ಗಾರ ಶಾಲೆಗೆ  ಮಂಜೂರಾದ ನೂತನ ಕೊಠಡಿಯ ಅಡಿಗಲ್ಲು ಶಂಕುಸ್ಥಾಪನೆ, ಹಳವಳ್ಳಿ ಕಮ್ಮಾಣೀ  ರಸ್ತೆಯ ಕಾಮಗಾರಿ ಶಂಕುಸ್ಥಾಪನೆ, ಕಲ್ಲೇಶ್ವರ ಪ್ರೌಢಶಾಲೆಯ ಸಬಾಭವನ ನಿಮರ್ಾಣದ ಶಂಕುಸ್ಥಾಪನೆ ಮುಂತಾದ ಕಾಮಗಾರಿಗಳನ್ನು ನೆರವೇರಿಸಿದರಲ್ಲದೇ, ಕೂರ್ಮಗಢ ದೋಣಿ ದುರಂತದಲ್ಲಿ ಮಡಿದ ಗೀತಾ ಹುಲಸ್ವಾರ ಕುಟುಂಭವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು