ನವದೆಹಲಿ, ಡಿ 18ಕೇಂದ್ರದ
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯ ಯಾವುದೇ ರೀತಿಯ ಆತಂಕ, ತೊಂದರೆ, ಭಯ
ಪಡುವ ಅವಶ್ಯಕತೆಯಿಲ್ಲ ಎಂದು ದಿಲ್ಲಿಯ ಜಾಮಾ
ಮಸೀದಿಯ ಶಾಹಿ ಇಮಾಮ್ ಅಭಿಪ್ರಾಯ ಪಟ್ಟಿದ್ದಾರೆ.ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪ್ರತಿಭಟನೆ ಜನರ ಹಕ್ಕು
ಎಂದ ಅವರು, ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ,
ಹಿಂಸಾಚಾರ ವ್ಯಾಪಿಸಿರುವಾಗ ಶಾಹಿ ಇಮಾಮ್ ಅವರ ಈ ಹೇಳಿಕೆಗೆ ರಾಜಕೀಯವಾಗಿಯೂ ಬಹಳ ಮಹತ್ವ ಬಂದಿದೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು ನಿಜ, ಯಾರೊಬ್ಬರು
ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು ನಿಯಂತ್ರಿಸುವುದು
ಸಹ ಮುಖ್ಯವಾಗಿದೆ. ಭಾವುಕತೆ, ಭಾವನೆಯನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು
ಕೂಡಾ ಅಷ್ಟೇ ಮುಖ್ಯ ಎಂದು ಇಮಾಮ್ ಸೈಯದ್ ಅಹ್ಮದ್ ಬುಖಾರಿ ನೀಡಿದ್ದಾರೆ ಎನ್ನಲಾದ ಹೇಳಿಕೆಯ ವಿಡಿಯೋವನ್ನು ಖಾಸಗಿ ಟಿವಿವಾಹಿನಿಯೊಂದು ಪ್ರಸಾರ
ಮಾಡಿದೆ.