ಮೂಡಲಗಿ 28: ತಾಲೂಕಿನ ಸುಣಧೋಳಿ ಶ್ರೀ ಜಡಿಸಿದ್ಧೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ಮುಂದಿನ ಐದು ವರ್ಷಗಳ ಅವಧಿಗೆ ಸೋಮವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮುರಿಗೆಪ್ಪ ಶಿವಲಿಂಗಪ್ಪ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಶಂಕರ ಕಾಳಪ್ಪ ಪತ್ತಾರ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧೀಕಾರಿ ಆನಂದ ಹೇರೆಕರ ತಿಳಿಸಿದ್ದಾರೆ.
ಈ ಸಮಯದಲ್ಲಿ ನಿರ್ದೇಶಕರಾದ ಚಂದ್ರಶೇಖರ ಅ.ಗಾಣಿಗೇರ, ಪ್ರಭಾಕರ ಬ.ನರಗುಂದ, ಬಸವರಾಜ ಶಿ.ಮದಬಾವಿ, ಶಿವಾನಂದ ಶಿ.ವಾಲಿ, ಬಸವರಾಜ ಲಿಂ.ಪಾಟೀಲ, ಬಾಗವ್ವ ಮಾ.ದೇವನಗಳ, ಕೆಂಪವ್ವಾ ವಿ.ಬಾಗೋಜಿ, ರವೀಂದ್ರ ಕ.ಕಮತಿ, ಭಿಮಣ್ಣಾ ಬಾ.ಹೊಟ್ಟಿಹೊಳಿ, ಮಾರುತಿ ಬಾ.ಭಜಂತ್ರಿ, ನಾಗರಾಜ ಕಾ.ಮಾಳಗಿ ಮತ್ತು ಗ್ರಾಮದ ಮುಖಂಡರು, ಸೊಸಾಯಿಟಿಯ ಪ್ರಧಾನ ಕಾರ್ಯದರ್ಶಿ ಮಹಾದೇವ ರಬಕವಿ, ಸಹ ಕಾರ್ಯದರ್ಶಿ ದುಂರದುಂಡೆಪ್ಪ ನಾವಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಸತ್ಕರಿಸಿ ಗೌರವಿಸಿದರು.