ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ: ಮುಂಬೈ ನಲ್ಲಿ ಆರೋಪಿ ಸೆರೆ

ಮುಂಬೈ ,ಮೇ 24,ಬಾಂಬ್ ಸ್ಪೋಟಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ಪಡೆ   ಬಂಧಿಸುವಲ್ಲಿ ಯಶಸ್ವಿಯಾಗಿದೆ.  ಬಂಧಿತನನ್ನು ಕಮ್ರಾನ್ ಅಮೀನ್ ಖಾನ್ (25) ಎಂದು ಗುರುತಿಸಲಾಗಿದೆ. ಆರೋಪಿ ಅಮೀನ್ ಖಾನ್, ವಾಟ್ಸಪ್ ಮೂಲಕ ಉತ್ತರ ಪ್ರದೇಶ ರಾಜಧಾನಿ ಲಖನೌದ ಪೊಲೀಸ್ ಮುಖ್ಯ ಕಚೇರಿಯ ಸಾಮಾಜಿಕ ಸಹಾಯವಾಣಿಗೆಬೆದರಿಕೆ ಸಂದೇಶ ರವಾನಿಸಿದ್ದ.ಸಮುದಾಯವೊಂದನ್ನು ಗುರಿಯಾಗಿಸುತ್ತಿರುವ ಸಿಎಂ ಯೋಗಿಯನ್ನು ಬಾಂಬ್ ಸ್ಪೋಟಿಸಿ ಹತ್ಯೆ ಮಾಡುವ ಸಂದೇಶ ಕಳಿಸಿದ್ದ  ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಆರೋಪಿಯ ಜಾಲವನ್ನು ಪತ್ತೆ ಹಚ್ಚಲು ವ್ಯಾಪಕ  ಶೋಧನೆ  ಆರಂಭಿಸಿದಾಗ ಆರೋಪಿ ಮುಂಬೈನಲ್ಲೆ  ಸಿಕ್ಕಿಬಿದ್ದಿದ್ದಾನೆ.